ಏಕದಿನ ಪಂದ್ಯ ಆರಂಭಕ್ಕೂ ಮುನ್ನ ಬಿಸಿಸಿಐನಿಂದ ಶಾಕ್! Team Indiaದಿಂದ ಈ ಸ್ಟಾರ್ ಬೌಲರನ್ನು ಹೊರಗಿಟ್ಟ ಸಮಿತಿ!

Mohammed Siraj Cricket News: ಸಿರಾಜ್ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ತಮ್ಮ ವೃತ್ತಿಜೀವನದ ಅತೀ ದೊಡ್ಡ ಸಾಧನೆ ಮಾಡಿದ್ದರು, ಎರಡು ಬಾರಿ 5 ವಿಕೆಟ್ ಕಬಳಿಸಿದ ದಾಖಲೆ ಸಿರಾಜ್ ಪಾಲಿಗೆ ಸೇರಿದೆ.

Written by - Bhavishya Shetty | Last Updated : Jul 27, 2023, 02:03 PM IST
    • ಈ ಸರಣಿಯಲ್ಲಿ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರಿಗೆ ವಿಶ್ರಾಂತಿ
    • ಈ ಹಿನ್ನೆಲೆಯಲ್ಲಿ ಅವರನ್ನು ವಾಪಾಸ್ ಭಾರತಕ್ಕೆ ಕಳುಹಿಸಲಾಗಿದೆ.
    • ಏಕದಿನ ಸರಣಿಯಿಂದ ವಿಶ್ರಾಂತಿ ಪಡೆದ ನಂತರ ವೆಸ್ಟ್ ಇಂಡೀಸ್‌’ನಿಂದ ತವರಿಗೆ ಮರಳಿದ್ದಾರೆ
ಏಕದಿನ ಪಂದ್ಯ ಆರಂಭಕ್ಕೂ ಮುನ್ನ ಬಿಸಿಸಿಐನಿಂದ ಶಾಕ್! Team Indiaದಿಂದ ಈ ಸ್ಟಾರ್ ಬೌಲರನ್ನು ಹೊರಗಿಟ್ಟ ಸಮಿತಿ! title=
Mohammed Siraj

West Indies vs India, 1st ODI: ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಇಂದು ಬಾರ್ಬಡೋಸ್‌ ನಲ್ಲಿ ಸಂಜೆ 7 ಗಂಟೆಗೆ ನಡೆಯಲಿದೆ. ಈ ನಡುವೆ ಟೀಂ ಇಂಡಿಯಾದಲ್ಲಿ ಪ್ರಮುಖ ಬದಲಾವಣೆಯ ಬಗ್ಗೆ ಸುದ್ದಿಯೊಂದು ಹೊರಬಂದಿದ್ದು, ಈ ಸರಣಿಯಲ್ಲಿ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ಈ ಹಿನ್ನೆಲೆಯಲ್ಲಿ ಅವರನ್ನು ವಾಪಾಸ್ ಭಾರತಕ್ಕೆ ಕಳುಹಿಸಲಾಗಿದೆ.

ಇದನ್ನೂ ಓದಿ; ODI Asia Cup ಇತಿಹಾಸದಲ್ಲಿ ಅತೀ ಹೆಚ್ಚು ಬಾರಿ ಗೆಲುವು ಕಂಡ Team India ನಾಯಕ ಯಾರು ಗೊತ್ತಾ?

ಇ ಎಸ್‌ ಪಿ ಎನ್ ಕ್ರಿಕ್‌ ಇನ್ಫೋ ವರದಿ ಪ್ರಕಾರ, ಟೀಂ ಇಂಡಿಯಾದ ಸ್ಟಾರ್ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರು ಏಕದಿನ ಸರಣಿಯಿಂದ ವಿಶ್ರಾಂತಿ ಪಡೆದ ನಂತರ ವೆಸ್ಟ್ ಇಂಡೀಸ್‌’ನಿಂದ ತವರಿಗೆ ಮರಳಿದ್ದಾರೆ. ಬೌಲರ್ ಮೇಲಿನ ಕೆಲಸದ ಹೊರೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ. ಸಿರಾಜ್ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ತಮ್ಮ ವೃತ್ತಿಜೀವನದ ಅತೀ ದೊಡ್ಡ ಸಾಧನೆ ಮಾಡಿದ್ದರು, ಎರಡು ಬಾರಿ 5 ವಿಕೆಟ್ ಕಬಳಿಸಿದ ದಾಖಲೆ ಸಿರಾಜ್ ಪಾಲಿಗೆ ಸೇರಿದೆ. ಇನ್ನು ಈ ಸರಣಿಯನ್ನು ಭಾರತ 1-0 ಅಂತರದಲ್ಲಿ ವಶಪಡಿಸಿಕೊಂಡಿದೆ.

ಮೊಹಮ್ಮದ್ ಸಿರಾಜ್ ಅವರ ಸ್ಥಾನವನ್ನು ಬಿಸಿಸಿಐ ಯಾರಿಗೆ ನೀಡಿದೆ ಎಂಬುದು ಇನ್ನೂ ಪ್ರಕಟಿಸಿಲ್ಲ. ಅಕ್ಟೋಬರ್‌ ನಲ್ಲಿ ಸ್ವದೇಶಿ ODI ವಿಶ್ವಕಪ್‌ ಗೆ ಮೊದಲು, ಭಾರತವು ಆಗಸ್ಟ್ ಅಂತ್ಯದಿಂದ ಸೆಪ್ಟೆಂಬರ್ ಮಧ್ಯದವರೆಗೆ ಏಷ್ಯಾ ಕಪ್ ಮತ್ತು ಸೆಪ್ಟೆಂಬರ್‌ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ತವರು ಸರಣಿಯನ್ನು ಆಡಬೇಕಾಗಿದೆ.

ವೆಸ್ಟ್ ಇಂಡೀಸ್ ಬ್ಯಾಟಿಂಗ್ ಕುಸಿತಕ್ಕೆ ಕಾರಣವಾದ ಪೋರ್ಟ್ ಆಫ್ ಸ್ಪೇನ್ ಪಿಚ್‌ ನಲ್ಲಿ ಮೊದಲ ಇನ್ನಿಂಗ್ಸ್‌ ನಲ್ಲಿ ಐದು ವಿಕೆಟ್ ಗಳಿಕೆ ಸೇರಿದಂತೆ ಸಿರಾಜ್ ಎರಡು ಟೆಸ್ಟ್‌ ಗಳಲ್ಲಿ ಏಳು ವಿಕೆಟ್‌ ಗಳನ್ನು ಪಡೆದಿದ್ದರು. ಈ ಪ್ರವಾಸದ ಮೊದಲು ಅವರು ಓವಲ್‌ ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್ ಫೈನಲ್‌ ನ ಭಾಗವಾಗಿದ್ದರು, ಇದರಲ್ಲಿ ಅವರು ಮೊದಲ ಇನ್ನಿಂಗ್ಸ್‌ ನಲ್ಲಿ ನಾಲ್ಕು ಸೇರಿದಂತೆ ಒಟ್ಟು ಐದು ವಿಕೆಟ್‌ಗಳನ್ನು ಪಡೆದಿದ್ದರು.

ಇದನ್ನೂ ಓದಿ; ODIನಲ್ಲಿ ಇತಿಹಾಸ ಸೃಷ್ಟಿಸಲು ಇನ್ನೊಂದೇ ಹೆಜ್ಜೆ ಬಾಕಿ! ವಿಶ್ವದಲ್ಲಿ ನಾಲ್ವರು ಬರೆದ ಆ ದಾಖಲೆ ಮುಟ್ಟುತ್ತಾರಾ ವಿರಾಟ್?

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಐಪಿಎಲ್ 2023 ರಲ್ಲಿ ಸಿರಾಜ್ ಪ್ರಮುಖ ಪಾತ್ರ ವಹಿಸಿದ್ದರು. ಇನ್ನು ಈ ತಂಡದ ಪರ ಆಡಿದ 14 ಪಂದ್ಯಗಳಲ್ಲಿ 19 ವಿಕೆಟ್‌ ಗಳನ್ನು ಪಡೆದಿದ್ದಾರೆ,

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News