RCB vs SRH:‌ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವಿನ 41 ನೇ ಲೀಗ್ ಪಂದ್ಯವು ಪ್ರಸ್ತುತ ಹೈದರಾಬಾದ್‌ನಲ್ಲಿ ನಡೆಯುತ್ತಿದೆ. ಇದರಲ್ಲಿ ಆರ್‌ಸಿಬಿ ನಾಯಕ ಫಾಪ್ ಡು ಪ್ಲೆಸಿಸ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.


COMMERCIAL BREAK
SCROLL TO CONTINUE READING

ಇದು ಆರ್‌ಸಿಬಿಯ 250ನೇ ಐಪಿಎಲ್ ಪಂದ್ಯವಾಗಿದೆ. ಆರ್ಸಿಬಿಯ ಮೊದಲ ಪಂದ್ಯದಲ್ಲಿ ಆಡಿದ್ದ ವಿರಾಟ್ ಕೊಹ್ಲಿ ಇಂದು ಆರ್ಸಿಬಿಯ 250ನೇ ಐಪಿಎಲ್ ಪಂದ್ಯದಲ್ಲೂ ಆಡಿದ್ದಾರೆ. ಇಂದಿನ ಪಂದ್ಯ ವಿರಾಟ್ ಕೊಹ್ಲಿ ಅವರ 246ನೇ ಐಪಿಎಲ್ ಪಂದ್ಯವಾಗಿದೆ.


ಇದನ್ನೂ ಓದಿ-Sachin Tendulkar: ಪ್ರತಿ ತಿಂಗಳೂ ಲಕ್ಷಗಟ್ಟಲೇ ಆದಾಯ.. ಸಚಿನ್ ತೆಂಡೂಲ್ಕರ್ ಎಷ್ಟು ಸಾವಿರ ಕೋಟಿ ಆಸ್ತಿಗೆ ಒಡೆಯ ಗೊತ್ತಾ?


ಫಾಪ್ ಡು ಪ್ಲೆಸಿಸ್ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಆರಂಭಿಕರಾಗಿ ಬಿರುಸಿನ ದಾಳಿ ನಡೆಸಿದರು.. ಇದರಲ್ಲಿ ಫಾಪ್ ಡುಪ್ಲೆಸಿಸ್ 25 ರನ್ ಗಳಿಸಿ ಔಟಾದರು. ವಿಲ್ ಜಾಕ್ಸ್ 6 ರನ್ ಗಳಿಸಿ ಔಟಾದರು. ನಂತರ ಮಧ್ಯಮ ಕ್ರಮಾಂಕದಲ್ಲಿ ಬಂದ ರಜತ್ ಪಾಟಿದಾರ್ ವಿರಾಟ್ ಕೊಹ್ಲಿ ಜೊತೆಗೂಡಿ ಭರ್ಜರಿಯಾಗಿ ಆಡಿದರು.


ಇದನ್ನೂ ಓದಿ-Sachin Tendulkar birthday: 18 ವರ್ಷದ ಸಚಿನ್ ತೆಂಡೂಲ್ಕರ್ 23 ವರ್ಷದ ಅಂಜಲಿಯನ್ನು ಪ್ರೀತಿಸಿದ್ದು ಹೇಗೆ ಗೊತ್ತಾ? ಲವ್ ಸ್ಟೋರಿ ಶುರುವಾಗಿದ್ದು ಎಲ್ಲಿ?


ಅವರು 20 ಎಸೆತಗಳಲ್ಲಿ 2 ಬೌಂಡರಿ ಮತ್ತು 5 ಸಿಕ್ಸರ್‌ಗಳ ಸಹಿತ 50 ರನ್ ಗಳಿಸಿದರು. ಅವರ ನಂತರ ಟಿ20 ಕ್ರಿಕೆಟ್‌ನಲ್ಲಿ 94ನೇ ಅರ್ಧಶತಕ ಪೂರೈಸಿದ ಕೊಹ್ಲಿ 43 ಎಸೆತಗಳಲ್ಲಿ 4 ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿದಂತೆ 51 ರನ್ ಗಳಿಸಿ ಔಟಾದರು. ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ 29 ರನ್ ಗಳಿಸುವ ಮೂಲಕ ಈ ಋತುವಿನಲ್ಲಿ 400 ರನ್ ದಾಟಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು ಮತ್ತು 10 ನೇ ಋತುವಿನಲ್ಲೂ 400 ರನ್ ದಾಟಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಲ್ಲದೇ ಈ ಪಂದ್ಯದಲ್ಲಿ ರಜತ್ ಪಾಟಿದಾರ್‌ ಭರ್ಜರಿ ಬ್ಯಾಟ್ ಬೀಸಿದ್ದಾರೆ.. ಐಪಿಎಲ್ 2024 ರ ಆರಂಭದಲ್ಲಿ ತೊಂದರೆಗೊಳಗಾಗಿದ್ದ ಪಾಟಿದಾರ್ ಮತ್ತೆ ಫಾರ್ಮ್‌ಗೆ ಮರಳಿದ್ದಾರೆ.. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.