Virat Kohli : ಆಸ್ಟ್ರೇಲಿಯಾ ಟೀಂ ಬಹಿರಂಗ ಸವಾಲು ಹಾಕಿದ ವಿರಾಟ್ ಕೊಹ್ಲಿ!

ದೀಗ ಮೂರನೇ ಹಾಗೂ ನಿರ್ಣಾಯಕ ಟಿ20 ಪಂದ್ಯ ಹೈದರಾಬಾದ್‌ನಲ್ಲಿ ಸೆಪ್ಟೆಂಬರ್ 25 ಭಾನುವಾರ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ಪ್ರವಾಸಿ ತಂಡಕ್ಕೆ ಕಿಂಗ್ ಕೊಹ್ಲಿ ಬಹಿರಂಗ ಸವಾಲು ಹಾಕಿದ್ದಾರೆ.

Written by - Channabasava A Kashinakunti | Last Updated : Sep 24, 2022, 03:40 PM IST
  • ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಆರು ವಿಕೆಟ್ ಗಳ ಜಯ
  • ಮೂರನೇ ಹಾಗೂ ನಿರ್ಣಾಯಕ ಟಿ20 ಪಂದ್ಯ ಹೈದರಾಬಾದ್‌ನಲ್ಲಿ
  • ಪ್ರವಾಸಿ ತಂಡಕ್ಕೆ ಕಿಂಗ್ ಕೊಹ್ಲಿ ಬಹಿರಂಗ ಸವಾಲು ಹಾಕಿದ್ದಾರೆ.
Virat Kohli : ಆಸ್ಟ್ರೇಲಿಯಾ ಟೀಂ ಬಹಿರಂಗ ಸವಾಲು ಹಾಕಿದ ವಿರಾಟ್ ಕೊಹ್ಲಿ! title=

Virat Kohli on Hyderabad T20 : ಶುಕ್ರವಾರ ಮಳೆಯ ನಡುವೆಯೇ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಆರು ವಿಕೆಟ್ ಗಳ ಜಯ ದಾಖಲಿಸಿತು. ಈ ಗೆಲುವಿನೊಂದಿಗೆ ಕ್ಯಾಪ್ಟನ್ ರೋಹಿತ್ ಶರ್ಮಾ ಅವರ ಅದ್ಭುತ ಇನ್ನಿಂಗ್ಸ್‌ನಿಂದ ಭಾರತ ಮೂರು ಪಂದ್ಯಗಳ ಸರಣಿಯನ್ನು 1-1 ರಲ್ಲಿ ಸಮಬಲಗೊಳಿಸಿದೆ. ಇದೀಗ ಮೂರನೇ ಹಾಗೂ ನಿರ್ಣಾಯಕ ಟಿ20 ಪಂದ್ಯ ಹೈದರಾಬಾದ್‌ನಲ್ಲಿ ಸೆಪ್ಟೆಂಬರ್ 25 ಭಾನುವಾರ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ಪ್ರವಾಸಿ ತಂಡಕ್ಕೆ ಕಿಂಗ್ ಕೊಹ್ಲಿ ಬಹಿರಂಗ ಸವಾಲು ಹಾಕಿದ್ದಾರೆ.

ರೋಹಿತ್ ಭರ್ಜರಿ ಪ್ರದರ್ಶನ

ನಾಗ್ಪುರದಲ್ಲಿ ಮಳೆಯಿಂದಾಗಿ ಸರಣಿಯ ಎರಡನೇ ಟಿ20 ಪಂದ್ಯವನ್ನು 8-8 ಓವರ್‌ಗಳಲ್ಲಿ ಮಾಡಲಾಗಿತ್ತು. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಎಂಟು ಓವರ್‌ಗಳಲ್ಲಿ 5 ವಿಕೆಟ್‌ಗೆ 90 ರನ್ ಗಳಿಸಿತ್ತು. ಇದಾದ ಬಳಿಕ ಭಾರತ ತಂಡ 7.2 ಓವರ್‌ಗಳಲ್ಲಿ ಗುರಿ ತಲುಪಿತು. ನಾಯಕ ರೋಹಿತ್ ಶರ್ಮಾ ಬಿರುಸಿನ ಆಟವಾಡುತ್ತಾ ಅಜೇಯ 46 ರನ್ ಗಳಿಸಿದರು. 20 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಸಿಕ್ಸರ್‌ಗಳನ್ನು ಬಾರಿಸಿದರು. ಸ್ಪಿನ್ನರ್ ಅಕ್ಷರ್ ಪಟೇಲ್ ಎರಡು ವಿಕೆಟ್ ಪಡೆದರು.

ಇದನ್ನೂ ಓದಿ : Video : ಪತ್ನಿಗೆ ಥ್ಯಾಂಕ್ಸ್ ಹೇಳಿ, ಕಣ್ಣೀರಿಟ್ಟು ಟೆನಿಸ್‌ ಲೋಕಕ್ಕೆ ವಿದಾಯ ಹೇಳಿದ ಫೆಡರರ್!

ಆಸ್ಟ್ರೇಲಿಯಾ ಟೀಂಗೆ ವಿರಾಟ್ ಸವಾಲು

ನಾಗ್ಪುರ ಟಿ20 ಪಂದ್ಯದಲ್ಲಿ ಭಾರತದ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಆರು ಎಸೆತಗಳನ್ನು ಆಡಿ 11 ರನ್ ಗಳಿಸಿದ್ದರು. ತಂಡದ ಗೆಲುವಿನ ನಂತರ ಸಹ ಆಟಗಾರರಂತೆ ತುಂಬಾ ಖುಷಿಯಾಗಿದ್ದರು. ಇಂದು ವಿರಾಟ್ ಕೆಲವು ಫೋಟೋಗಳನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿ, 'ಈಗ ನಿಮ್ಮನ್ನು ಹೈದರಾಬಾದ್‌ನಲ್ಲಿ ನೋಡುತ್ತೇನೆ' ಎಂದು ಬರೆದುಕೊಂಡಿದ್ದಾರೆ.

ಈವರೆಗಿನ ಸರಣಿಯಲ್ಲಿ ವಿರಾಟ್ ಕಳೆಪೆ ಪ್ರದರ್ಶನ 

ಪ್ರಸಕ್ತ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ವಿರಾಟ್ ಕೊಹ್ಲಿ ಕಳೆಪೆ ಪ್ರದರ್ಶನ ನೀಡಿದ್ದಾರೆ. ಅವರು ಎರಡು ಪಂದ್ಯಗಳಲ್ಲಿ 13 ರನ್ ಗಳಿಸಲು ಶಕ್ತರಾಗಿದ್ದಾರೆ. 11 ರನ್ ಗಳಿಸಿದ್ದ ನಾಗ್ಪುರದ ಮೊಹಾಲಿಯಲ್ಲಿ ನಡೆದ ಸರಣಿಯ ಮೊದಲ ಟಿ20 ಪಂದ್ಯದಲ್ಲಿ ಎರಡು ರನ್ ಗಳಿಸಿ ನಾಥನ್ ಎಲ್ಲಿಸ್ ಗೆ ವಿಕೆಟ್ ಒಪ್ಪಿಸಿದರು. ವಿರಾಟ್ ಏಷ್ಯಾ ಕಪ್-2022 ರ ಸೂಪರ್-4 ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ 122 ರನ್‌ಗಳ ಅಜೇಯ ಶತಕ ಹೊಡೆದರು.

ಇದನ್ನೂ ಓದಿ : India Women vs England Women 3rd ODI : ಇಂದು Ind vs Eng ಮಹಿಳಾ, 3ನೇ ODI : ಎಲ್ಲಿ ಮತ್ತು ಯಾವಾಗ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News