IPL Auction 2024: ಐಪಿಎಲ್ 2024 ಹರಾಜಿನ ಸಿದ್ಧತೆಗಳು ಪೂರ್ಣಗೊಂಡಿವೆ. ಡಿಸೆಂಬರ್ 19 ರಂದು ದುಬೈನಲ್ಲಿ ಹರಾಜು ನಡೆಯಲಿದೆ. ಈ ಸಂದರ್ಭದಲ್ಲಿ ಆಟಗಾರರ ಮೇಲೆ ಕೋಟಿ ಮೌಲ್ಯದ ಬಿಡ್ ಮಾಡಲಾಗುತ್ತದೆ. ಅಂದಹಾಗೆ ಈ ಬಾರಿಯ ಬಿಡ್ಡಿಂಗ್ ಭಾರೀ ಪೈಪೋಟಿಯಿಂದ ಕೂಡಿರಲಿದೆ. ಏಕೆಂದರೆ ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟಾನ್ಸ್ ತೊರೆದು ಮುಂಬೈ ಇಂಡಿಯನ್ಸ್ ಸೇರಿದ್ದು ಒಂದೆಡೆಯಾದ್ರೆ, ಮುಂಬೈ ಕ್ಯಾಪ್ಟನ್ ಆಗಿಯೂ ಆಯ್ಕೆಯಾಗಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ:ದಾವೂದ್ ಇಬ್ರಾಹಿಂ ಸಾವಿನ ಸುದ್ದಿ ಬೆನ್ನಲ್ಲೇ ಆತನ ಬಲಗೈ ಬಂಟ ಛೋಟಾ ಶಕೀಲ್’ನಿಂದ ಬಂತು ಮೆಸೇಜ್!


ಅಂದಹಾಗೆ ಈ ಬಾರಿಯ ಐಪಿಎಲ್‌ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮೊದಲ ಬಾರಿಗೆ ಟ್ರೋಫಿ ಎತ್ತಿ ಹಿಡಿಯುವ ಸುವರ್ಣಾವಕಾಶವಿದೆ. ಆದರೆ ಈ 2 ಆಟಗಾರರನ್ನು ತನ್ನ ತಂಡದಲ್ಲಿ ಸೇರಿಸಿಕೊಳ್ಳಬೇಕು…


ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ್ಸ್‌’ನಲ್ಲಿ ಸದ್ಯ ಸಾಕಷ್ಟು ಹಣವಿದೆ. ಗುಜರಾತ್ ಟೈಟಾನ್ಸ್ ನಂತರ ಬೆಂಗಳೂರು ಹೆಚ್ಚು ಹಣ ಹೊಂದಿದೆ. RCB ಪರ್ಸ್‌’ನಲ್ಲಿ ಈ ಹಿಂದೆ ಒಟ್ಟು 41 ಕೋಟಿ ರೂಪಾಯಿ ಇತ್ತು. ಆ ಬಳಿಕ ಕ್ಯಾಮರೂನ್ ಗ್ರೀನ್ ಅವರನ್ನು ಮುಂಬೈಗೆ 17.5 ಕೋಟಿ ರೂಪಾಯಿಗಳಿಗೆ ವ್ಯಾಪಾರ ಮಾಡಿದರು. ಹೀಗಾಗಿ ಆರ್‌’ಸಿಬಿ ಖಾತೆಯಲ್ಲಿ ಒಟ್ಟು 23.5 ಕೋಟಿ ರೂ. ಇದೆ.


 ಇನ್ನು ಆರ್‌ಸಿಬಿ ಹರಾಜಿನಲ್ಲಿ ಈ ಇಬ್ಬರು ಆಟಗಾರರ ಮೇಲೆ ಬೆಟ್ಟಿಂಗ್ ಮಾಡಲು ಉತ್ತಮ ಅವಕಾಶವಿದೆ. ನ್ಯೂಜಿಲೆಂಡ್ ಆಲ್‌ರೌಂಡರ್ ರಚಿನ್ ರವೀಂದ್ರ ಐಸಿಸಿ ವಿಶ್ವಕಪ್ 2023 ರಲ್ಲಿ ಸಖತ್ ಮೋಡಿ ಮಾಡಿದ್ದರು. ವಿಶ್ವಕಪ್‌’ನ ಕೇವಲ 10 ಪಂದ್ಯಗಳಲ್ಲಿ 578 ರನ್‌ಗಳನ್ನು ಗಳಿಸಿದ್ದ ರಚಿನ್, ಹೆಚ್ಚು ರನ್ ಗಳಿಸಿದ ವಿಷಯದಲ್ಲಿ ನಾಲ್ಕನೇ ಸ್ಥಾನದಲ್ಲಿದ್ದರು.


ಇದನ್ನೂ ಓದಿ: ಬರೀ ಹೊಟ್ಟೆಯಲ್ಲಿ ವಾರಕ್ಕೆ ಮೂರಾದ್ರೂ ಪೇರಲ ಎಲೆ ತಿನ್ನಿ… ಈ ಕಾಯಿಲೆಗಳಿಗೆ ಹೇಳಿ ಶಾಶ್ವತವಾಗಿ ಗುಡ್ ಬೈ!


ಮತ್ತೊಬ್ಬ ಆಟಗಾರನೆಂದರೆ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್ ಟ್ರಾವಿಸ್ ಹೆಡ್. ವಿಶ್ವಕಪ್‌’ನಲ್ಲಿ ಈ ಆಟಗಾರನೇ ಟೀಂ ಇಂಡಿಯಾ ಫೈನಲ್’ನಲ್ಲಿ ಸೋಲಲು ಕಾರಣವಾಗಿದ್ದು. ಇದೀಗ ಈ ಆಟಗಾರನ ಮೇಲೆ RCB ಬಾಜಿ ಕಟ್ಟಲಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ RCB ಈ ಇಬ್ಬರು ಆಟಗಾರರನ್ನು ತಂಡದಲ್ಲಿ ಸೇರಿಸಿಕೊಂಡರೆ, ಈ ಬಾರಿಯ IPL ಟ್ರೋಫಿ ಪಕ್ಕಾ ಬೆಂಗಳೂರು ತಂಡದ್ದೇ ಎಂದೇ ಹೇಳಬಹುದು.


 


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ