RCB Thanks message to Fans: ಮಹಿಳೆಯರ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) 2024ರ 11 ನೇ ಪಂದ್ಯದಲ್ಲಿ, ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌’ಸಿಬಿ) ಯುಪಿ ವಾರಿಯರ್ಜ್ (ಯುಪಿಡಬ್ಲ್ಯೂ) ವಿರುದ್ಧ ಸೆಣಸಾಡಿದೆ. ಈ ಪಂದ್ಯದಲ್ಲಿ ಪ್ರಬಲ ಪ್ರದರ್ಶನ ತೋರಿದ ಆರ್‌’ಸಿಬಿ 23 ರನ್’ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Virat Kohli: ಅನುಷ್ಕಾಗಿಂತಲೂ ಸಖತ್ ಬ್ಯೂಟಿಫುಲ್ ವಿರಾಟ್ ಕೊಹ್ಲಿ ಅತ್ತಿಗೆ: ಟಾಪ್ ನಟಿಯರನ್ನೂ ಮೀರಿಸುವ ಅಂದಗಾತಿ ಈಕೆ!


ಆರ್‌’ಸಿಬಿ ಆರಂಭಿಕ ಬ್ಯಾಟಿಂಗ್ ಪ್ರದರ್ಶನದೊಂದಿಗೆ 198/3 ಅಸಾಧಾರಣ ಮೊತ್ತ ಕಲೆಹಾಕಿತ್ತು. ಸ್ಮೃತಿ ಮಂಧಾನ ಅವರು 50 ಎಸೆತಗಳಲ್ಲಿ 80 ರನ್ ಕಲೆ ಹಾಕಿದ್ರೆ, ಎಲಿಸ್ ಪೆರ್ರಿ 37 ಎಸೆತಗಳಲ್ಲಿ ಸ್ಫೋಟಕ 58 ರನ್‌ ಬಾರಿಸಿದ್ದರು. ಇಬ್ಬರು ಆಟಗಾರ್ತಿಯ ಪ್ರಬಲ ಆಟದಿಂದಾಗಿ ಆರ್ ಸಿ ಬಿ ಉತ್ತಮ ಸ್ಕೋರ್ ಗಳಿಸಿತ್ತು.


ಇನ್ನು ಆರ್ ಸಿ ಬಿ ನೀಡಿದ ಗುರಿ ಬೆನ್ನಟ್ಟಲು ಕಣಕ್ಕಿಳಿದ ಯುಪಿ ನಾಯಕಿ ಅಲಿಸ್ಸಾ ಹೀಲಿ, 38 ಎಸೆತಗಳಲ್ಲಿ 55 ರನ್ ಗಳಿಸಿದರು. ಆದರೆ ಮಧ್ಯಂತರಗಳಲ್ಲಿ ವಿಕೆಟ್‌  ಬೀಳಲು ಆರಂಭವಾದಾಗ ಸೋಲು ಖಚಿತವಾಗಿತ್ತು. ಆರ್‌’ಸಿಬಿ ಪರ ಸೋಫಿ ಡಿವೈನ್ ಮತ್ತು ಸೋಫಿ ಮೊಲಿನೆಕ್ಸ್ ತಲಾ ಎರಡು ವಿಕೆಟುಗಳನ್ನು ಕಬಳಿಸಿದ್ದರು, ಯುಪಿ ವಾರಿಯೋರ್ಜ್ ಅಲ್ಪ ಮೊತ್ತಕ್ಕೆ ಕುಸಿದು 175/8 ರಲ್ಲಿ ಪಂದ್ಯ ಕೊನೆಗೊಂಡಿತು.


ಅಭಿಮಾನಿಗಳಿಗೆ ಕೃತಜ್ಞತೆ


ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೊನೆಯ ಪಂದ್ಯವಾಡಿದ ಬಳಿಕ RCB ಆಟಗಾರ್ತಿಯರು ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಲು ಒಟ್ಟಾಗಿ ಸೇರಿದರು. ನಾಯಕಿ ಸ್ಮೃತಿ ಮಂಧಾನ, ಎಲಿಸ್ ಪೆರ್ರಿ ಸೇರಿ ಎಲ್ಲಾ ಆಟಗಾರ್ತಿಯರು, ಸತತವಾಗಿ ತಮ್ಮನ್ನು ಹುರಿದುಂಬಿಸಿದ ನಿಷ್ಠಾವಂತ ಬೆಂಬಲಿಗರಿಗೆ ಧನ್ಯವಾದಗಳನ್ನು ಅರ್ಪಿಸಿದರು.


ಆರ್‌ ಸಿ ಬಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಪೆರ್ರಿ ಮಾತನಾಡಿ, “ನನ್ನ ವೃತ್ತಿಜೀವನದುದ್ದಕ್ಕೂ ಅನುಭವಿಸಿದ ಅತ್ಯುತ್ತಮ ವಾತಾವರಣ ಇದುವೇ. ಬೆಂಬಲದಿಂದ ಕ್ರೀಡಾಂಗಣವನ್ನು ಜೀವಂತಗೊಳಿಸಿದ ನನ್ನೆಲ್ಲಾ ಅಭಿಮಾನಿಗಳಿಗೆ ಕೃತಜ್ಞತೆ” ಎಂದು ಹೇಳಿದರು.


"ನಾವು ಇಲ್ಲಿ ಆಡಿದ ಎಲ್ಲಾ ಐದು ಪಂದ್ಯಗಳು ಅದ್ಭುತವಾಗಿವೆ. ನಿಸ್ಸಂದೇಹವಾಗಿ ಇಡೀ ವೃತ್ತಿಜೀವನದಲ್ಲಿ ನಾನು ಆಡಿದ ಅತ್ಯುತ್ತಮ ವಾತಾವರಣ. ಅವರು (ಫ್ಯಾನ್ಸ್) ಅದ್ಭುತ. ಇಂತಹ ಬೆಂಬಲ ಪಡೆದ ನಾವೇ ಅದೃಷ್ಟವಂತರು” ಎಂದು ಪೆರ್ರಿ ಹೇಳಿದ್ದಾರೆ.


ಇದನ್ನೂ ಓದಿ: ಕೊನೆಗೂ ರಿವೀಲ್ ಆಯ್ತು ವಿರಾಟ್-ಅನುಷ್ಕಾ ಮಗನ ಫೇಸ್… ಎಷ್ಟೊಂದು ಮುದ್ದಾಗಿದ್ದಾನೆ ನೋಡಿ ‘ಅಕಾಯ್’!


ಇದರ ಜೊತೆಗೆ ತಂಡದ ನಾಯಕಿ ಸ್ಮೃತಿ ಮಂಧಾನ ಕೂಡ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಶೇರ್ ಮಾಡಿದ್ದು, “ಥಾಂಕ್ಯೂ ಬೆಂಗಳೂರು” ಎಂದು ಬರೆದುಕೊಂಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.