Ravindra Jadeja apologized: ಗುಜರಾತ್ ನ ರಾಜ್ ಕೋಟ್ ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ತಂಡಕ್ಕೆ ಆಘಾತ ಕಾದಿತ್ತು. ಜೈಸ್ವಾಲ್, ಶುಭಮನ್ ಗಿಲ್, ಪಟಿದಾರ್ ಅಲ್ಪ ರನ್ ಗಳಿಸಿ ಔಟಾದರು. ಇದಾದ ಬಳಿಕ ಮೈದಾನಕ್ಕಿಳಿದ ಜಡೇಜಾ ಹಾಗೂ ನಾಯಕ ರೋಹಿತ್ ಜತೆಗೂಡಿ ತಂಡವನ್ನು ಕುಸಿತದಿಂದ ಪಾರು ಮಾಡಿದರು.


COMMERCIAL BREAK
SCROLL TO CONTINUE READING

11ನೇ ಟೆಸ್ಟ್ ಶತಕ ಪೂರೈಸಿದ ರೋಹಿತ್, ಟೆಸ್ಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದರು. ರೋಹಿತ್ 131 ರನ್ ಗಳಿಸಿ ಔಟಾದರೂ, ನಂತರ ಬಂದ ಸರ್ಫರಾಜ್‌ ಖಾನ್ ಭರ್ಜರಿ ಬೌಲಿಂಗ್ ಮಾಡಿದರು... ಆಟದ ಅಂತ್ಯದ ವೇಳೆಗೆ, ಸರ್ಫರಾಜ್‌ ಖಾನ್ ಜಡೇಜಾ ಅವರ ಸಣ್ಣ ತಪ್ಪಿನಿಂದಾಗಿ 62 ರನ್ ಗಳಿಸಿ ರನೌಟ್ ಆದರು. 


ಇದನ್ನೂ ಓದಿ-ಸಚಿನ್.. ಗಂಗೂಲಿ ಸೇರಿದಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್‌ಗಳಿವರು!


ಆಲ್ ರೌಂಡರ್ ರವೀಂದ್ರ ಜಡೇಜಾ 99 ರನ್ ಗಳಿಸಿ ಶತಕದ ಹಾದಿಯಲ್ಲಿದ್ದರು. ಆಗ ಜಡೇಜಾ ಅವರ ತಪ್ಪಿನಿಂದ ಸರ್ಫರಾಜ್ ಖಾನ್ ರನೌಟ್ ಆದರು. ಸದ್ಯ ಸರ್ಬರಾಜ್ ಖಾನ್ ರನ್ ಔಟ್ ಬಗ್ಗೆ ರವೀಂದ್ರ ಜಡೇಜಾ ವಿಷಾದ ವ್ಯಕ್ತಪಡಿಸಿದ್ದಾರೆ.


"ನನ್ನ ತಪ್ಪು ಕರೆಗಾಗಿ ಕ್ಷಮಿಸಿ ಮತ್ತು ನೀವು ಚೆನ್ನಾಗಿ ಆಡಿದ್ದೀರಿ" ಎಂದು ಅವರು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದೆಲ್ಲರ ಮಧ್ಯೆ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದಲ್ಲಿ ಆಡುವುದು ನನ್ನ ಜೀವನದ ಹೆಮ್ಮೆಯ ಕ್ಷಣ ಎಂದು ಸರ್ಫರಾಜ್ ಖಾನ್ ರನೌಟ್ ಬಗ್ಗೆಯೂ ಮಾತನಾಡಿದ್ದಾರೆ..  ಆಟದಲ್ಲಿ ಇದು ಸಹಜ. ಹೀಗೆ ದೀರ್ಘ ಕಾಲ ಮೈದಾನದಲ್ಲಿದ್ದರೆ ರನ್ ತಾನಾಗಿಯೇ ಬರುತ್ತವೆ ಎಂದು ಸಲಹೆ ನೀಡಿದ ಜಡೇಜಾ ಅವರಿಗೆ ಧನ್ಯವಾದ ಹೇಳಬೇಕು ಎಂದು ಸರ್ಫರಾಜ್‌ ಹೇಳಿದ್ದಾರೆ. ಮೊದಲ ದಿನದಾಟದ ಅಂತ್ಯಕ್ಕೆ ಭಾರತ ತಂಡ 5 ವಿಕೆಟ್‌ಗೆ 326 ರನ್ ಸೇರಿಸಿದೆ.


ಇದನ್ನೂ ಓದಿ-ಇಂಡಿಯಾ ಟೆಸ್ಟ್ ಕ್ಯಾಪ್ ಮಹತ್ವ ಏನ್ ಗೊತ್ತಾ? ಯಶಸ್ಸಿನಲ್ಲಿ ಈ ತಂದೆಯ ಕಣ್ಣೀರು..! 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.