IND vs WI 1st ODI: ಸ್ಟಾರ್ ಇಂಡಿಯಾ ಆಲ್‌ ರೌಂಡರ್ ರವೀಂದ್ರ ಜಡೇಜಾ ಕಳೆದ ದಿನ ಬಾರ್ಬಡೋಸ್‌ ನಲ್ಲಿ ನಡೆದ ಸರಣಿಯ ಆರಂಭಿಕ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್‌ ಗಳನ್ನು ಪಡೆದ ಕಪಿಲ್ ದೇವ್ ಅವರ ದಾಖಲೆಯನ್ನು ಮುರಿದಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಏಕದಿನ ಪಂದ್ಯ ಆರಂಭಕ್ಕೂ ಮುನ್ನ ಬಿಸಿಸಿಐನಿಂದ ಶಾಕ್! Team Indiaದಿಂದ ಈ ಸ್ಟಾರ್ ಬೌಲರನ್ನು ಹೊರಗಿಟ್ಟ ಸಮಿತಿ!


ವೆಸ್ಟ್ ಇಂಡೀಸ್ ವಿರುದ್ಧದ ಜಡೇಜಾ ಆಡಿದ್ದು 29 ODIಗಳನ್ನು. ಇದರಲ್ಲಿ 41 ವಿಕೆಟ್‌ ಕಬಳಿಸಿದ್ದಾರೆ. ಈ ಮೂಲಕ ಭಾರತದ ಮಾಜಿ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರ ದಾಖಲೆಯನ್ನು ಸರಿಗಟ್ಟಿ ಮೂರನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ. 38 ಪಂದ್ಯಗಳಲ್ಲಿ 44 ವಿಕೆಟ್ ಕಬಳಿಸಿದ ಕರ್ಟ್ನಿ ವಾಲ್ಶ್ ಅಗ್ರಸ್ಥಾನದಲ್ಲಿದ್ದು, 43 ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡಿದ ಕಪಿಲ್ ದೇವ್ ನಂತರದ ಸ್ಥಾನದಲ್ಲಿದ್ದಾರೆ.


ಬಾರ್ಬಡೋಸ್‌’ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಮೊದಲ ODI ನ ಮೂರನೇ ವಿಕೆಟ್ ಪಡೆಯುವ ಮೂಲಕ ಜಡೇಜಾ 18 ನೇ ಓವರ್‌’ನಲ್ಲಿ ರೊಮಾರಿಯೋ ಶೆಫರ್ಡ್ ಅವರನ್ನು ಔಟ್ ಮಾಡಿದರು. ಇದೇ ಸಂದರ್ಭದಲ್ಲಿ ಕಪಿಲ್ ದೇವ್ ಅವರ ದಾಖಲೆಯನ್ನು ಮುರಿದರು. ಜಡೇಜಾ ಅವರ ವೃತ್ತಿಜೀವನದ ಅತ್ಯುತ್ತಮ ODI ಅಂಕಿಅಂಶಗಳೆಂದರೆ 36 ರನ್ ಗೆ 5 ವಿಕೆಟ್ ಕಬಳಿಸಿರುವುದು. ಅದು ಪ್ರಸ್ತುತ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಸಂಭವಿಸಿದೆ.


 ಈ ನಿರ್ದಿಷ್ಟ ತಂಡದ ವಿರುದ್ಧ ಜಡೇಜಾ ಪ್ರತೀ ಬಾರಿ ಅಸಾಧಾರಣವಾಗಿ ಉತ್ತಮ ಪ್ರದರ್ಶನ ನೀಡುವುದನ್ನು ಕಾಣಬಹುದು. ಅವರ ಬೌಲಿಂಗ್ ಸಾಮರ್ಥ್ಯದ ಜೊತೆಗೆ, ಜಡೇಜಾ ಅವರ ಬ್ಯಾಟಿಂಗ್ ಕೌಶಲ್ಯಕ್ಕೂ ಹೆಸರುವಾಸಿಯಾಗಿದ್ದಾರೆ. ಇನ್ನು ಇದೀಗ ಕಪಿಲ್ ದೇವ್ ಅವರ ಮತ್ತೊಂದು ದಾಖಲೆಯನ್ನು ಸರಿಗಟ್ಟಲು ಜಡೇಜಾ ಹವಣಿಸುತ್ತಿದ್ದಾರೆ. ಅದೇನೆಂದರೆ ವಿದೇಶಿ ನೆಲದಲ್ಲಿ ಕಪಿಲ್ ODI ಕ್ರಿಕೆಟ್‌ನಲ್ಲಿ 1,000 ರನ್ ಮತ್ತು 50 ವಿಕೆಟ್‌ ಗಳನ್ನು ಗಳಿಸಿದ್ದಾರೆ. ಜಡೇಜಾ ಈಗಾಗಲೇ 1,125 ODI ರನ್‌ಗಳನ್ನು ಗಳಿಸಿದ್ದಾರೆ. ಆದರೆ ಈ ಪಟ್ಟಿಯಲ್ಲಿ ಕಪಿಲ್ ದೇವ್ ಅವರನ್ನು ಸೇರಲು ಅವರಿಗೆ ಇನ್ನೂ ಮೂರು ವಿಕೆಟ್‌ ಗಳ ಅಗತ್ಯವಿದೆ.


ಇದನ್ನೂ ಓದಿ: ಸಚಿನ್ ದಾಖಲೆ ಮೇಲೆ ರೋಹಿತ್ ಕಣ್ಣು! ODIನಲ್ಲಿ ‘ಮಾಸ್ಟರ್ ಬ್ಲಾಸ್ಟರ್’ ರೆಕಾರ್ಡ್ ಬ್ರೇಕ್ ಮಾಡ್ತಾರಾ ಹಿಟ್’ಮ್ಯಾನ್?


2013 ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ, ಜಡೇಜಾ ಪ್ರಮುಖ ವಿಕೆಟ್ ಟೇಕರ್ ಆಗಿದ್ದರು ಮತ್ತು ಅಂತಿಮ ವಿಜೇತ ತಂಡದ ಸದಸ್ಯರಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ