ರೋಹಿತ್ ಮತ್ತು ವಿರಾಟ್ ನಡುವೆ ಉತ್ತಮ ನಾಯಕ ಯಾರು? ಗೌತಮ್ ಗಂಭೀರ್ ಶಾಕಿಂಗ್ ಉತ್ತರ!

ವಿರಾಟ್ ಕೊಹ್ಲಿಗಿಂತಲೂ ರೋಹಿತ್ ಶರ್ಮಾ ಹೆಚ್ಚಿನ ಯಶಸ್ಸನ್ನು ಸಾಧಿಸಿದ್ದಾರೆ. ಇಬ್ಬರಿಗೂ ಹೋಲಿಸಿದರೆ ರೋಹಿತ್ ಸ್ವಲ್ಪ ಉತ್ತಮ ನಾಯಕ ಎಂದು ಗಂಭೀರ್ ನಂಬಿದ್ದಾರೆ. ರೋಹಿತ್ ಅವರನ್ನು ಗಂಭೀರ್ ಶ್ಲಾಘಿಸಿದ್ದಾರೆ. 

Written by - Puttaraj K Alur | Last Updated : Dec 4, 2021, 08:18 AM IST
  • ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಾಯಕತ್ವದಲ್ಲಿ ಯಾರು ಬೆಸ್ಟ್..?
  • ಕೊಹ್ಲಿಗಿಂತಲೂ ರೋಹಿತ್ ಹೆಚ್ಚು ಸಾಧನೆ ಮಾಡಿದ್ದಾರೆಂದ ಗೌತಮ್ ಗಂಭೀರ್
  • ತಮಗೆ ಸಿಗುವಷ್ಟು ಬೆಂಬಲವನ್ನು ರೋಹಿತ್ ಸಹ ಆಟಗಾರರಿಗೂ ನೀಡುತ್ತಾರೆ
ರೋಹಿತ್ ಮತ್ತು ವಿರಾಟ್ ನಡುವೆ ಉತ್ತಮ ನಾಯಕ ಯಾರು? ಗೌತಮ್ ಗಂಭೀರ್ ಶಾಕಿಂಗ್ ಉತ್ತರ! title=
ಕೊಹ್ಲಿ-ರೋಹಿತ್ ಯಾರು ಉತ್ತಮ ನಾಯಕ?

ನವದೆಹಲಿ: ಇತ್ತೀಚೆಗಷ್ಟೇ ಭಾರತದ ಟಿ-20 ತಂಡದ ನಾಯಕರಾಗಿ ಹಿಟ್ ಮ್ಯಾನ್ ರೋಹಿತ್ ಶರ್ಮಾ(Rohit Sharma) ನೇಮಕಗೊಂಡಿದ್ದಾರೆ. ‘ರನ್ ಮಷಿನ್’ ಖ್ಯಾತಿಯ ವಿರಾಟ್ ಕೊಹ್ಲಿಗೆ ಐಸಿಸಿ ಟೂರ್ನಿಗಳಲ್ಲಿ ಸ್ಥಿರ ಯಶಸ್ಸು ಸಿಗಲಿಲ್ಲ. ಹೀಗಾಗಿ ಕೇವಲ ಬ್ಯಾಟಿಂಗ್ ಮೇಲಷ್ಟೇ ಫೋಕಸ್ ಮಾಡಲು ಅವರು ನಾಯಕತ್ವದಿಂದ ಕೆಳಗಿಳಿಯುವ ನಿರ್ಧಾರ ತೆಗೆದುಕೊಂಡರು. ರೋಹಿತ್ ಮತ್ತು ಕೊಹ್ಲಿ ನಡುವೆ ಉತ್ತಮ ನಾಯಕ ಯಾರು? ಎಂಬುದರ ಬಗ್ಗೆ ಹಿರಿಯ ಆಟಗಾರರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಭಾರತದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್(Gautam Gambhir)ಶಾಕಿಂಗ್ ಉತ್ತರ ನೀಡಿದ್ದಾರೆ.

ಕೊಹ್ಲಿ-ರೋಹಿತ್ ಯಾರು ಉತ್ತಮ ನಾಯಕ? 

ವಿರಾಟ್ ಮತ್ತು ರೋಹಿತ್ ನಾಯಕತ್ವದ ಬಗ್ಗೆ ಗೌತಮ್ ಗಂಭೀರ್ ಬಹುದೊಡ್ಡ ಹೇಳಿಕೆ ನೀಡಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿರುವ ಗಂಭೀರ್, ‘ರೋಹಿತ್ ಶರ್ಮಾ ಇದೀಗ ಟಿ-20 ನಾಯಕತ್ವ(T20 Captain)ವನ್ನು ವಹಿಸಿಕೊಂಡಿದ್ದಾರೆ. ಆದ್ದರಿಂದ ನೀವು ಸ್ವಲ್ಪ ಸಮಯ ಕಾಯಬೇಕಾಗಿದೆ. ರೋಹಿತ್ ಐಪಿಎಲ್‌ನಲ್ಲಿ 5 ಟ್ರೋಫಿಗಳನ್ನು ಗೆದ್ದಿದ್ದಾರೆ, ಅವರಲ್ಲಿ ಉತ್ತಮ ನಾಯಕತ್ವ(Better Captain) ಗುಣಗಳಿವೆ ಎಂಬುದನ್ನು ಇದು ತಿಳಿಸುತ್ತದೆ. ಟಿ-20 ಕ್ರಿಕೆಟ್‌ನಲ್ಲಿ ನೀವು ಕೆಲವೊಮ್ಮೆ ಒಂದು ಹೆಜ್ಜೆ ಮುಂದೆ ಇರಬೇಕು. ನೀವು ಯಾವುದೇ ಪಂದ್ಯವನ್ನು ಎದುರಾಳಿ ತಂಡಕ್ಕೆ ಸುಲಭವಾಗಿ ಬಿಟ್ಟುಕೊಡಬಾರದು. ರೋಹಿತ್ ಯಾವತ್ತೂ ಪಂದ್ಯವನ್ನು ಸುಲಭವಾಗಿ ಬಿಟ್ಟುಕೊಡುವವರಲ್ಲ. ಅವರ ಆಟದಲ್ಲಿ ಆಕ್ರಮಣಶೀಲತೆ ನಮಗೆ ಗೋಚರಿಸುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಈ ಸುನಿಲ್ ಗವಾಸ್ಕರ್ ಸಲಹೆಯು ಶತಕ ಗಳಿಸಲು ಸಹಾಯ ಮಾಡಿತು- ಮಯಾಂಕ್ ಅಗರ್ವಾಲ್

 ಕೊಹ್ಲಿಗಿಂತಲೂ ರೋಹಿತ್ ‍ಗೆ ಹೆಚ್ಚಿನ ಯಶಸ್ಸು

ವಿರಾಟ್ ಕೊಹ್ಲಿ(Virat Kohli)ಗಿಂತಲೂ ರೋಹಿತ್ ಶರ್ಮಾ ಹೆಚ್ಚಿನ ಯಶಸ್ಸನ್ನು ಸಾಧಿಸಿದ್ದಾರೆ. ಇಬ್ಬರಿಗೂ ಹೋಲಿಸಿದರೆ ರೋಹಿತ್ ಸ್ವಲ್ಪ ಉತ್ತಮ ನಾಯಕ ಎಂದು ಗಂಭೀರ್ ನಂಬಿದ್ದಾರೆ. ರೋಹಿತ್ ಅವರನ್ನು ಗಂಭೀರ್ ಶ್ಲಾಘಿಸಿದ್ದಾರೆ. ‘ಯಾವಾಗಲೂ ಅಭದ್ರತೆಯಿಂದ ಆಟ ಆಡಬಾರದು. ಹೀಗಾದಾಗ ನೀವು ಅ ಆಟಗಾರನ ಬಗ್ಗೆ ಹೆಚ್ಚು ಚಿಂತಿಸುತ್ತೀರಿ. ನೀವು ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯವಾದರೆ ತಂಡಕ್ಕೆ ಒಳಿತಾಗುತ್ತದೆ. ರೋಹಿತ್ ಶರ್ಮಾ ಅವರಿಗೆ ಎಷ್ಟು ಬೆಂಬಲವಿದೆಯೋ, ಅವರು ಯುವ ಆಟಗಾರರನ್ನು ಸಹ ಬೆಂಬಲಿಸುತ್ತಾರೆ ಎಂದು ನನಗೆ ಖಾತ್ರಿಯಿದೆ’ ಅಂತಾ ಹೇಳಿದ್ದಾರೆ.

ಅದ್ಭುತ ಸೃಷ್ಟಿಸಿದ ರೋಹಿತ್ ಶರ್ಮಾ

T-20 ವಿಶ್ವಕಪ್ ಮುಗಿದ ನಂತರ ರೋಹಿತ್ ಶರ್ಮಾ ಇತ್ತೀಚೆಗೆ ಭಾರತದ T-20 ತಂಡದ ನಾಯಕತ್ವದ ಸಾರಥ್ಯ ವಹಿಸಿಕೊಂಡರು. ಕೆಲವು ದಿನಗಳ ಹಿಂದೆ ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಟಿ-20 ಸರಣಿಯಲ್ಲಿ ರೋಹಿತ್ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದರು. ರೋಹಿತ್ ನಾಯಕತ್ವದಲ್ಲಿ ಟೀಂ ಇಂಡಿಯಾ 3 ಪಂದ್ಯಗಳ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ. ಟೀಂ ಇಂಡಿಯಾದ ನೂತನ ಕೋಚ್ ಆದ ನಂತರ ರಾಹುಲ್ ದ್ರಾವಿಡ್ ಅವರ ಮೊದಲ ಸರಣಿ ಇದಾಗಿದೆ. ಇದರೊಂದಿಗೆ 2022ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ-20 ವಿಶ್ವಕಪ್‌ನಲ್ಲಿ ರೋಹಿತ್ ಮತ್ತು ದ್ರಾವಿಡ್ ಇಬ್ಬರೂ ಭಾರತವನ್ನು ಗೆಲುವಿನತ್ತ ಮುನ್ನಡೆಸುತ್ತಾರೆಂದು ದೊಡ್ಡ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

ಇದನ್ನೂ ಓದಿ: India vs New Zealand, 2nd Test: ಕನ್ನಡಿಗ ಮಾಯಾಂಕ್ ಆಗ್ರವಾಲ್ ಭರ್ಜರಿ ಶತಕ, ಸುಸ್ಥಿತಿಯಲ್ಲಿ ಭಾರತ ತಂಡ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News