ನವದೆಹಲಿ: ಶನಿವಾರ ರಾತ್ರಿ ನಡೆದ ಮಹತ್ವದ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 5 ವಿಕೆಟ್‍ಗಳ ಭರ್ಜರಿ ಗೆಲುವು ದಾಖಲಿಸಿತು. ಪ್ರಸಕ್ತ ಲೀಗ್‍ನ ಕೊನೆ ಪಂದ್ಯದಲ್ಲಿ ಮುಂಬೈ ಗೆದ್ದು ಬೀಗಿದರೆ, ಇದರಿಂದ ಲಾಭವಾಗಿದ್ದು ಮಾತ್ರ ರಾಯಲ್ ಚಾಲೆಂಜರ್ಸ್‍ ಬೆಂಗಳೂರಿಗೆ. ಗೆಲ್ಲುವ ಎಲ್ಲಾ ಅವಕಾಶವಿದ್ದರೂ ದೆಹಲಿ ಹೀನಾಯ ಸೋಲು ಕಾಣುವ ಮೂಲಕ ಟೂರ್ನಿಯಿಂದ ಹೊರಬಿದ್ದಿತು.


COMMERCIAL BREAK
SCROLL TO CONTINUE READING

ಒಂದು ವೇಳೆ ಮುಂಬೈ ವಿರುದ್ಧ ದೆಹಲಿ ಗೆಲುವು ಸಾಧಿಸಿದ್ದರೆ ಪ್ಲೇ ಆಫ್ ಪ್ರವೇಶಿಸುವ ಅವಕಾಶ ಪಡೆಯುತ್ತಿತ್ತು. ಆದರೆ, ಮುಂಬೈ ಎದುರು ದೆಹಲಿ ಮಂಡಿಯೂರಿತು. ಪರಿಣಾಮ ಆರ್​ಸಿಬಿಗೆ ಪ್ಲೇ ಆಫ್ ಪ್ರವೇಶಿಸುವ ಅವಕಾಶ ಲಭಿಸಿತು. ದೆಹಲಿ ಮತ್ತು ಮುಂಬೈ ನಡುವಿನ ಸೆಣಸಾಟ ವೀಕ್ಷಿಸಲು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಅಭಿಮಾನಿಗಳು ತುಂಬಿಹೋಗಿದ್ದರು. ಲಕ್ಷಾಂತರ ಅಭಿಮಾನಿಗಳು ಆರ್​ಸಿಬಿ… ಆರ್​ಸಿಬಿ… ಎಂದು ಕೂಗುತ್ತಿದ್ದರು.


ಇದನ್ನೂ ಓದಿ: Sourav Ganguly New House : 40 ಕೋಟಿ ಕೊಟ್ಟು ಹೊಸ ಬಂಗಲೆ ಖರೀದಿಸಿದ ಗಂಗೂಲಿ!


ಸಂಭ್ರಮಿಸಿದ ಆರ್​ಸಿಬಿ ಆಟಗಾರರು


ಆರ್​ಸಿಬಿ ಪ್ಲೇಯರ್ಸ್ ಮುಂಬೈ ಗೆಲುವು ಸಾಧಿಸುತ್ತಿದ್ದಂತೆ ಕುಳಿತಲ್ಲಿಂದ ಎದ್ದು ಕುಣಿದು ಕುಪ್ಪಳಿಸಿದ್ದಾರೆ. ಆರ್​ಸಿಬಿ ಆಟಗಾರರು ಸಂಭ್ರಮಿಸಿರುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.   


ಇದನ್ನೂ ಓದಿ: RR vs CSK : ಮೊಯಿನ್ ಅಲಿ ಸಿಡಿಸಿದ 6,4,4,4,4,4, ಬೌಂಡರಿ, Video ವೈರಲ್! 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.