Rishabh Pant : ಕಾರು ಅಪಘಾತಕ್ಕೊಳಗಾಗಿದ್ದ ಕ್ರಿಕೆಟಿಗ ರಿಷಬ್‌ ಪಂತ್‌ ಅವರನ್ನು ರಕ್ಷಿಸಿದ ಜನರನ್ನು ʼಗುಡ್ ಸಮರಿಟನ್ʼ ಯೋಜನೆಯಡಿಯಲ್ಲಿ ಗೌರವಿಸಲಾಗುವುದು ಮತ್ತು ಬಹುಮಾನ ನೀಡಲಾಗುವುದು ಎಂದು ಉತ್ತರಾಖಂಡ ಪೊಲೀಸ್‌ ಮಹಾನಿರ್ದೇಶಕ ಅಶೋಕ್‌ ಕುಮಾರ್‌ ಅವರು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಭಾರತೀಯ ಕ್ರಿಕೆಟಿಗ ರಿಷಭ್ ಪಂತ್ ಡಿಸೆಂಬರ್ 30 ರಂದು ದೆಹಲಿಯಿಂದ ರೂರ್ಕಿಗೆ ಹಿಂದಿರುಗುತ್ತಿದ್ದಾಗ ಭೀಕರ ಅಪಘಾತಕ್ಕೊಳಗಾದರು. ಹಮ್ಮದ್‌ಪುರ ಝಾಲ್ ಬಳಿ ರೂರ್ಕಿಯ ನರ್ಸನ್ ಗಡಿಯಲ್ಲಿ ಪಂತ್ ಅವರ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ.  ಅಪಘಾತದಲ್ಲಿ ಭೀಕರವಾಗಿ ಗಾಯಗೊಂಡು ರಸ್ತೆ ಪಕ್ಕ ಬಿದ್ದು ನರಳುತ್ತಿದ್ದ ಪಂತ್‌ ಅವರನ್ನು ಜನರು ರಕ್ಷಿಸಿದ್ದರು. ಇದೀಗ ಉತ್ತರಾಖಂಡದ ಡಿಜಿಪಿ ಅಶೋಕ್ ಕುಮಾರ್ ಅವರು ಸಹಾಯ ಮಾಡಿದ ದಾರಿಹೋಕರನ್ನು ಗೌರವಿಸುವುದಾಗಿ ತಿಳಿಸಿದ್ದಾರೆ.


ಇದನ್ನೂ ಓದಿ: Rishabh Pant Health Bulletine: ರಿಷಬ್ ಪಂತ್ ಚಿಕಿತ್ಸೆ ಜವಾಬ್ದಾರಿ ಹೊತ್ತ ಬಿಸಿಸಿಐ-ದೆಹಲಿಗೆ ಶಿಫ್ಟ್ ಸಾಧ್ಯತೆ: ಹೆಲ್ತ್ ಬುಲೆಟಿನ್ ಹೀಗಿದೆ


ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ರಿಷಬ್ ಪಂತ್ ಕಾರು ಅಪಘಾತವಾಗಿತ್ತು. ಘಟನೆಯ ಸಂದರ್ಭದಲ್ಲಿ ಸಹಾಯ ಮಾಡಲು ಮುಂದೆ ಬಂದ ಹರಿಯಾಣ ರೋಡ್‌ವೇಸ್ ಚಾಲಕರು ಮತ್ತು ನಿರ್ವಾಹಕರು ಹಾಗು ಇತರೆ ಸ್ಥಳೀಯ ಜನರನ್ನು ʼಗುಡ್ ಸಮರಿಟನ್ ಯೋಜನೆಯಡಿ ಗೌರವಿಸಲಾಗುವುದು ಮತ್ತು ಬಹುಮಾನ ನೀಡಲಾಗುವುದು ಎಂದು ಭಾರತ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಅಧಿಕಾರಿಗಳು ಸಹ ತಿಳಿಸಿದ್ದಾರೆ.


ರಸ್ತೆ ಅಪಘಾತದ ನಂತರ, ಯಾವುದೇ ವ್ಯಕ್ತಿಗೆ ಮೊದಲ ಗಂಟೆ ಸುವರ್ಣ ಅವಧಿಯಾಗಿರುತ್ತದೆ. ಅದು ಜೀವನದ ನಿರ್ಣಾಯಕ ಘಟ್ಟ. ಒಂದು ಗಂಟೆಯೊಳಗೆ ಸಂತ್ರಸ್ತರಿಗೆ ಸರಿಯಾದ ಚಿಕಿತ್ಸೆ ಪಡೆಯುವುದು ಅವಶ್ಯಕವಾಗಿರುತ್ತದೆ. ಸಾಮಾನ್ಯ ಜನರಲ್ಲಿ ಈ ಸಾಮಾಜಿಕ ನಡವಳಿಕೆಯನ್ನು ಉತ್ತೇಜಿಸಲು, ಉತ್ತಮ ಸಮರಿಟನ್ ಯೋಜನೆ ಜಾರಿಗೊಳಿಸಲಾಗಿದೆ. 


ಇದನ್ನೂ ಓದಿ: Cricketer Rishabh Pant Car Accident: ರಿಷಬ್ ಪಂತ್ ತಾಯಿಗೆ ಕರೆ ಮಾಡಿದ ಪ್ರಧಾನಿ ಮೋದಿ: ಕ್ರಿಕೆಟಿಗನ ಕುಟುಂಬಕ್ಕೆ ಧೈರ್ಯ ತುಂಬಿದ ‘ನಾಯಕ’


ಶುಕ್ರವಾರ ಮುಂಜಾನೆ, ರಿಷಬ್ ಪಂತ್ ದೆಹಲಿಯಿಂದ ರೂರ್ಕಿಗೆ ಹಿಂದಿರುಗುತ್ತಿದ್ದಾಗ ಹಮ್ಮದ್‌ಪುರ ಝಲ್ ಬಳಿ ರೂರ್ಕಿಯ ನರ್ಸನ್ ಗಡಿಯಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದರಿಂದ ಅಪಘಾತ ಸಂಭವಿಸಿದೆ. ಕಾರಿನಲ್ಲಿ ಒಬ್ಬರೇ ಇದ್ದ ಪಂತ್ ಅವರ ಬೆನ್ನು, ಹಣೆ ಮತ್ತು ಕಾಲಿಗೆ ಗಾಯಗಳಾಗಿವೆ. ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದಾಗ ಪಂತ್ ಅವರು ತಮ್ಮ ಕಾರನ್ನು ಚಲಾಯಿಸುತ್ತಿದ್ದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.