Rishabh Pant Health Updat : ಟೀಂ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಆಸ್ಪತ್ರೆ ಸೇರಿರುವುದು ಗೊತ್ತಿರುವ ವಿಚಾರ, ಈಗ ಪಂತ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಮರಳಿದ್ದಾರೆ. ಈ ವಿಷಯ ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದಂತಾಗಿದೆ.


COMMERCIAL BREAK
SCROLL TO CONTINUE READING

ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಶೇರ್ ಮಾಡಿದ ರಿಷಬ್ ಪಂತ್


ಈ ಬಗ್ಗೆ ರಿಷಬ್ ಪಂತ್ ಇಂದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋವನ್ನು ಒಂದನ್ನ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋದೊಂದಿಗೆ 'ಹೊರಗೆ ಕುಳಿತಾಗ ಮಾತ್ರ ತಾಜಾ ಗಾಳಿಯನ್ನು ಉಸಿರಾಡಲು ಸಾಧ್ಯ, ತುಂಬಾ ಧನ್ಯನಾಗಿದ್ದೇನೆ' ಎಂದು ಬರೆದುಕೊಂಡಿದ್ದಾರೆ.


BCCI : ಆಸ್ಟ್ರೇಲಿಯಾ ಸರಣಿಗೆ ಕೆಎಲ್ ರಾಹುಲ್​ಗೆ ಸ್ಥಾನ ನೀಡಿ ತಪ್ಪು ಮಾಡುತ್ತಿದೆಯಾ ಬಿಸಿಸಿಐ?


ಇನ್ಸೈಡ್ ಸ್ಪೋರ್ಟ್ ಸುದ್ದಿ ಪ್ರಕಾರ, ಈ ಫೋಟೋ ರಿಷಬ್ ಪಂತ್ ಅವರ ಮನೆಯದ್ದು ಮತ್ತು ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಬರೆದುಕೊಂಡಿದೆ. ಜನವರಿ 4 ರಿಂದ ಅವರನ್ನು ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.


ಪ್ರಾಣಪಾಯದಿಂದ ಪಾರಾಗಿದ್ದ ಪಂತ್ 


30 ಡಿಸೆಂಬರ್ 2022 ರಂದು ರಿಷಬ್ ಪಂತ್ ತನ್ನ ತಾಯಿಯನ್ನು ಭೇಟಿ ಮಾಡಲು ಡಿಸೆಂಬರ್ 30 ರಂದು ಬೆಳಿಗ್ಗೆ ದೆಹಲಿಯಿಂದ ರೂರ್ಕಿಗೆ ಹೋಗುತ್ತಿದ್ದ ವೇಳೆ ಅವರ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಅಪಘಾತಕ್ಕೆ ಈಡಾಗಿದ್ದರು. ಪಂತ್ ಕ್ರಿಕೆಟ್ ಮೈದಾನಕ್ಕೆ ಮರಳಲು ಇನ್ನೂ ಸಮಯ ತೆಗೆದುಕೊಳ್ಳುತ್ತದೆ. ಮಾಧ್ಯಮ ವರದಿಗಳ ಪ್ರಕಾರ, ಅವರಿಗೆ ಸುಮಾರು ಇನ್ನು ಒಂದು ತಿಂಗಳಲ್ಲಿ ಮತ್ತೊಂದು ಶಸ್ತ್ರಚಿಕಿತ್ಸೆ ಅಗತ್ಯವಿದೆ. ಎರಡನೇ ಶಸ್ತ್ರಚಿಕಿತ್ಸೆ ಯಾವಾಗ ನಡೆಯಲಿದೆ ಎಂದು ವೈದ್ಯರು ನಿರ್ಧರಿಸುತ್ತಾರೆ ಎಂಬ ಮಾಹಿತಿ ತಿಳಿದು ಬಂದಿದೆ.


2022ರಲ್ಲಿ ಟೀಂ ಇಂಡಿಯಾದ ಪ್ರದರ್ಶನ ಹೀಗಿತ್ತು


2022 ರಲ್ಲಿ, ರಿಷಬ್ ಪಂತ್ ಟೀಂ ಇಂಡಿಯಾಗಾಗಿ ಒಟ್ಟು 7 ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ, ಪಂತ್ 61.81 ಸರಾಸರಿಯಲ್ಲಿ 680 ರನ್ ಗಳಿಸಿದರು. ಮತ್ತೊಂದೆಡೆ, ಪಂತ್ ಕಳೆದ ವರ್ಷ ಭಾರತದ ಪರ 12 ಏಕದಿನ ಪಂದ್ಯಗಳಲ್ಲಿ 37.33 ಸರಾಸರಿಯಲ್ಲಿ 336 ರನ್ ಗಳಿಸಿದ್ದರು. ಟಿ 20 ಬಗ್ಗೆ ಮಾತನಾಡುತ್ತಾ, ಈ ಸ್ವರೂಪದಲ್ಲಿ, ಅವರು ಕಳೆದ ವರ್ಷ 25 ಪಂದ್ಯಗಳನ್ನು ಆಡುವಾಗ 21.41 ಸರಾಸರಿಯಲ್ಲಿ ಕೇವಲ 364 ರನ್ ಗಳಿಸಿದರು.


ಇದನ್ನೂ ಓದಿ : Team India : ಟೀಂ ಇಂಡಿಯಾದ ಈ ಇಬ್ಬರು ಆಟಗಾರರ ನಡುವೆ 'ಪೈಪೋಟಿ' : ಐಸಿಸಿಯಿಂದ ಅಂತಿಮ ನಿರ್ಧಾರ!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.