Shubman gill sister troll : ನಿನ್ನೆ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023ರ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಆರಂಭಿಕ ಬ್ಯಾಟರ್ ಶುಭಮನ್‌ ಗಿಲ್ ತಮ್ಮ ಪ್ರಭಾವಿ ಪ್ರದರ್ಶನದ ಮೂಲದ ಅನೇಕ ಕ್ರಿಕೆಟ್ ಅಭಿಮಾನಿಗಳ ಹೃದಯವನ್ನು ಗೆದ್ದರು. 23ರ ಹರೆಯದ ಗಿಲ್‌ ಆರ್‌ಸಿಬಿ ವಿರುದ್ಧ ಜಿಟಿ ಐಪಿಎಲ್ ಪಂದ್ಯದಲ್ಲಿ ಸತತ ಎರಡನೇ ಶತಕ ದಾಖಲಿಸಿದರು. ಶುಭಮನ್‌ ಶಕ್ತಿಯುತ ಪ್ರದರ್ಶನಕ್ಕೆ ಆರ್‌ಸಿಬಿ ಐಪಿಎಲ್ ಪ್ಲೇಆಫ್‌ನಿಂದ ಹೊರಬಿತ್ತು.


COMMERCIAL BREAK
SCROLL TO CONTINUE READING

ಇನ್ನು ಆರ್‌ಸಿಬಿ 'ಅಭಿಮಾನಿಗಳು' ತಮ್ಮ ತಂಡದ ಸೋಲಿನಿಂದಾಗಿ ಮನನೊಂದಿದ್ದಾರೆ. ಇದೇ ಸಮಯವನ್ನು ಬಳಸಿಕೊಂಡ ಕೆಲವು ಕಿಡಿಗೇಡಿಗಳು ಗಿಲ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ಕಾಮೆಂಟ್‌ ಮಾಡಲು ಪ್ರಾರಂಭಿಸಿದರು. ಅಲ್ಲದೆ, ಗಿಲ್‌ ಸಹೋದರಿ ಶಹನೀಲ್ ಗಿಲ್ ಕೂಡ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದರು. ಈ ಸಹೋದರ-ಸಹೋದರಿ ಮೇಲೆ ನಿಂದಿತ ಕಾಮೆಂಟ್‌ಗಳು ಸಹ ಮಾಡುತ್ತಿದ್ದಾರೆ. ಈ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಹಲವು ಪೋಸ್ಟ್‌ಗಳು ವೈರಲ್‌ ಆಗುತ್ತಿವೆ.


ಇದನ್ನೂ ಓದಿ: Virat Kohli: ಒಬ್ಬರಲ್ಲ, ಇಬ್ಬರಲ್ಲ.. ಅನುಷ್ಕಾ ಜೊತೆ ಮದುವೆಗೂ ಮುನ್ನ ಕೊಹ್ಲಿ ಈ 6 ಹುಡುಗಿಯರ ಜೊತೆ ಡೇಟಿಂಗ್ ಮಾಡಿದ್ರು!


ಆದ್ರೆ, ನಿಜವಾಗಿ ಹೇಳುವುದಾದ್ರೆ, ವಿರಾಟ್ ಅಭಿಮಾನಿಗಳು ಗಿಲ್ ಅವರನ್ನು ಮೆಚ್ಚುತ್ತಾರೆ. ಅವರ ಆಟವನ್ನು ಗೌರವಿಸುತ್ತಾರೆ. ಅಲ್ಲದೆ ಸೋತರು ಸಹ ಇನ್ನೊಬ್ಬರನ್ನು ನಿಂದಿಸುವ ಸ್ವಭಾವವನ್ನು ಆರ್‌ಸಿಬಿ ಅಭಿಮಾನಿಗಳಲ್ಲಿ ಇಲ್ಲ. ಹೆಚ್ಚಾಗಿ ಸೋಲು ಹೊಸತಲ್ಲ. ಆದ್ರೆ, ಇದೆ ಸಮಯವನ್ನು ಬಳಸಿಕೊಂಡು ಕೆಲ ಕಿಡಿಗೇಡಿಗಳು ಮಾಡುತ್ತಿರುವ ಇಂತಹ ಕೆಟ್ಟ ಕೆಲಸದಿಂದಾಗಿ ವಿರಾಟ್‌ ಮತ್ತು ಆರ್‌ಸಿಬಿ ಅಭಿಮಾನಿಗಳು ಅವಮಾನ ಪಡುವಂತಾಗಿದೆ.


ಸದ್ಯ ಶುಭಮನ್‌ ಗಿಲ್‌ ಹಾಗೂ ಅವರ ಸಹೋದರಿ ಶಹನೀಲ್‌ ಗಿಲ್‌ ಕುರಿತು ಅವಹೇಳನಕಾರಿ ಪೋಸ್ಟ್‌ಗಳನ್ನು ಗಮನಿಸಿದ ಆರ್‌ಸಿಬಿ ಮತ್ತು ವಿರಾಟ್‌ ಕಟ್ಟಾ ಅಭಿಮಾನಿಗಳು ತಮ್ಮ ಟ್ವಿಟರ್‌ ಖಾತೆಯಲ್ಲಿ, ನಾವು ಮೂಲ ವಿರಾಟ್ ಅಭಿಮಾನಿಗಳು, ಶುಭ್‌ಮನ್ ಅವರನ್ನು ಸಂಪೂರ್ಣವಾಗಿ ಪ್ರೀತಿಸುತ್ತೇವೆ ಮತ್ತು ಮೆಚ್ಚುತ್ತೇವೆ ಎಂದು ಹೇಳಿದ್ದಾರೆ. ಅಲ್ಲದೆ, ವಿರಾಟ್ ಅಭಿಮಾನಿಗಳು ಅಥವಾ ಆರ್‌ಸಿಬಿಯನ್ನರು ಎಂದು ಹೇಳಿಕೊಳ್ಳುವ ಕೆಲವು ಕಿಡಿಗೇಡಿಗಳ ಟ್ರೋಲ್‌ಗಳ ಪರವಾಗಿ ಕ್ಷಮಿಸಿ" ಎಂದು ಬರೆದುಕೊಂಡಿದ್ದಾರೆ. ಇದೇ ಅಲ್ಲವೆ ಆರ್‌ಸಿಬಿ ಅಭಿಮಾನಿಗಳ ದೊಡ್ಡತನ.


ಇದನ್ನೂ ಓದಿ:Team Indiaಗೆ ಸಿಕ್ಕಾಯ್ತು ಮತ್ತೊಬ್ಬ ಯಾರ್ಕರ್ ಸ್ಪೆಷಲಿಸ್ಟ್! ಜಸ್ಪ್ರೀತ್ ಬುಮ್ರಾ ಜಾಗ ತುಂಬೋದು ಈ ಆಟಗಾರನೇ…


ಇನ್ನು ನಿನ್ನೆ ನಡೆದ ಪಂದ್ಯದ ವಿಚಾರವಾಗಿ ಹೇಳುವುದಾದ್ರೆ, ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋಲನ್ನು ಅನುಭವಿಸಿದೆ. ಆ ಮೂಲಕ ಪ್ಲೇ ಆಫ್ ಗೆ ಸಾಗುವ ಆರ್ಸಿಬಿ ಕನಸು ಭಗ್ನವಾಗಿದೆ. ಬೆಂಗಳೂರು ತಂಡವು ನೀಡಿದ 198 ರನ್ ಗಳ ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನತ್ತಿದ ಗುಜರಾತ್ ತಂಡವು ಶುಬ್ಮನ್ ಗಿಲ್  ಹಾಗೂ ವಿಜಯ್ ಶಂಕರ ಅವರ ಸ್ಪೋಟಕ ಬ್ಯಾಟಿಂಗ್ ನಿಂದಾಗಿ ಇನ್ನೂ ಐದು ಎಸೆತಗಳು ಬಾಕಿ ಇರುವಂತೆ ಗುಜರಾತ್ ತಂಡವು ಗೆಲುವನ್ನು ಸಾಧಿಸಿದೆ. ಶುಬ್ಮನ್ ಗಿಲ್ ಕೇವಲ 52 ಎಸೆತಗಳಲ್ಲಿ ಎಂಟು ಸಿಕ್ಸರ್ ಹಾಗೂ ಐದು ಬೌಂಡರಿಗಳ ನೆರವಿನಿಂದಾಗಿ ಅವರು 104 ರನ್ ಗಳಿಸಿ ಅಜೇಯರಾಗಿ ಉಳಿದರು. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ