IPL 2024 RCB Playing 11 and Full Squad: ಮಾರ್ಚ್ 22 ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಾರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಕಾದಾಡಲಿವೆ, ಈ ಪಂದ್ಯ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದ್ದು, ಈ ಮೂಲಕ ಐಪಿಎಲ್ ಹೊಸ ಆವೃತ್ತಿ (17 ನೇ ಸೀಸನ್)ಗೆ ಚಾಲನೆ ಸಿಗಲಿದೆ.


COMMERCIAL BREAK
SCROLL TO CONTINUE READING

ಅಂದಹಾಗೆ ಈ ಪಂದ್ಯದಲ್ಲಿ ಬೆಂಗಳೂರು ತಂಡದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಹೇಗಿರಲಿದೆ ಎಂಬುದನ್ನು ಮುಂದೆ ತಿಳಿದುಕೊಳ್ಳೋಣ


ಇದನ್ನೂ ಓದಿ: ಗಂಟು ಗಂಟುಗಳಲ್ಲಿ ಸೇರಿಕೊಂಡಿರುವ ಯೂರಿಕ್ ಆಸಿಡ್ ಅನ್ನು ಕರಗಿಸಿ ಬಿಡುತ್ತದೆ ಈ ಆಹಾರ ಪದಾರ್ಥಗಳು ! ಒಮ್ಮೆ ಸೇವಿಸಿ ನೋಡಿ


ಇಂಡಿಯನ್ ಪ್ರೀಮಿಯರ್ ಲೀಗ್ ಸಂಬಂಧ ದುಬೈನಲ್ಲಿ ನಡೆದ ಹರಾಜಿಗೂ ಮುನ್ನ 19 ಆಟಗಾರರನ್ನು ಆರ್ ಸಿ ಬಿ ಉಳಿಸಿಕೊಂಡಿತ್ತು. ಅದಾದ ನಂತರ ಆಕ್ಷನ್’ನಲ್ಲಿ 6 ಆಟಗಾರರನ್ನು ಆರ್ ಸಿ ಬಿ ಖರೀದಿಸಿ ಒಟ್ಟು 25 ಆಟಗಾರರ ತಂಡವನ್ನು ರಚಿಸಿತ್ತು. ಇದೀಗ ಈ ಬಲಿಷ್ಟ ತಂಡದಿಂದ ಪ್ಲೇಯಿಂಗ್ 11 ಆಯ್ಕೆ ಮಾಡಬೇಕಿದೆ.


ಇನ್ನು ಮೊದಲ 4 ಕ್ರಮಾಂಕವನ್ನು ಗಮನಿಸಿದರೆ ಕಳೆದ ಸೀಸನ್’​ನಲ್ಲಿ ಆಡಿದ್ದ ಆಟಗಾರರೇ ಈ ಬಾರಿಯೂ ಆಡುವ ಸಾಧ್ಯತೆ ಇದೆ. ಅಂದರೆ ಟಾಪ್ ಆರ್ಡರ್’ನಲ್ಲಿ ಬದಲಾವಣೆ ಅನುಮಾನ. ಫಾಫ್ ಡುಪ್ಲೆಸಿಸ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಮತ್ತು ಗ್ಲೆನ್ ಮ್ಯಾಕ್ಸ್​ವೆಲ್ ಆರ್ ಸಿ ಬಿ ಪರ ಅಗ್ರ ಸ್ಥಾನದಲ್ಲಿ ಬ್ಯಾಟ್ ಬೀಸಲಿದ್ದಾರೆ.


ಇನ್ನು 5ನೇ ಸ್ಥಾನದಲ್ಲಿ ಕ್ಯಾಮರೋನ್ ಗ್ರೀನ್ ಆಸ್ಟ್ರೇಲಿಯಾ ಆಲ್​ ರೌಂಡರ್ ಕ್ಯಾಮರೋನ್ ಗ್ರೀನ್ ಕಣಕ್ಕಿಳಿದರೆ, ಎಡಗೈ ಸ್ಪಿನ್ ಆಲ್’​ರೌಂಡರ್ ಮಹಿಪಾಲ್ ಲೋಮ್ರರ್ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಚ್ಯಾನ್ಸ್ ಇದೆ. ಇನ್ನು ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ತಂಡಕ್ಕೆ ಬಲ ನೀಡಲಿರುವ ದಿನೇಶ್ ಕಾರ್ತಿಕ್ 7ನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿಯಬಹುದು.


ಇನ್ನು ತಂಡದ ಬೌಲಿಂಗ್ ವಿಭಾಗಕ್ಕೆ ಮೊಹಮ್ಮದ್ ಸಿರಾಜ್, ವಿಜಯ್ ಕುಮಾರ್ ವೈಶಾಕ್, ರೀಸ್ ಟೋಪ್ಲಿ, ಕರ್ಣ್​ ಶರ್ಮಾ ಜೀವ ತುಂಬುವ ಸಾಧ್ಯತೆ ಇದೆ.


ಇದನ್ನೂ ಓದಿ: IPL ಆರಂಭಕ್ಕೂ ಮುನ್ನ ಬದಲಾಯ್ತು Royal Challengers Bangalore ಹೆಸರು: ಇನ್ಮುಂದೆ ಹೀಗಿರಲಿದೆ RCB ಪೂರ್ಣ ‘ಅರ್ಥ’!


ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಲಿಷ್ಟ 25 ಆಟಗಾರರ ತಂಡ:


ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಸುಯಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಮಹಿಪಾಲ್ ಲೊಮ್ರೋರ್, ಕರ್ಣ್ ಶರ್ಮಾ, ಮನೋಜ್ ಭಾಂಡಗೆ, ಮಯಾಂಕ್ ದಾಗರ್, ವಿಜಯ್‌ ಕುಮಾರ್ ವೈಶಾಕ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಸಿರಾಜ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಾಜನ್ ಕುಮಾರ್, ಕ್ಯಾಮರೋನ್ ಗ್ರೀನ್, ಅಲ್ಝಾರಿ ಜೋಸೆಫ್, ಯಶ್ ದಯಾಳ್, ಟಾಮ್ ಕರನ್, ಲಾಕಿ ಫರ್ಗುಸನ್, ಸ್ವಪ್ನಿಲ್ ಸಿಂಗ್, ಸೌರವ್ ಚೌಹಾಣ್


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ