ನವದೆಹಲಿ : ಐಪಿಎಲ್ ಮೆಗಾ ಹರಾಜು (IPL mega auction) ಪ್ರಕ್ರಿಯೆಗಾಗಿ ವಿಶ್ವದಾದ್ಯಂತದ ಕ್ರಿಕೆಟ್ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಬಿಸಿಸಿಐ (BCCI) ಮೆಗಾ ಹರಾಜಿಗೆ 590 ಆಟಗಾರರ ಹೆಸರನ್ನು ಅಂತಿಮಗೊಳಿಸಿದೆ. ಆದರೆ,  ಐಪಿಎಲ್‌ನಿಂದ ತಮ್ಮ ಹೆಸರನ್ನು ಹಿಂತೆಗೆದುಕೊಂಡ ಅನೇಕ ಅನುಭವಿ ಆಟಗಾರರಿದ್ದಾರೆ. ಕಳೆದ ವರ್ಷ 15 ಕೋಟಿಗೆ ಬಿಕರಿಯಾಗಿದ್ದ ಆರ್‌ಸಿಬಿಯ (RCB) ಬೌಲರ್‌ನ ಹೆಸರೂ ಈ ಪಟ್ಟಿಯಲ್ಲಿದೆ. 


COMMERCIAL BREAK
SCROLL TO CONTINUE READING

ಐಪಿಎಲ್‌ನಿಂದ ಈ ಮಾರಕ ಬೌಲರ್‌ ಔಟ್ :  
ನ್ಯೂಜಿಲೆಂಡ್‌ನ ಮಾರಕ ಬೌಲರ್ ಕೈಲ್ ಜೇಮಿಸನ್ (Kyle Jamieson) ಈ ಬಾರಿ ಐಪಿಎಲ್ ಮೆಗಾ ಹರಾಜಿನಲ್ಲಿ ಭಾಗವಹಿಸುತ್ತಿಲ್ಲ. ಕಳೆದ ಬಾರಿ ಅವರನ್ನು ಆರ್‌ಸಿಬಿ ತಂಡ 15 ಕೋಟಿ ರೂ.ಗೆ ಖರೀದಿಸಿತ್ತು. IPL 2021 ರಲ್ಲಿ, ಅವರು RCB ತಂಡಕ್ಕಾಗಿ 9 ಪಂದ್ಯಗಳನ್ನು ಆಡಿದ್ದು, 9 ವಿಕೆಟ್ ಗಳನ್ನು ಕಬಳಿಸಿದ್ದರು. ಜೇಮಿಸನ್ ತನ್ನ ಮಾರಕ ಬೌಲಿಂಗ್‌ಗೆ ಹೆಸರುವಾಸಿಯಾಗಿದ್ದಾರೆ.  ಐಪಿಎಲ್‌ನಿಂದ (IPL) ಜೇಮಿಸನ್ ನಿರ್ಗಮಿಸುವ ಹಿಂದಿರುವ ಕಾರಣ ಈಗ ಬಯಲಾಗಿದೆ. 


ಇದನ್ನೂ ಓದಿ : T20I Rankings: ನಾಲ್ಕನೇ ಸ್ಥಾನಕ್ಕೆ ಏರಿದ ಕನ್ನಡಿಗ ಕೆ.ಎಲ್.ರಾಹುಲ್..! 


ನ್ಯೂಜಿಲೆಂಡ್ ( New Zealand)  ವೇಗದ ಬೌಲರ್ ಕೈಲ್ ಜೇಮಿಸನ್ , ತನ್ನ ಕುಟುಂಬದೊಂದಿಗೆ ಸಮಯ ಕಳೆಯುವ ಸಲುವಾಗಿ, ತನ್ನ ಆಟವನ್ನು ಮತ್ತಷ್ಟು ಸುಧಾರಿಸಲು ಮತ್ತು ಬಯೋ ಬಬಲ್‌ನಿಂದ ದೂರವಿರುವ ಸಲುವಾಗಿ ಈ ವರ್ಷ ಐಪಿಎಲ್‌ನಲ್ಲಿ ಆಡದಿರಲು ನಿರ್ಧರಿಸಿದ್ದಾರೆ. ಕಳೆದ 12 ತಿಂಗಳುಗಳಿಂದ ಬಯೋ ಬಬಲ್ ಮತ್ತು ಕ್ವಾರಂಟೈನ್‌ನಲ್ಲಿ ಸಾಕಷ್ಟು ಸಮಯವನ್ನು ಕಳೆದಿದ್ದಾಗಿದೆ. ಮುಂದಿನ 12 ತಿಂಗಳ ವೇಳಾಪಟ್ಟಿಯನ್ನು ನೋಡಿದರೆ, ಈಗ ತಾನು ಕುಟುಂಬದೊಂದಿಗೆ ಸಮಯ ಕಳೆಯಲು ಬಯಸುತ್ತೇನೆ ಎಂದು ಜೇಮಿಸನ್ ಹೇಳಿದ್ದಾರೆ. .


ಜೇಮಿಸನ್ ಒಬ್ಬ ಮಾರಕ ಬೌಲರ್ :
ನ್ಯೂಜಿಲೆಂಡ್‌ನ ಸ್ಟಾರ್ ಬೌಲರ್ ಕೈಲ್ ಜೇಮಿಸನ್ ತ (Kyle Jamieson) ನ್ನ ಬೌಲಿಂಗ್‌ನಿಂದ ವಿಶ್ವದಾದ್ಯಂತ ಖ್ಯಾತಿ ಹೊಂದಿದ್ದಾರೆ. ಕಿವೀಸ್ ಪರ 12 ಟೆಸ್ಟ್ ಪಂದ್ಯಗಳಲ್ಲಿ ಆಡಿ, 60 ವಿಕೆಟ್ ಪಡೆದಿರುವ ಕೈಲ್ ಜೇಮಿಸನ್, 5 ಏಕದಿನ ಪಂದ್ಯಗಳಲ್ಲಿ 5 ವಿಕೆಟ್ ಹಾಗೂ 8 ಟಿ20 ಪಂದ್ಯಗಳಿಂದ 8 ವಿಕೆಟ್ ಪಡೆದಿದ್ದಾರೆ. 


ಇದನ್ನೂ ಓದಿ : IPL 2022 Mega Auction : ಈ ಆಟಗಾರನಿಗಾಗಿ ₹20 ಕೋಟಿ ಉಳಿಸಿಕೊಂಡ RCB : ತಂಡದಿಂದ ಮಾಹಿತಿ ಸೋರಿಕೆ!


ಫೆಬ್ರವರಿ 12 ಮತ್ತು 13 ರಂದು ಮೆಗಾ ಹರಾಜು :
ಐಪಿಎಲ್ ಮೆಗಾ ಹರಾಜು (Ipl Mega Auction) ಫೆಬ್ರವರಿ 12 ಮತ್ತು 13 ರಂದು ನಡೆಯಲಿದೆ ಎಂದು ಬಿಸಿಸಿಐ ಖಚಿತಪಡಿಸಿದೆ. ಇದು 590 ಆಟಗಾರರ ಹೆಸರುಗಳನ್ನು ಹೊಂದಿದೆ. ಇವರಲ್ಲಿ 228 ಮಂದಿ ಕ್ಯಾಪ್ಡ್ ಆಟಗಾರರಾಗಿದ್ದರೆ, 355 ಆಟಗಾರರು ಅನ್‌ಕ್ಯಾಪ್ ಆಗಿದ್ದಾರೆ. IPL 2022 ರಲ್ಲಿ 10 ತಂಡಗಳು ಕಣದಲ್ಲಿರಲಿವೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.