Womens Premier League 2025: ಮಹಿಳಾ ಐಪಿಎಲ್ ಎಂದೇ ಖ್ಯಾತಿಯಾಗಿರುವ ವುಮೆನ್ಸ್ ಪ್ರೀಮಿಯರ್ ಲೀಗ್​​ನ ಸೀಸನ್-3 ಮುಂದಿನ ತಿಂಗಳು ಫೆಬ್ರವರಿ 14ರಿಂದ ಶುರುವಾಗಲಿದೆ. 5 ತಂಡಗಳ ನಡುವಣ ಈ ಪಂದ್ಯಾವಳಿಯ ಫೈನಲ್ ಮ್ಯಾಚ್ ಮಾರ್ಚ್ 15ರಂದು ನಡೆಯಲಿದೆ. ಫೆಬ್ರವರಿ 14ರಂದು ವಡೋದರಾದ ಕೊಟಂಬಿ ಕ್ರೀಡಾಂಗಣದಲ್ಲಿ ಗುಜರಾತ್ ಜೈಂಟ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡಗಳ ನಡುವೆ ಸಂಜೆ 7:30ಕ್ಕೆ ಮೊದಲ ಪಂದ್ಯ ನಡೆಯಲಿದೆ. 


COMMERCIAL BREAK
SCROLL TO CONTINUE READING

ಮಾರ್ಚ್‌ 13ರಂದು ಮುಂಬೈನ ಬ್ರಬೋರ್ನ್ ಕ್ರೀಡಾಂಗಣದಲ್ಲಿ ಸಂಜೆ 7:30ಕ್ಕೆ ಎಲಿಮಿನೇಟರ್‌ ಪಂದ್ಯ ನಡೆಯಲಿದೆ. ಅದೇ ರೀತಿ ಮಾರ್ಚ್‌ 15ರಂದು ಅದೇ ಕ್ರೀಡಾಂಗಣದಲ್ಲಿ ಸಂಜೆ 7:30ಕ್ಕೆ ಫೈನಲ್‌ ಪಂದ್ಯ ನಡೆಯಲಿದೆ. ಮಹಿಳಾ ಪ್ರೀಮಿಯರ್‌ ಲೀಗ್‌ನ ಒಟ್ಟು 22 ಪಂದ್ಯಗಳು ನಡೆಯಲಿದ್ದು, ಈ ಪೈಕಿ ಒಟ್ಟು 8 ಪಂದ್ಯಗಳು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿವೆ. 


ಇದನ್ನೂ ಓದಿ: ಬುಮ್ರಾ ಬೆನ್ನಲ್ಲೇ  ಮತ್ತೋರ್ವ ಟೀಂ ಇಂಡಿಯಾ ಆಟಗಾರನಿಗೆ ಗಾಯ!  IPL Auctionನಲ್ಲಿ 23.75 ಕೋಟಿಗೆ ಖರೀದಿಯಾಗಿದ್ದ ಪ್ಲೇಯರ್


ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಪಂದ್ಯಗಳು!!


ಫೆಬ್ರವರಿ 21ರಂದು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್‌ vs ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ನಡುವೆ ರೋಚಕ ಸೆಣಸಾಟ ನಡೆಯಲಿದೆ. ಇದಾದ ಬಳಿಕ ಫೆ.24ರಂದು ಯುಪಿ ವಾರಿಯರ್ಜ್ vs ಆರ್‌ಸಿಬಿ ಮುಖಾಮುಖಿಯಾಗಲಿವೆ. ಇದಾದ ಬಳಿಕ ಫೆ.27ರಂದು ಗುಜರಾತ್ ಜೈಂಟ್ಸ್ vs ಆರ್‌ಸಿಬಿ ಮತ್ತೆ ಮುಖಾಮುಖಿಯಾಗಲಿವೆ. ಮಾರ್ಚ್‌ 1ರಂದು ದೆಹಲಿ ಕ್ಯಾಪಿಟಲ್ಸ್‌ vs ಆರ್‌ಸಿಬಿ ನಡುವೆ ಪಂದ್ಯ ನಡೆಯಲಿದೆ.


ಬೆಂಗಳೂರಿಗರು ಒಟ್ಟು 4 ಆರ್‌ಸಿಬಿ ಪಂದ್ಯಗಳನ್ನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಣ್ತುಂಬಿಕೊಳ್ಳಬಹುದು. ಅದೇ ರೀತಿ ಬೇರೆ ಬೇರೆ ತಂಡಗಳ 4 ಪಂದ್ಯಗಳನ್ನೂ ವೀಕ್ಷಿಸುವ ಅವಕಾಶ ಸಿಗಲಿದೆ. ಈಗಾಗಲೇ ಮಹಿಳಾ ಪ್ರೀಮಿಯರ್‌ ಲೀಗ್‌ಗೆ ಸಕಲ ಸಿದ್ಧತೆಗಳನ್ನ ಮಾಡಿಕೊಳ್ಳಲಾಗುತ್ತಿದೆ. ವಿವಿಧ ತಂಡಗಳ ಆಟಗಾರ್ತಿಯರು ಸಹ ಈ ಪಂದ್ಯಾವಳಿಯಲ್ಲಿ ಭಾಗವಹಿಸಲು ಉತ್ಸುಕರಾಗಿದ್ದಾರೆ.


ಇದನ್ನೂ ಓದಿ: IND Vs ENG 1ನೇ ಟಿ20 ಪಂದ್ಯಕ್ಕೂ ಮುನ್ನ ಕಾಳಿಘಾಟ್ ದೇವಸ್ಥಾನಕ್ಕೆ ಗೌತಮ್ ಗಂಭೀರ್ ಭೇಟಿ ನೀಡಿದ್ದು ಯಾಕೆ?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.