6 ಅಡಿ ಎತ್ತರ, 140 ಕೆಜಿ ತೂಕ... ಕ್ರಿಕೆಟ್‌ ಲೋಕದಲ್ಲೇ ಅತಿ ದಡೂತಿ ಕ್ರಿಕೆಟಿಗನೀತ! ಕೇವಲ 16 ರನ್‌ಗೆ 5 ವಿಕೆಟ್‌ ಕಿತ್ತು ಮಿಂಚಿದ ಈ ದೈತ್ಯ ಬೌಲರ್ ಯಾರು ಗೊತ್ತಾ?

Rahkeem Cornwall: ಈ ಬೌಲರ್ ಬೇರೆ ಯಾರೂ ಅಲ್ಲ, ಸಿಪಿಎಲ್ ಇತಿಹಾಸದಲ್ಲಿ ಹಿಂದೆಂದೂ ಕಾಣದಂತಹ ಸಾಧನೆಯನ್ನು ಮಾಡಿದ ಪ್ರಸಿದ್ಧ ವೆಸ್ಟ್ ಇಂಡೀಸ್ ಬೌಲರ್ ರಹಕೀಮ್ ಕಾರ್ನ್‌ವಾಲ್. 6 ಅಡಿ ಎತ್ತರ ಮತ್ತು 140 ಕೆಜಿ ತೂಕದ ರಹಕೀಮ್ ಕಾರ್ನ್‌ವಾಲ್ ಸಿಪಿಎಲ್‌ʼನಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ.  

Written by - Bhavishya Shetty | Last Updated : Sep 19, 2024, 02:46 PM IST
    • ವೆಸ್ಟ್ ಇಂಡೀಸ್‌ʼನಲ್ಲಿ ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) 2024 ಸದ್ಯ ನಡೆಯುತ್ತಿದೆ
    • ಆಗಸ್ಟ್ 29 ರಿಂದ ಆರಂಭವಾದ ಈ ಲೀಗ್ʼನಲ್ಲಿ ಇದುವರೆಗೆ 18 ಪಂದ್ಯಗಳು ನಡೆದಿವೆ
    • ಸಿಪಿಎಲ್ ಇತಿಹಾಸದಲ್ಲಿ ಸಾಧನೆ ಮಾಡಿದ ಪ್ರಸಿದ್ಧ ವೆಸ್ಟ್ ಇಂಡೀಸ್ ಬೌಲರ್ ರಹಕೀಮ್ ಕಾರ್ನ್‌ವಾಲ್
6 ಅಡಿ ಎತ್ತರ, 140 ಕೆಜಿ ತೂಕ... ಕ್ರಿಕೆಟ್‌ ಲೋಕದಲ್ಲೇ ಅತಿ ದಡೂತಿ ಕ್ರಿಕೆಟಿಗನೀತ! ಕೇವಲ 16 ರನ್‌ಗೆ 5 ವಿಕೆಟ್‌ ಕಿತ್ತು ಮಿಂಚಿದ ಈ ದೈತ್ಯ ಬೌಲರ್ ಯಾರು ಗೊತ್ತಾ? title=
File Photo

Rahkeem Cornwall: ವೆಸ್ಟ್ ಇಂಡೀಸ್‌ʼನಲ್ಲಿ ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) 2024 ಸದ್ಯ ನಡೆಯುತ್ತಿದ್ದು, ಈ ಬಗ್ಗೆ ವಿಶ್ವದೆಲ್ಲೆಡೆ ಭಾರೀ ಮಾತುಗಳು ಕೇಳಿಬರುತ್ತಿದೆ. ಆಗಸ್ಟ್ 29 ರಿಂದ ಆರಂಭವಾದ ಈ ಲೀಗ್ʼನಲ್ಲಿ ಇದುವರೆಗೆ 18 ಪಂದ್ಯಗಳು ನಡೆದಿವೆ. ಸೆಪ್ಟೆಂಬರ್ 17 ರಂದು, ಕೆನ್ಸಿಂಗ್ಟನ್ ಓವಲ್‌ʼನಲ್ಲಿ ಬಾರ್ಬಡೋಸ್ ರಾಯಲ್ಸ್ ಮತ್ತು ಸೇಂಟ್ ಕಿಟ್ಸ್ ಮತ್ತು ನೆವಿಸ್ ಪೇಟ್ರಿಯಾಟ್ಸ್ ನಡುವೆ ರೋಚಕ ಪಂದ್ಯ ನಡೆದಿತ್ತು. ಇದರಲ್ಲಿ ಓರ್ವ ಬೌಲರ್ ಇತಿಹಾಸ ಸೃಷ್ಟಿಸಿದರು.

ಇದನ್ನೂ ಓದಿ: ಟಿ20 ಕ್ರಿಕೆಟ್ʼನಲ್ಲಿ ತ್ರಿಶತಕ ಬಾರಿಸಿದ ವಿಶ್ವದ ಒಬ್ಬನೇ ಒಬ್ಬ ಆಟಗಾರ ಯಾರು ಗೊತ್ತಾ? ಈತ ಭಾರತದವನೇ... 39 ಸಿಕ್ಸರ್‌, 14 ಬೌಂಡರಿ ಬಾರಿಸಿದ್ದ ಸ್ಟಾರ್‌ ಕ್ರಿಕೆಟಿಗನೀತ

ಈ ಬೌಲರ್ ಬೇರೆ ಯಾರೂ ಅಲ್ಲ, ಸಿಪಿಎಲ್ ಇತಿಹಾಸದಲ್ಲಿ ಹಿಂದೆಂದೂ ಕಾಣದಂತಹ ಸಾಧನೆಯನ್ನು ಮಾಡಿದ ಪ್ರಸಿದ್ಧ ವೆಸ್ಟ್ ಇಂಡೀಸ್ ಬೌಲರ್ ರಹಕೀಮ್ ಕಾರ್ನ್‌ವಾಲ್. 6 ಅಡಿ ಎತ್ತರ ಮತ್ತು 140 ಕೆಜಿ ತೂಕದ ರಹಕೀಮ್ ಕಾರ್ನ್‌ವಾಲ್ ಸಿಪಿಎಲ್‌ʼನಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ.

ಬಾರ್ಬಡೋಸ್ ರಾಯಲ್ಸ್ ಬೌಲರ್ ರಹಕೀಮ್ ಕಾರ್ನ್‌ವಾಲ್ ಸೇಂಟ್ ಕಿಟ್ಸ್ ಮತ್ತು ನೆವಿಸ್ ಪೇಟ್ರಿಯಾಟ್ಸ್ ವಿರುದ್ಧ ಅದ್ಭುತವಾಗಿ ಬೌಲಿಂಗ್ ಮಾಡಿದ್ದಲ್ಲದೆ, ಏಕಾಂಗಿಯಾಗಿ ಅರ್ಧ ತಂಡವನ್ನು ಹೊರಹಾಕಿದ್ದರು. 4 ಓವರ್ ಗಳಲ್ಲಿ ಕೇವಲ 16 ರನ್ ನೀಡಿ 5 ವಿಕೆಟ್ ಪಡೆದು ಸಿಪಿಎಲ್ ʼಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.  ಇದು ಟಿ20 ಕ್ರಿಕೆಟ್‌ʼನಲ್ಲಿ ರಹಕೀಮ್ ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನವಾಗಿದೆ.

ಇದನ್ನೂ ಓದಿ: 64 ನೇ ವಯಸ್ಸಿನಲ್ಲಿ ಖ್ಯಾತ ನಟಿ ಮದುವೆ.. ಶ್ರೀಮಂತ ಉದ್ಯಮಿ ಜೊತೆ 3 ನೇ ಬಾರಿ ಸಪ್ತಪದಿ ತುಳಿದ ಸ್ಟಾರ್‌ ಹೀರೋಯಿನ್!‌

ರಹಕೀಮ್ ಅವರು ಕೆರಿಬಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ 5 ವಿಕೆಟ್ ಪಡೆದ ವಿಶ್ವದ 10 ನೇ ಬೌಲರ್ ಮತ್ತು ವೆಸ್ಟ್ ಇಂಡೀಸ್ʼನ ನಾಲ್ಕನೇ ಬೌಲರ್ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಸಿಪಿಎಲ್ ಇತಿಹಾಸದಲ್ಲಿ ವೆಸ್ಟ್ ಇಂಡೀಸ್ ಬೌಲರ್‌ʼನ ಅತ್ಯುತ್ತಮ ಪ್ರದರ್ಶನ ಇದಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News