Ravindra Jadeja : ಏಷ್ಯಾಕಪ್‌ನಿಂದ ಜಡೇಜಾ ಔಟ್, ಟೀಂ ಇಂಡಿಯಾಗೆ ಈ ಆಟಗಾರ ಎಂಟ್ರಿ!
ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಗಾಯದ ಸಮಸ್ಯೆಯಿಂದ ಟೀಂ ಇಂಡಿಯಾದಿಂದ ಹೊರಗುಳಿದಿದ್ದಾರೆ. ಬಿಸಿಸಿಐ ಜಡೇಜಾ ಬದಲಿಗೆ ಆಲ್ ರೌಂಡರ್ ಒಬ್ಬರನ್ನು ತಂಡಕ್ಕೆ ಸೇರಿಸಿಕೊಂಡಿದೆ.
Ravindra Jadeja Rule Out From Asia Cup 2022 : 2022 ರ ಏಷ್ಯಾ ಕಪ್ ಪಂದ್ಯಗಳು ಆರಂಭವಾಗಿವೆ. ಈ ನಡುವೆ, ಟೀಂ ಇಂಡಿಯಾಗೆ ಭಾರಿ ಹಿನ್ನಡೆಯಾಗಿದೆ. ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಗಾಯದ ಸಮಸ್ಯೆಯಿಂದ ಟೀಂ ಇಂಡಿಯಾದಿಂದ ಹೊರಗುಳಿದಿದ್ದಾರೆ. ಬಿಸಿಸಿಐ ಜಡೇಜಾ ಬದಲಿಗೆ ಆಲ್ ರೌಂಡರ್ ಒಬ್ಬರನ್ನು ತಂಡಕ್ಕೆ ಸೇರಿಸಿಕೊಂಡಿದೆ.
ಗಾಯದಿಂದಾಗಿ ತಂಡದಿಂದ ಹೊರಗುಳಿದ ಜಡೇಜಾ
ರವೀಂದ್ರ ಜಡೇಜಾ ತಮ್ಮ ಬಲ ಮೊಣಕಾಲಿಗೆ ಗಾಯ ಮಾಡಿಕೊಂಡಿದ್ದು, 2022ರ ಏಷ್ಯಾಕಪ್‌ನಿಂದ ಹೊರಗುಳಿದಿದ್ದಾರೆ. ಸದ್ಯ ಅವರು ಬಿಸಿಸಿಐ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿದ್ದಾರೆ. ಬಿಸಿಸಿಐ ನ್ಯೂಸ್ ಪ್ರಕಟಣೆಯ ಮೂಲಕ ಇದನ್ನು ಖಚಿತಪಡಿಸಿದೆ. ಏಷ್ಯಾ ಕಪ್ 2022 ರಲ್ಲಿ ಟೀಂ ಇಂಡಿಯಾ ಪರ ಇದುವರೆಗೆ ಎರಡು ಪಂದ್ಯಗಳನ್ನು ಆಡಿದ್ದು, ರವೀಂದ್ರ ಜಡೇಜಾ ಈ ಎರಡೂ ಪಂದ್ಯಗಳಲ್ಲಿ ಮ್ಯಾಚ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.
ಇದನ್ನೂ ಓದಿ : Legends League Cricket 2022 : ಲೆಜೆಂಡ್ಸ್ ಲೀಗ್ ಈ ಎರಡು ಟೀಂಗಳ ಕ್ಯಾಪ್ಟನ್ ಆಗಿ ಇರ್ಫಾನ್-ಹರ್ಭಜನ್!
ಈ ಆಲ್ ರೌಂಡರ್ ಗೆ ಸಿಕ್ಕಿದೆ ಚಾನ್ಸ್
ರವೀಂದ್ರ ಜಡೇಜಾ ಬದಲಿಗೆ ಆಲ್‌ರೌಂಡರ್ ಅಕ್ಷರ್ ಪಟೇಲ್ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ. ಅಕ್ಷರ್ ಪಟೇಲ್ ಅವರ ಇತ್ತೀಚಿನ ಅದ್ಬುತ ಪ್ರದರ್ಶನ ನೀಡುತ್ತಿದ್ದಾರೆ. ಅಕ್ಷರ್ ಪಟೇಲ್ ಏಷ್ಯಾ ಕಪ್ 2022 ರಲ್ಲಿ ಸ್ಟ್ಯಾಂಡ್‌ಬೈ ಆಟಗಾರನಾಗಿ ಸ್ಥಾನ ಪಡೆದರು, ಆದರೆ ಅವರು ಈಗ ಮೇನ್ ತಂಡವನ್ನು ಸೇರಿಕೊಂಡಿದ್ದಾರೆ.
ಟೀಂ ಇಂಡಿಯಾ ಗೆಲುವಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಹಾಗೆ, ರವೀಂದ್ರ ಜಡೇಜಾ ಹಾಂಗ್ ಕಾಂಗ್ ವಿರುದ್ಧ ಅತ್ಯಂತ ಮಿತವ್ಯಯದ ಬೌಲಿಂಗ್ ಮಾಡಿದರು. ರವೀಂದ್ರ ಜಡೇಜಾ 4 ಓವರ್‌ಗಳಲ್ಲಿ 3.75 ಎಕಾನಮಿಯಲ್ಲಿ 15 ರನ್ ನೀಡಿ 1 ವಿಕೆಟ್ ಪಡೆದರು. ಅವರು ಫೀಲ್ಡಿಂಗ್ ಸಮಯದಲ್ಲಿ ಅದ್ಭುತವಾದ ಥ್ರೋ ಅನ್ನು ಸಹ ಹೊಡೆದರು, ಇದು ಪಂದ್ಯವನ್ನು ಟೀಂ ಇಂಡಿಯಾ ಕಡೆಗೆ ತಿರುಗಿಸಿತು.
ಇದನ್ನೂ ಓದಿ : Team India : ಟೀಂ ಇಂಡಿಯಾಗೆ ಬಿಗ್ ಶಾಕ್ : ಗಾಯದ ಕಾರಣ ಸರಣಿಯಿಂದ ಈ ಬೌಲರ್ ಔಟ್!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.