IPL 2022: ಈ ಹಾದಿಯಿಂದ ಮಾತ್ರ ಆರ್‌ಸಿಬಿ ಪ್ಲೇ ಆಫ್ ತಲುಪಬಹುದು..!
ಆರ್‌ಸಿಬಿ ಐಪಿಎಲ್ ಟೂರ್ನಿಯಲ್ಲಿ 3 ಬಾರಿ ಫೈನಲ್ ಪ್ರವೇಶಿಸಿದ್ದರೂ ಒಮ್ಮೆಯೂ ಪ್ರಶಸ್ತಿ ಎತ್ತಿಹಿಡಿದಿಲ್ಲ. ಹೀಗಾಗಿ ತಂಡದ ಮೇಲೆ ಅಭಿಮಾನಿಗಳಿಗೆ ಹೆಚ್ಚಿನ ನಿರೀಕ್ಷೆ ಇದೆ.
ನವದೆಹಲಿ: 15ನೇ ಆವೃತ್ತಿಯ ಐಪಿಲ್ ಟೂರ್ನಿಯು ಕೊನೆ ಹಂತ ಅಂದರೆ ಪ್ಲೇ ಆಫ್‌ಗಳತ್ತ ಸಾಗುತ್ತಿದೆ. ಲಕ್ನೋ ತಂಡವನ್ನು ಸೋಲಿಸುವ ಮೂಲಕ ಗುಜರಾತ್ ಟೈಟಾನ್ಸ್ ಮೊದಲ ತಂಡವಾಗಿ ಪ್ಲೇ ಆಫ್‍ಗೆ ಎಂಟ್ರಿ ಕೊಟ್ಟಿದೆ. ಉಳಿದ 3 ಸ್ಥಾನಗಳಿಗಾಗಿ ತಂಡಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಅದರಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪ್ಲೇ ಆಫ್‌ಗೆ ಅರ್ಹತೆ ಪಡೆಯಬಹುದೇ ಅಥವಾ ಇಲ್ಲವೇ ಎಂಬುದರ ಮೇಲೆ ಮತ್ತೊಮ್ಮೆ ಎಲ್ಲರ ಕಣ್ಣು ನಟ್ಟಿದೆ. ‘ಈ ಸಲ ಕಪ್ ನಮ್ದೆ’ ಎಂದು ಪ್ರತಿಬಾರಿಯೂ ಹೇಳುವ ಅಭಿಮಾನಿಗಳ ಆಸೆಯನ್ನು ಆರ್‌ಸಿಬಿ ಈಡೇರಿಸುತ್ತಾ ಅನ್ನೋ ಕುತೂಹಲ ಮೂಡಿದೆ. ಪ್ಲೇ ಆಫ್ ತಲುಪಲು ಆರ್‌ಸಿಬಿಗೆ ಯಾವ ಹಾದಿ ಇದೆ ಎಂಬುದರ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.
ಪ್ಲೇ ಆಫ್ ಹಾದಿ ತುಂಬಾ ಕಠಿಣವಾಗಿದೆ!
ಕಳೆದ 15 ವರ್ಷಗಳಿಂದ ಐಪಿಎಲ್‌ನ ಚೊಚ್ಚಲ ಪ್ರಶಸ್ತಿಗಾಗಿ ಕಾಯುತ್ತಿರುವ ಆರ್‌ಸಿಬಿಗೆ ಈ ವರ್ಷ ಪ್ರಶಸ್ತಿ ಗೆಲ್ಲುವ ಉತ್ತಮ ಅವಕಾಶವಿತ್ತು. ಆದರೆ, ಈಗ ಈ ತಂಡ ಸಂಕಷ್ಟದಲ್ಲಿದ್ದು, ಪ್ಲೇ ಆಫ್‌ಗೆ ಪ್ರವೇಶಿಸುವುದು ತುಂಬಾ ಕಷ್ಟಕರವಾಗಿದೆ. 12 ಪಂದ್ಯಗಳಲ್ಲಿ 7 ಗೆಲುವು ಸಾಧಿಸಿರುವ ಆರ್‌ಸಿಬಿ 14 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಮುಂದಿನ 2 ಪಂದ್ಯಗಳಲ್ಲಿ ಆರ್‌ಸಿಬಿ ಪಂಜಾಬ್ ಮತ್ತು ಗುಜರಾತ್ ತಂಡಗಳನ್ನು ಎದುರಿಸಲಿದೆ. ಆದ್ದರಿಂದ ಈ ಎರಡೂ ಪಂದ್ಯಗಳನ್ನು ಗೆಲ್ಲುವತ್ತ ತಂಡದ ಗಮನವಿದೆ. ಅದೇ ರೀತಿ RCB ರನ್ ರೇಟ್ ಮೈನಸ್‌ನಲ್ಲಿರುವ ಕಾರಣ ಈ ಎರಡೂ ಪಂದ್ಯಗಳನ್ನು ಉತ್ತಮ ಅಂತರದಿಂದ ಗೆಲ್ಲುವ ಒತ್ತಡಕ್ಕೆ ಸಿಲುಕಿದೆ. ಆರ್‌ಸಿಬಿ ಮುಂದಿರುವ 2 ತಂಡಗಳು ತುಂಬಾ ಬಲಿಷ್ಠವಾಗಿವೆ. ಪಂಜಾಬ್ ತಂಡ ಸಹ ಪ್ಲೇ ಅಫ್ ಪ್ರವೇಶಿಸುವ ನಿಟ್ಟಿನಲ್ಲಿ ಆರ್‌ಸಿಬಿ ವಿರುದ್ಧ ಸೆಣಸಾಟ ನಡೆಸಲಿದೆ.
ಇದನ್ನೂ ಓದಿ: IPL 2022 : ಧೋನಿ ಕೈ ಎತ್ತುತ್ತಿದ್ದಂತೆಯೇ ಜಡೇಜಾಗೆ ಕೆಟ್ಟ ದಿನಗಳು ಶುರು!
ಈ ಮಾರ್ಗದ ಮೂಲಕ ಪ್ಲೇ ಆಫ್ ಪ್ರವೇಶಿಸಬಹುದು
ಕಳೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸಿ ಆರ್‌ಸಿಬಿ ತಂಡ ಕೊನೆಯ 4ರ ಘಟ್ಟಕ್ಕೆ ತಲುಪಿದೆ. ಆದರೆ ಗೆಲುವಿನ ಹಾದಿಗೆ ಮರಳಿರುವ ದೆಹಲಿ ತಂಡದಿಂದ ಆರ್‌ಸಿಬಿ ಅಪಾಯಕ್ಕೆ ಸಿಲುಕಿದೆ. ಇಂತಹ ಪರಿಸ್ಥಿತಿಯಲ್ಲಿ ಶುಕ್ರವಾರ ನಡೆಯಲಿರುವ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಗೆಲ್ಲಲೇಬೇಕಾಗಿದೆ. ಈ ಮೂಲಕ ಆರ್‌ಸಿಬಿ 16 ಅಂಕ ಗಳಿಸಿ ತನ್ನ ಸ್ಥಾನವನ್ನು ಮತ್ತಷ್ಟು ಉತ್ತಮಪಡಿಸಿಕೊಳ್ಳಬೇಕಿದೆ. ದೆಹಲಿ ತಂಡವು 12 ಪಂದ್ಯಗಳಲ್ಲಿ 6 ಗೆಲುವು ಸಾಧಿಸಿದ್ದು, 12 ಅಂಕಗಳನ್ನು ಕಲೆಹಾಕಿ 5ನೇ ಸ್ಥಾನದಲ್ಲಿದೆ. ದೆಹಲಿಗೂ ಎರಡೂ ಪಂದ್ಯಗಳು ಬಾಕಿ ಇರುವುದರಿಂದ ಆರ್‌ಸಿಬಿ ಪಂಜಾಬ್ ಜೊತೆಗೆ ಗುಜರಾತ್ ವಿರುದ್ಧವೂ ಗೆಲ್ಲಬೇಕು ಅಥವಾ ದೆಹಲಿ ಉಳಿದಿರುವ 2 ಪಂದ್ಯಗಳಲ್ಲಿ 1 ಸೋಲಬೇಕು. ಹೀಗಾದರೆ ಮಾತ್ರ ಆರ್‌ಸಿಬಿ ಪ್ಲೇ ಆಫ್ ಹಾದಿ ಸುಲಭವಾಗಲಿದೆ.
ಚೊಚ್ಚಲ ಐಪಿಎಲ್ ಪ್ರಶಸ್ತಿ ನಿರೀಕ್ಷೆಯಲ್ಲಿ RCB
ಆರ್‌ಸಿಬಿ ಐಪಿಎಲ್‌ನ ಚೊಚ್ಚಲ ಪ್ರಶಸ್ತಿಗಾಗಿ ಕಾಯುತ್ತಿದೆ. ಈ ತಂಡ 15 ವರ್ಷಗಳಿಂದ ಇಲ್ಲಿಯವರೆಗೆ ಒಂದೇ ಒಂದು ಪ್ರಶಸ್ತಿಯನ್ನು ಗೆದ್ದಿಲ್ಲ. ಆರ್‌ಸಿಬಿ ಐಪಿಎಲ್‌ನಲ್ಲಿ 3 ಬಾರಿ ಫೈನಲ್ ಪ್ರವೇಶಿಸಿದ್ದರೂ ಒಮ್ಮೆಯೂ ಪ್ರಶಸ್ತಿ ಎತ್ತಿಹಿಡಿದಿಲ್ಲ. 2009, 2011 ಮತ್ತು 2016ರ ಐಪಿಎಲ್ ಟೂರ್ನಿ ಫೈನಲ್‌ನಲ್ಲಿ ಆರ್‌ಸಿಬಿ ಸೋಲನುಭವಿಸಿತ್ತು. ಈ ವರ್ಷ ವಿರಾಟ್ ಕೊಹ್ಲಿ ಬದಲಿಗೆ ಫಾಫ್ ಡು ಪ್ಲೆಸಿಸ್‍ಗೆ RCB ನಾಯಕತ್ವ ವಹಿಸಲಾಗಿದೆ. ಬಾಕಿ ಉಳಿದಿರುವ 2 ಪಂದ್ಯಗಳಲ್ಲಿ ಕಮಾಲ್ ಮಾಡಿದರೆ ಮಾತ್ರ ಆರ್‌ಸಿಬಿ ಪ್ಲೇ ಆಫ್ ಪ್ರವೇಶಿಸಲಿದೆ.
ಇದನ್ನೂ ಓದಿ: Team India : ರೋಹಿತ್ ಗೆ ವಿಶ್ವಕಪ್ ಗೆಲ್ಲುವ ಟಿಪ್ಸ್ ನೀಡಿದ ಸುನಿಲ್ ಗವಾಸ್ಕರ್!
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.