IPL 2022 Mega Auction : ಈ ಆಟಗಾರರನ್ನು ಮತ್ತೆ ಖರೀದಿಸಿಯೇ ತೀರಲಿದೆ RCB..!
RCB ಉಳಿಸಿಕೊಂಡಿರುವ ಆಟಗಾರರೆಂದರೆ ವಿರಾಟ್ ಕೊಹ್ಲಿ , ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಮೊಹಮ್ಮದ್ ಸಿರಾಜ್.
ನವದೆಹಲಿ : ಐಪಿಎಲ್ ಮೆಗಾ ಹರಾಜು (IPL Mega Auction) ಎಲ್ಲಾ ತಂಡಗಳಿಗೂ ಮಹತ್ವದ್ದಾಗಿದೆ. ಐಪಿಎಲ್‌ನಲ್ಲಿ (IPL) ಎಲ್ಲಾ ತಂಡಗಳು ಕೇವಲ ನಾಲ್ವರು ಆಟಗಾರರನ್ನು ಮಾತ್ರ ಉಳಿಸಿಕೊಳ್ಳಬಹುದಾಗಿತ್ತು. ಆರ್‌ಸಿಬಿ ತಂಡ ಕೇವಲ 3 ಆಟಗಾರರನ್ನು ಉಳಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ RCB ತಂಡವು ತಮ್ಮ ಇಬ್ಬರು ಪ್ರಮುಖ ಆಟಗಾರರನ್ನು ಮೆಗಾ ಹರಾಜಿನಲ್ಲಿ ಖರೀದಿಸಬಹುದು. ಈ ಆಟಗಾರರು RCB ಪರವಾಗಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಈ ಕಾರಣದಿಂದಾಗಿ ಆರ್‌ಸಿಬಿ ಈ ಆಟಗಾರರನ್ನು ಶತಾಯಗತಾಯ ಮತ್ತೆ ತನ್ನ ತಂಡಕ್ಕೆ ಸೇರಿಸಿಕೊಳ್ಳಲಿದೆ.
ಈ ಆಟಗಾರರನ್ನು ಉಳಿಸಿಕೊಂಡಿರುವ ಆರ್‌ಸಿಬಿ :
RCB ಉಳಿಸಿಕೊಂಡಿರುವ ಆಟಗಾರರೆಂದರೆ ವಿರಾಟ್ ಕೊಹ್ಲಿ (Virat Kohli), ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಮೊಹಮ್ಮದ್ ಸಿರಾಜ್. ಈ ಪೈಕಿ ವಿರಾಟ್ ಕೊಹ್ಲಿಯನ್ನು 15 ಕೋಟಿ ರೂ.ಗೆ ಉಳಿಸಿಕೊಂಡರೆ, ಗ್ಲೆನ್ ಮ್ಯಾಕ್ಸ್‌ವೆಲ್ 11 ಕೋಟಿಗೆ ಉಳಿಸಿಕೊಂಡಿದೆ. ದೇವದತ್ ಪಡ್ಡಿಕಲ್, ಹರ್ಷಲ್ ಪಟೇಲ್, ಯುಜ್ವೇಂದ್ರ ಚಾಹಲ್ (Yuzvendra Chahal) ಮತ್ತು ಕೆಎಸ್ ಭರತ್ ಸೇರಿದಂತೆ ಹಲವು ದಿಗ್ಗಜ ಆಟಗಾರರನ್ನು ಆರ್‌ಸಿಬಿ ಉಳಿಸಿಕೊಂಡಿಲ್ಲ. ಇದೀಗ ಮೆಗಾ ಹರಾಜಿನ ಮೂಲಕ ಆರ್ ಸಿಬಿ (RCB) ಈ ಕೆಲವು ಆಟಗಾರರನ್ನು ಮತ್ತೆ ತನ್ನ ತಂಡಕ್ಕೆ ಸೇರಿಸಿಕೊಳ್ಳಬಹುದು.
ಇದನ್ನೂ ಓದಿ : ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಮಹತ್ವದ ನಿರ್ಧಾರ ಪ್ರಕಟ
ಮತ್ತೆ ಮರಳಲಿದ್ದಾರೆಯೇ ಈ ಮಾಂತ್ರಿಕ ಸ್ಪಿನ್ನರ್ ?
ಭಾರತದ ಸ್ಟಾರ್ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್, RCB ಮೆಗಾ ಹರಾಜಿನಲ್ಲಿ ಖರೀದಿಸುವ ಮೊದಲ ಆಟಗಾರನಾಗಬಹುದು. ಚಹಲ್ ಆರ್‌ಸಿಬಿ ಪರ ಹಲವು ಪಂದ್ಯಗಳನ್ನು ಆಡಿ, ಉತ್ತಮ ಪ್ರದರ್ಶನ ನೀಡಿದ್ದಾರೆ. ಐಪಿಎಲ್ 2021 ರಲ್ಲಿ, ಚಹಾಲ್ ಅದ್ಭುತ ಪ್ರದರ್ಶನವನ್ನು ನೀಡಿದ್ದಾರೆ. ಆಡಿದ 15 ಪಂದ್ಯಗಳಲ್ಲಿ 18 ವಿಕೆಟ್ ಗಳನ್ನು ಪಡೆದಿದ್ದಾರೆ. ಚಾಹಲ್ ಅವರ ಟರ್ನ್ ಬಾಲ್‌ಗಳನ್ನು ಆಡುವುದು ಯಾವುದೇ ಬ್ಯಾಟ್ಸ್‌ಮನ್‌ಗೆ ಅಷ್ಟು ಸುಲಭವಲ್ಲ. ಈ ಹಿನ್ನೆಲೆಯಲ್ಲಿ ಯುಜ್ವೇಂದ್ರ ಚಹಾಲ್ ನನ್ನು ಖರೀದಿಸಲು RCB ಬಯಸುತ್ತದೆ.
ರೋಹಿತ್ ಮತ್ತು ವಿರಾಟ್ ನಡುವೆ ಉತ್ತಮ ನಾಯಕ ಯಾರು? ಗೌತಮ್ ಗಂಭೀರ್ ಶಾಕಿಂಗ್ ಉತ್ತರ!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.