Sourav Ganguly New House : 40 ಕೋಟಿ ಕೊಟ್ಟು ಹೊಸ ಬಂಗಲೆ ಖರೀದಿಸಿದ ಗಂಗೂಲಿ!

ಈಗ ಗಂಗೂಲಿ ತಮ್ಮ ಐಷಾರಾಮಿ ಜೀವನಕ್ಕೆ ಐಷಾರಾಮಿ ಮನೆಯೊಂದನ್ನ ಖರೀದಿಸಿದ್ದಾರೆ. ಹೌದು, ಈ ಮನೆಯ ಬೆಲೆ ಎಷ್ಟು? ಮನೆ ಇರುವುದು ಎಲ್ಲಿ? ಸಂಪೂರ್ಣ ಮಾಹಿತಿ ಇಲ್ಲಿದೆ..

Written by - Channabasava A Kashinakunti | Last Updated : May 20, 2022, 08:40 PM IST
  • ಗಂಗೂಲಿ ಹೊಸ ಮೆನೆಗೆ ಎಷ್ಟು ಕೋಟಿ?
  • ಹುಟ್ಟು ಶ್ರೀಮಂತ ಗಂಗೂಲಿ
  • ಭಾವುಕರಾದ ಸೌರವ್ ಗಂಗೂಲಿ
Sourav Ganguly New House : 40 ಕೋಟಿ ಕೊಟ್ಟು ಹೊಸ ಬಂಗಲೆ ಖರೀದಿಸಿದ ಗಂಗೂಲಿ! title=

Sourav Ganguly : ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷ ಸೌರವ್ ಗಂಗೂಲಿ ಕ್ರಿಕೆಟ್ ಅಷ್ಟೇ ಅಲ್ಲ ವೈಯಕ್ತಿಕ ಜೀವನದ ಬಗ್ಗೆ ಕೂಡ ಸುದ್ದಿಯಲ್ಲಿರುತ್ತಾರೆ. ಗಂಗೂಲಿ ಮೂಲತಃ ಬಂಗಾಳದ ಶ್ರೀಮಂತ ಕುಟುಂಬದಿಂದ ಬಂದವರು. ಈಗ ಗಂಗೂಲಿ ತಮ್ಮ ಐಷಾರಾಮಿ ಜೀವನಕ್ಕೆ ಐಷಾರಾಮಿ ಮನೆಯೊಂದನ್ನ ಖರೀದಿಸಿದ್ದಾರೆ. ಹೌದು, ಈ ಮನೆಯ ಬೆಲೆ ಎಷ್ಟು? ಮನೆ ಇರುವುದು ಎಲ್ಲಿ? ಸಂಪೂರ್ಣ ಮಾಹಿತಿ ಇಲ್ಲಿದೆ..

ಗಂಗೂಲಿ ಹೊಸ ಮೆನೆಗೆ ಎಷ್ಟು ಕೋಟಿ?

ಸೌರವ್ ಗಂಗೂಲಿ ಕೋಲ್ಕತ್ತಾದ ಅತ್ಯಂತ ಶ್ರೀಮಂತ ಪ್ರದೇಶದಲ್ಲಿ ಅದ್ಭುತವಾದ ಮನೆಯನ್ನು ಖರೀದಿಸಿದ್ದಾರೆ. ಈ ಮನೆಯ ಒಟ್ಟು ಮೌಲ್ಯ 40 ಕೋಟಿ ರೂ. ಗಂಗೂಲಿ ತಮ್ಮ 48 ವರ್ಷದ ಪೂರ್ವಜರ ಬಂಗ್ಲೆಯನ್ನು ಬಿಟ್ಟು ಈ ಹೊಸ ಮನೆಯಲ್ಲಿ ವಾಸಿಸಲು ನಿರ್ಧರಿಸಿದ್ದಾರೆ. ಈ ಬಂಗಲೆ ಹಳೆ ಕಾಲದ ಅತ್ಯಂತ ದುಬಾರಿ ಹವೇಲಿಗಳಲ್ಲಿ ಒಂದಾಗಿತ್ತು, ಆದರೆ ಈಗ ಬಿಸಿಸಿಐ ಮುಖ್ಯಸ್ಥರು ತಮ್ಮ ವಿಳಾಸವನ್ನು ಬದಲಾಯಿಸಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ : ಐಪಿಎಲ್ 2023 ನಲ್ಲಿ ಆಡ್ತಾರಾ ಧೋನಿ? ಏನ್ ಹೇಳಿದ್ರು ಖುದ್ದಾಗಿ..

ಹುಟ್ಟು ಶ್ರೀಮಂತ ಗಂಗೂಲಿ 

ಸೌರವ್ ಗಂಗೂಲಿ ಮೂಲತಃ ಶ್ರೀಮಂತ ಕುಟುಂಬದಿಂದ ಬಿವಂದವರು. ಅವರ ತಂದೆ ಚಂಡಿದಾಸ್ ಗಂಗೂಲಿ ಅವರು ಪ್ರಿಂಟಿಂಗ್ ಬಿಸಿನೆಸ್ ಮಾಡುತ್ತಿದ್ದರು ಮತ್ತು ಕೋಲ್ಕತ್ತಾ ನಗರದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರು. ಸೌರವ್ ಗಂಗೂಲಿ ಅವರ ತಂದೆ ಆ ಸಮಯದಲ್ಲಿ ಅತ್ಯಂತ ದುಬಾರಿ ಬಂಗಲೆ ನಿರ್ಮಿಸಿದ್ದರು. ಈ ಬಂಗಲೆ ಬೆಲೆ ಇನ್ನೂ ಕೋಟಿ ರುಪಾಯಿಗೆ ಬೆಲೆ ಬಾಳುತ್ತದೆ. ಗಂಗೂಲಿ ಅವರು ತಮ್ಮ ಜೀವನದ 48 ವರ್ಷಗಳ ನಂತರ ಈ ಹಳೆಯ ಮನೆಯನ್ನು ತೊರೆಯುತ್ತಿದ್ದಾರೆ.

ಭಾವುಕರಾದ ಸೌರವ್ ಗಂಗೂಲಿ 

ಸೌರವ್ ಗಂಗೂಲಿ ಕೂಡ ತಮ್ಮ ಹಳೆಯ ಮನೆ ಬಿಟ್ಟು ಬರುವಾಗ ಭಾವುಕರಾದರು. ಟೆಲಿಗ್ರಾಫ್ ಜೊತೆ ಮಾತನಾಡಿದ ಅವರು, 'ನನ್ನ ಹೊಸ ಮನೆಯನ್ನು ಖರೀದಿಸಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ನಗರದ ಮಧ್ಯದಲ್ಲಿ ವಾಸಿಸುವುದು ಆರಾಮದಾಯಕವಾಗಿದೆ. ಆದ್ರೆ, 48 ವರ್ಷಗಳಿಂದ ವಾಸಿಸುತ್ತಿರುವ ಈ ಹಳೆಯ ಮನೆ ಬಿಡುವುದು ತುಂಬಾ ಕಷ್ಟವಾಗುತ್ತಿದೆ. ಗಂಗೂಲಿ ಅವರು ತಮ್ಮ ಹೊಸ ಮನೆಯ ಆಸ್ತಿಯನ್ನು ಅನುಪನಾ ಬಗ್ದಿ, ಕೇಶವ್ ದಾಸ್ ಬಿನಾನಿ ಮತ್ತು ನಿಕುಂಜ್ ಬಿನಾನಿ ಅವರಿಂದ ಖರೀದಿಸಿದ್ದಾರೆ.

ಇದನ್ನೂ ಓದಿ : ಕೊಹ್ಲಿಯ ಬ್ಯಾಟಿಂಗ್‌ನಲ್ಲಿ ಹರಿಯಿತು ಹಳೇ ಮಿಂಚು, ಫ್ರಾಂಚೈಸಿ ಕ್ರಿಕೆಟ್‌ನಲ್ಲಿ 'ಶ್ರೇಷ್ಠ ದಾಖಲೆ'

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News