David Warner Injured: ನವದೆಹಲಿ. ಆಸ್ಟ್ರೇಲಿಯಾದ ಸ್ಟಾರ್ ಓಪನರ್ ಡೇವಿಡ್ ವಾರ್ನರ್ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಭಾರತ ವಿರುದ್ಧ ದೆಹಲಿಯಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ನ ಉಳಿದ ಪಂದ್ಯದಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಅವರ ಸ್ಥಾನಕ್ಕೆ ಮ್ಯಾಥ್ಯೂ ರೆನ್ಶಾ ಅವರನ್ನು ಪ್ಲೇಯಿಂಗ್ XI ನಲ್ಲಿ ಸೇರಿಸಲಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: IND vs AUS: 2ನೇ ಟೆಸ್ಟ್ ಜೊತೆ ಅಂತ್ಯವಾಯಿತು ಟೀಂ ಇಂಡಿಯಾದ ಈ ಆಟಗಾರನ ವೃತ್ತಿ ಜೀವನ!


ಶುಕ್ರವಾರದ ಪಂದ್ಯದ ಆರಂಭದ ದಿನ ಆಸ್ಟ್ರೇಲಿಯಾದ ಇನಿಂಗ್ಸ್‌ನ 10ನೇ ಓವರ್‌ನಲ್ಲಿ ಮೊಹಮ್ಮದ್ ಸಿರಾಜ್ ಎಸೆದ ಬಾಲ್ ವಾರ್ನರ್ ತಲೆಗೆ ಬಡಿದಿತ್ತು. ಈ ಹಿಂದೆ ಎಡಗೈ ಬ್ಯಾಟ್ಸ್‌ಮನ್ ಕೂಡ ಮೊಣಕೈ ಗಾಯಕ್ಕೆ ಒಳಗಾಗಿದ್ದರು. ಈ ಗಾಯದ ನಂತರ, ವೈದ್ಯರು ಮೈದಾನದಲ್ಲಿ ಅವರಿಗೆ ಚಿಕಿತ್ಸೆ ನೀಡಿದರು.


ಇದೀಗ ಭಾರತ ತಂಡ ಬ್ಯಾಟಿಂಗ್‌ಗೆ ಬಂದಾಗ 36 ವರ್ಷದ ಈ ಆಟಗಾರ ಫೀಲ್ಡಿಂಗ್‌ಗೆ ಬಂದಿರಲಿಲ್ಲ. ಕ್ರಿಕೆಟ್ ಆಸ್ಟ್ರೇಲಿಯಾ ಹೊರಡಿಸಿದ ಹೇಳಿಕೆಯ ಪ್ರಕಾರ, "ಕ್ರಿಕೆಟ್ ಆಸ್ಟ್ರೇಲಿಯಾದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಇಂದೋರ್‌ನಲ್ಲಿ ನಡೆಯಲಿರುವ ಮೂರನೇ ಟೆಸ್ಟ್‌ಗೆ ಮುಂಚಿತವಾಗಿ ವಾರ್ನರ್, ಅವರ ಆಟದ ಪ್ರೋಟೋಕಾಲ್ ಅನ್ನು ಅನುಸರಿಸಿ ಹಿಂತಿರುಗುತ್ತಾರೆ" ಎಂದು ಹೇಳಿದೆ.


ಮೊದಲ ದಿನದ ಆಟದ ಅಂತ್ಯದ ನಂತರ, ಸಹ ಆರಂಭಿಕ ಆಟಗಾರ ಉಸ್ಮಾನ್ ಖವಾಜಾ ಅವರು ವಾರ್ನರ್ 'ಸ್ವಲ್ಪ ಆಯಾಸಗೊಂಡಿದ್ದಾರೆ. ವಾರ್ನರ್ ಗಾಯದಿಂದಾಗಿ ರೆನ್‌ಶಾ ತಂಡಕ್ಕೆ ವಾಪಸಾಗಿದ್ದಾರೆ ಎಂದು ಖವಾಜಾ ಹೇಳಿದ್ದರು,


ಇದನ್ನೂ ಓದಿ: WPL 2023: ಆರ್​ಸಿಬಿ ಕ್ಯಾಪ್ಟನ್ ಆಗಿ ಸ್ಮೃತಿ ಮಂಧಾನಾ ಆಯ್ಕೆ!


ನಾಲ್ಕು ಪಂದ್ಯಗಳ ಸರಣಿಯ ಆರಂಭಿಕ ಟೆಸ್ಟ್‌ನಲ್ಲಿ ಶೂನ್ಯ ಮತ್ತು ಎರಡು ರನ್ ಗಳಿಸಿದ ನಂತರ ರೆನ್‌ಶಾ ಅವರನ್ನು ತಂಡದಿಂದ ಕೈಬಿಡಲಾಗಿತ್ತು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.