IPL 2022 Mega Auction : ಈ ಆಟಗಾರನಿಗಾಗಿ ₹20 ಕೋಟಿ ಉಳಿಸಿಕೊಂಡ RCB : ತಂಡದಿಂದ ಮಾಹಿತಿ ಸೋರಿಕೆ!

ಮೆಗಾ ಹರಾಜಿನ ಮೊದಲು, ಮಾಜಿ ಅನುಭವಿ ಕ್ರಿಕೆಟಿಗ ಆಕಾಶ್ ಚೋಪ್ರಾ ಅವರು ಮುಂಬರುವ ಮೆಗಾ ಹರಾಜಿನಲ್ಲಿ 20 ಕೋಟಿ ರೂ.ಗೆ ಹರಾಜಾಗಲಿರುವ ಆಟಗಾರ ಎಂದು ಹೆಸರಿಸಿದ್ದಾರೆ.

Written by - Channabasava A Kashinakunti | Last Updated : Feb 2, 2022, 04:21 PM IST
  • ಐಪಿಎಲ್ 2022 ರ ಮೆಗಾ ಹರಾಜು ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ ನಡೆಯಲಿದೆ
  • ಈ ಬಾರಿ ಒಟ್ಟು 590 ಆಟಗಾರರ ಭವಿಷ್ಯ ಈ 2 ದಿನಗಳಲ್ಲಿ ನಿರ್ಧಾರ
  • ಅಯ್ಯರ್‌ಗಾಗಿ ಆರ್‌ಸಿಬಿ 20 ಕೋಟಿ ಹಣ ಇಟ್ಟಿದೆ.
IPL 2022 Mega Auction : ಈ ಆಟಗಾರನಿಗಾಗಿ ₹20 ಕೋಟಿ ಉಳಿಸಿಕೊಂಡ RCB : ತಂಡದಿಂದ ಮಾಹಿತಿ ಸೋರಿಕೆ! title=

ನವದೆಹಲಿ : ಐಪಿಎಲ್ 2022 ರ ಮೆಗಾ ಹರಾಜು ಬೆಂಗಳೂರಿನಲ್ಲಿ ಫೆಬ್ರವರಿ 12 ಮತ್ತು 13 ರಂದು ನಡೆಯಲಿದೆ. ಈ ಬಾರಿ ಆಟಗಾರರ ಭವಿಷ್ಯ 10 ತಂಡಗಳ ಕೈಯಲ್ಲಿರಲಿದೆ. ಈ ಬಾರಿ ಒಟ್ಟು 590 ಆಟಗಾರರ ಭವಿಷ್ಯ ಈ 2 ದಿನಗಳಲ್ಲಿ ನಿರ್ಧಾರವಾಗಲಿದೆ. ಆದರೆ ಅದಕ್ಕೂ ಮುನ್ನ ಆಟಗಾರರ ಮೇಲೆ ಭವಿಷ್ಯವಾಣಿಯ ಪರ್ವ ಶುರುವಾಗಿದೆ. ಸ್ಟಾರ್ ಆಟಗಾರರು ಕೂಡ ಈ ಹರಾಜಿನ ಬಗ್ಗೆ ಉತ್ಸುಕರಾಗಿದ್ದಾರೆ. ಮೆಗಾ ಹರಾಜಿನ ಮೊದಲು, ಮಾಜಿ ಅನುಭವಿ ಕ್ರಿಕೆಟಿಗ ಆಕಾಶ್ ಚೋಪ್ರಾ ಅವರು ಮುಂಬರುವ ಮೆಗಾ ಹರಾಜಿನಲ್ಲಿ 20 ಕೋಟಿ ರೂ.ಗೆ ಹರಾಜಾಗಲಿರುವ ಆಟಗಾರ ಎಂದು ಹೆಸರಿಸಿದ್ದಾರೆ.

RCB ಯ ಬಹುದೊಡ್ಡ ಮಾಹಿತಿ ಸೋರಿಕೆ!

ಈ ಬಗ್ಗೆ ಆಕಾಶ್ ಚೋಪ್ರಾ(Akash Chopra) ಅವರು ತಮ್ಮ ಯೂಟ್ಯೂಬ್ ಚಾನೆಲ್‌ನ ವಿಡಿಯೋ ಒಂದರಲ್ಲಿ ಮಾತಾಡಿದ್ದು, ವಿಡಿಯೋದಲ್ಲಿ, ನನ್ನ ಪ್ರಕಾರ ಅತ್ಯಂತ ದುಬಾರಿ ಆಟಗಾರ ಶ್ರೇಯಸ್ ಅಯ್ಯರ್. ತಮ್ಮ ಮಾರ್ಕ್ಯೂ ಆಟಗಾರರ ಪಟ್ಟಿಯಲ್ಲಿ ಇಶಾನ್ ಕಿಶನ್ ಇಲ್ಲ ಮತ್ತು ನನ್ನ ಪ್ರಕಾರ ಶ್ರೇಯಸ್ ಅಯ್ಯರ್ ಅತ್ಯಂತ ದುಬಾರಿ ಆಟಗಾರ ಎಂದು ಸಾಬೀತುಪಡಿಸಲಿದ್ದಾರೆ. ಈ ಪಟ್ಟಿಯಲ್ಲಿ ಇಶಾನ್ ಕಿಶನ್ ಕೂಡ ಇದ್ದಿದ್ದರೆ ಸ್ಪರ್ಧೆ ಕುತೂಹಲ ಮೂಡಿಸುತ್ತಿತ್ತು. ಈಗ ಅಯ್ಯರ್‌ಗಾಗಿ ಬಹಿರಂಗವಾಗಿ ಹಣ ಖರ್ಚು ಮಾಡಲು ಸಿದ್ಧವಿದೆ ಮತ್ತು ಇಶಾನ್ ಕಿಶನ್‌ಗೆ ಕೂಡ ಹಣ ಮೀಸಲು ಇಡಲಾಗುತ್ತದೆ. ಶ್ರೇಯಸ್ ಅಯ್ಯರ್ ಕೆಕೆಆರ್ ಅಥವಾ ಆರ್‌ಸಿಬಿ ನಾಯಕರಾಗಬಹುದು ಎಂದು ಹೇಳಿದ್ದಾರೆ.

ಇದನ್ನೂ ಓದಿ : Virat Kohli : RCB ಸೇರುವ ಮೊದಲು ಈ ತಂಡವನ್ನು ತಿರಸ್ಕರಿಸಿದ್ದ ವಿರಾಟ್ ಕೊಹ್ಲಿ!

ರ್ಕಬ್ಈ  ಆಟಗಾರನಿಗಾಗಿ 20 ಕೋಟಿ ಉಳಿಸಿಕೊಂಡಿದೆ

ಐಪಿಎಲ್ ಇತಿಹಾಸದಲ್ಲಿ ಶ್ರೇಯಸ್ ಅಯ್ಯರ್(Shreyas Iyer) ಅತ್ಯಂತ ದುಬಾರಿ ಆಟಗಾರನಾಗುವ ಬಗ್ಗೆ ಆಕಾಶ್ ಚೋಪ್ರಾ ಸುಳಿವು ನೀಡಿದ್ದಾರೆ. RCB ತಂಡವು ಶ್ರೇಯಸ್ ಅಯ್ಯರ್ ಅವರನ್ನು ಸುಮಾರು 20 ಕೋಟಿಗೆ ಖರೀದಿಸಬಹುದು ಹೇಳಿದ್ದಾರೆ. 'ಅಯ್ಯರ್‌ಗೆ ಆರ್‌ಸಿಬಿ 20 ಕೋಟಿ ಇಟ್ಟಿದೆ ಎಂದು ಯಾರೋ ಹೇಳಿದರು' ಎಂಬುವುದನ್ನು ಕೂಡ ಹೇಳಿದರು.

ಐಪಿಎಲ್‌ನಲ್ಲಿ ಶ್ರೇಯಸ್ ಅಯ್ಯರ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಶ್ರೇಯಸ್ ಅಯ್ಯರ್ ಇದುವರೆಗೆ ಒಟ್ಟು 87 ಪಂದ್ಯಗಳನ್ನು ಆಡಿದ್ದಾರೆ ಮತ್ತು 31.66 ಸರಾಸರಿಯಲ್ಲಿ 2375 ರನ್ ಗಳಿಸಿದ್ದಾರೆ. ಶ್ರೇಯಸ್ ಅಯ್ಯರ್ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ನಾಯಕತ್ವ ವಹಿಸಿದ್ದರು ಮತ್ತು ಅವರ ನಾಯಕತ್ವದಲ್ಲಿ ತಂಡಕ್ಕೆ ಸಾಕಷ್ಟು ಯಶಸ್ಸನ್ನು ನೀಡಿದ್ದರು. ಮುಂಬರುವ ಸೀಸನ್ ಮೊದಲು, ಡೆಲ್ಲಿ ಕ್ಯಾಪಿಟಲ್ಸ್ ಅವರನ್ನು ಕೈ ಬಿಟ್ಟಿದೆ.

ಮಾರ್ಕ್ಯೂ ಆಟಗಾರರ ಪಟ್ಟಿ

ಮಾರ್ಕ್ಯೂ ಆಟಗಾರರ ಸೆಟ್‌ನಲ್ಲಿ 10 ಆಟಗಾರರನ್ನು ಇರಿಸಲಾಗಿದೆ. ಈ ಬಾರಿಯ ಮಾರ್ಕ್ಯೂ ಸೆಟ್‌ನಲ್ಲಿ ಆರು ವಿದೇಶಿ ಆಟಗಾರರು ಮತ್ತು ನಾಲ್ವರು ಭಾರತೀಯ ಆಟಗಾರರಿದ್ದಾರೆ. ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಪ್ಯಾಟ್ ಕಮಿನ್ಸ್, ಕ್ವಿಂಟನ್ ಡಿ ಕಾಕ್, ಶಿಖರ್ ಧವನ್, ಫಾಫ್ ಡು ಪ್ಲೆಸಿಸ್, ಶ್ರೇಯಸ್ ಅಯ್ಯರ್, ಕಗಿಸೊ ರಬಾಡ, ಮೊಹಮ್ಮದ್ ಶಮಿ ಮತ್ತು ಡೇವಿಡ್ ವಾರ್ನರ್ ಮಾರ್ಕ್ಯೂ ಸೆಟ್‌ನಲ್ಲಿ ಸ್ಥಾನ ಪಡೆದಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News