ʼಇವನಿಗೆ ಮದುವೆ ಆದ್ರೂ ಮಾಡ್ರೋ ಸುಧಾರಿಸ್ತಾನೆʼ : ಧವನ್ ಕಾಟಕ್ಕೆ ಸುಸ್ತಾದ ಜಡೇಜಾ..!
ಟೀಂ ಇಂಡಿಯಾ ಕ್ರಿಕೆಟರ್ಸ್ ರವೀಂದ್ರ ಜಡೇಜಾ ಮತ್ತು ಶಿಖರ್ ಧವನ್ ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿ ಇರ್ತಾರೆ. ಇಬ್ಬರೂ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸದಾ ಕ್ರೇಜಿ ರೀಲ್ಸ್‌ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ಇಬ್ಬರು ಸೇರಿ ಹಿಂದಿ ಡೈಲಾಗ್ ಒಂದಕ್ಕೆ ಆಕ್ಟ್ ಮಾಡಿದ್ದು, ವಿಡಿಯೋ ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿದೆ.
ಬೆಂಗಳೂರು : ಟೀಂ ಇಂಡಿಯಾ ಕ್ರಿಕೆಟರ್ಸ್ ರವೀಂದ್ರ ಜಡೇಜಾ ಮತ್ತು ಶಿಖರ್ ಧವನ್ ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿ ಇರ್ತಾರೆ. ಇಬ್ಬರೂ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸದಾ ಕ್ರೇಜಿ ರೀಲ್ಸ್‌ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ಇಬ್ಬರು ಸೇರಿ ಹಿಂದಿ ಡೈಲಾಗ್ ಒಂದಕ್ಕೆ ಆಕ್ಟ್ ಮಾಡಿದ್ದು, ವಿಡಿಯೋ ಇಂಟರ್ನೆಟ್‌ನಲ್ಲಿ ವೈರಲ್ ಆಗುತ್ತಿದೆ.
ಧವನ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ರೀಲ್ ಅನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಜಡೇಜಾ ಅವರಿಗೆ ಮದುವೆಯಾಗಲು ಸಲಹೆ ನೀಡಿದ್ದಾರೆ. ಈ ವೇಳೆ ಧವನ್ ಸಂತೋಷದಿಂದ ನೃತ್ಯ ಮಾಡುತ್ತಿದ್ದಾರೆ. ಈ ಮಧ್ಯೆ, "ಇಸ್ಕಿ ಶಾದಿ ಕರ್ವಾ ದೀಜಿಯೇ, ಸುಧಾರ್ ಜಯೇಜಾಗೆ ಜಿಮ್ಮೆದಾರಿ ಆಯೇಗಿ (ಇವನಿಗೆ ಮದುವೆ ಮಾಡ್ಬೀಡಿ ಸುಧಾರಿಸ್ತಾನೆ, ಜವಾಬ್ದಾರಿ ಬಂದ್ರೆ ಟ್ರ್ಯಾಕ್‌ಗೆ ಬರುತ್ತಾನೆ) ಎಂಬ ಬಾಲಿವುಡ್ ಸಿನಿಮಾದ ಡೈಲಾಗ್‌ಗೆ ಜಡೇಜಾ ಲಿಪ್ ಸಿಂಕ್ ಮಾಡಿದ್ದಾರೆ. ಧವನ್ "ನಹೀ ನಹಿ, ಅಭಿ ನಹಿ ಥೋಡಾ ಕರೋ ಇಂತಜಾರ್" ಎಂಬ ಅಡಿ ಬರಹ ಬರೆದುಕೊಂಡು ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: Kareena Kapoor: ಹೈಸ್ಕೂಲಲ್ಲೇ ಪ್ರೆಗ್ನೆಂಟ್ ಆಗಿದ್ರಂತೆ ಬಾಲಿವುಡ್ ಬೇಬೋ ಕರೀನಾ ಕಪೂರ್…?!
ಸದ್ಯ ಇನ್‌ಸ್ಟಾಗ್ರಾಮ್‌ನಲ್ಲಿ ಈ ರೀಲ್ ವೈರಲ್ ಆಗುತ್ತಿದೆ. ಅಭಿಮಾನಿಗಳಿಂದ ಮಾತ್ರವಲ್ಲದೆ ಭಾರತೀಯ ಕ್ರಿಕೆಟಿಗರಾದ ಅರ್ಷ್‌ದೀಪ್ ಸಿಂಗ್, ಹರ್‌ಪ್ರೀತ್ ಬ್ರಾರ್ ಮತ್ತು ಖಲೀಲ್ ಅಹ್ಮದ್ ಇತರರು ವಿಡಿಯೋಗೆ ಪ್ರತಿಕ್ರಿಯೆ ನೀಡಿದ್ದಾರೆ. ಜಡೇಜಾ ಪ್ರಸ್ತುತ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ. ಧವನ್ ಅವರನ್ನು ಭಾರತದ ಟಿ 20 ವಿಶ್ವಕಪ್ ತಂಡದಿಂದ ಹೊರಗಿಡಲಾಗಿದ್ದು, ಇಬ್ಬರು ಸೇರಿ ಕ್ರೇಜಿ ರೀಲ್ ಮಾಡಿದ್ದಾರೆ. ಏಷ್ಯಾ ಕಪ್ 2022 ರ ಸಮಯದಲ್ಲಿ ಗಾಯಗೊಂಡಿದ್ದ ಜಡೇಜಾ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.