Robin Minz father statement : ಐಪಿಎಲ್ 2024ಕ್ಕೂ ಮುನ್ನ ನಡೆದ ಮಿನಿ ಹರಾಜಿನಲ್ಲಿ ಅನೇಕ ಅನ್‌ಕ್ಯಾಪ್ ಆಟಗಾರರ ಅದೃಷ್ಟ ಮಿಂಚಿದೆ. 20 ಲಕ್ಷ ಮೂಲ ಬೆಲೆಯ ಯುವ ಕ್ರಿಕೆಟಿಗ ಕೆಲವೇ ನಿಮಿಷಗಳಲ್ಲಿ ಮಿಲಿಯನೇರ್ ಆಗಿ ಹೊರ ಹೊಮ್ಮಿದ್ದಾರೆ. ಈ ಪಟ್ಟಿಯಲ್ಲಿ ಜಾರ್ಖಂಡ್ ಆಟಗಾರ ರಾಬಿನ್ ಮಿಂಜ್ ಕೂಡಾ ಸೇರಿದ್ದಾರೆ. ಗುಜರಾತ್ ಟೈಟಾನ್ಸ್ ಅವರನ್ನು 3.6 ಕೋಟಿ ರೂಪಾಯಿಗಳಿಗೆ ಖರೀದಿಸಿದೆ. ಇದೀಗ ರಾಬಿನ್ ಮಿಂಜ್ ತಂದೆ ಧೋನಿ ಅವರಾಡಿದ ಮಾತುಗಳ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ.   ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ರಾಬಿನ್ ತಂದೆಗೆ ಹಿಂದೆಯೇ ಈ ರೀತಿ ಮಾತು ನೀಡಿದ್ದರಂತೆ. 


COMMERCIAL BREAK
SCROLL TO CONTINUE READING

ರಾಬಿನ್ ಮಿಂಜ್  ತಂದೆ ಮಾತು : 
ತನ್ನ ಮಗನನ್ನು ಐಪಿಎಲ್‌ನಲ್ಲಿ ಖರೀದಿಸಲಾಗಿದೆ ಎಂದು ವಿಷಯ ಹೇಗೆ ತಿಳಿಯಿತು ಎನ್ನುವುದನ್ನು ರಾಬಿನ್ ಮಿಂಜ್ ತಂದೆ ಮೆಲುಕು ಹಾಕಿದ್ದಾರೆ.  'ಸಿಐಎಸ್‌ಎಫ್  ಯೋಧ ತಮ್ಮ ಬಳಿಗೆ ಬಂದು ತಬ್ಬಿಕೊಂಡು, ಹೇ ಫ್ರಾನ್ಸಿಸ್ ಸರ್, ನೀವು ಮಿಲಿಯನೇರ್ ಆಗಿ ಬಿಟ್ಟಿರಿ ಎಂದು ಹೇಳಿದ್ದರಂತೆ. ರಾಬಿನ್ ಮಿಂಜ್ ಅವರ ತಂದೆ, ನಿವೃತ್ತ ಸೇನಾ ಅಧಿಕಾರಿ ಫ್ರಾನ್ಸಿಸ್ ಕ್ಸೇವಿಯರ್ ಮಿಂಜ್, ರಾಂಚಿ ವಿಮಾನ ನಿಲ್ದಾಣದಲ್ಲಿ ಸಂಸ್ಥೆಯೊಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು. ಬೋರ್ಡಿಂಗ್ ಪಾಸ್‌ಗಳೊಂದಿಗೆ ಪ್ರಯಾಣಿಕರಿಗೆ ಸಹಾಯ ಮಾಡುತ್ತಿದ್ದರು. 


ಇದನ್ನೂ ಓದಿ : ಸ್ಟಾರ್ಕ್, ಕಮ್ಮಿನ್ಸ್ ಮೇಲೆ ಮಾಡಲಾದ ಬಿಡ್ ಬಗ್ಗೆ ಹಿರಿಯ ಕ್ರಿಕೆಟಿಗನ ಅಸಮಾಧಾನ! ಕೊಹ್ಲಿಗೂ ಸಿಗಬೇಕು 42 ಕೋಟಿ ಎಂದ ದಿಗ್ಗಜ !


ಭರವಸೆ ನೀಡಿದ್ದ ಧೋನಿ :  
ಇತ್ತೀಚೆಗೆ ಧೋನಿಯನ್ನು ಭೇಟಿಯಾಗಿರುವ ಕ್ಷಣದ ಬಗ್ಗೆ ಕೂಡಾ ರಾಬಿನ್ ತಂದೆ ಮಾತನಾಡಿದ್ದಾರೆ.'ನಾನು ಇತ್ತೀಚೆಗೆ ಧೋನಿ ಅವರನ್ನು ವಿಮಾನ ನಿಲ್ದಾಣದಲ್ಲಿ ಭೇಟಿಯಾಗಿದ್ದೆ. ಆ ಸಂದರ್ಭದಲ್ಲಿ ಫ್ರಾನ್ಸಿಸ್ ಜೀ, ಯಾರೂ  ಖರೀದಿಸದಿದ್ದರೆ ನಾವು ತೆಗೆದುಕೊಳ್ಳುತ್ತೇವೆ ಎಂದಿದ್ದರಂತೆ. ಇದೀಗ  ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ರಾಬಿನ್‌ಗಾಗಿ ಬಿಡ್ಡಿಂಗ್ ನಲ್ಲಿ ಪೈಪೋಟಿ ಏರ್ಪಟ್ಟಿತ್ತು. ನಂತರ ಗುಜರಾತ್ ಅವರನ್ನು 3 ಕೋಟಿ 60 ಲಕ್ಷಕ್ಕೆ  ಖರೀದಿಸಿತು. 


ರಾಬಿನ್ ಬುಡಕಟ್ಟು ಪ್ರದೇಶದಿಂದ ಬಂದವರು  : 
ರಾಬಿನ್ ಮಿಂಜ್ ಕುಟುಂಬವು ಜಾರ್ಖಂಡ್‌ನ ಗುಮ್ಲಾ ಜಿಲ್ಲೆಯ ಬುಡಕಟ್ಟು ಪ್ರದೇಶದ ತೆಲ್ಗಾಂವ್ ಹಳ್ಳಿಯವರು. ರಾಬಿನ್ ತಂದೆ ಫ್ರಾನ್ಸಿಸ್ ಮಿನ್ಜ್ ಅವರು ಅಥ್ಲೆಟಿಕ್ಸ್‌ನಲ್ಲಿದ್ದರು. ಹೀಗಾಗಿ ಅವರಿಗೆ ಭಾರತೀಯ ಸೇನೆಯಲ್ಲಿ ಕೆಲಸ ಸಿಕ್ಕಿತು. ಅವರು ಸೈನ್ಯದಲ್ಲಿದ್ದಾಗ, ಕುಟುಂಬವು ರಾಂಚಿಗೆ ಸ್ಥಳಾಂತರಗೊಂಡಿತು. ಅಲ್ಲಿ ರಾಬಿನ್ ಗೆ ಕ್ರಿಕೆಟ್ ಆಡುವ ಗೀಳು ಶುರುವಾಯಿತು. ರಾಬಿನ್ ಎಂಎಸ್ ಧೋನಿಯನ್ನು ತನ್ನ ಆರಾಧ್ಯ ಎಂದು ಕರೆಯುತ್ತಾರೆ. ರಾಂಚಿಯ ಪ್ರತಿ ಮಗುವಿನಂತೆ ದೇಶದ ಮುನಿಡ್ನ ಧೋನಿಯಾಗಬೇಕು ಎನ್ನುವುದೇ ರಾಬಿನ್ ಕನಸು ಕೂಡಾ.  


ಇದನ್ನೂ ಓದಿ : CSKಗೆ ರೋಹಿತ್ ಶರ್ಮಾ..! ಐಪಿಎಲ್ ಹರಾಜಿನ ಬೆನ್ನಲ್ಲೇ ಚೆನ್ನೈ ಫ್ರಾಂಚೈಸಿಯಿಂದ ಬಂತು ಶಾಕಿಂಗ್ ನ್ಯೂಸ್


ರಾಂಚಿಯ ಗೇಲ್' ಎನ್ನುತ್ತಾರೆ ಕೋಚ್ : 
ರಾಂಚಿಯ ಸಾನೆಟ್ ಕ್ರಿಕೆಟ್ ಕ್ಲಬ್‌ನಲ್ಲಿ ರಾಬಿನ್ ಮೂವರು ತರಬೇತುದಾರರ ಅಡಿಯಲ್ಲಿ ಅಭ್ಯಾಸ ಮಾಡುತ್ತಾರೆ. ಅವರ ಬ್ಯಾಟಿಂಗ್‌ ಕೋಚ್ ಆಗಿರುವ  ಆಸಿಫ್ ಹಕ್ ರಾಬಿನ್ ಅವರನ್ನು ವೆಸ್ಟ್ ಇಂಡೀಸ್ ಪವರ್‌ಹೌಸ್ ಕ್ರಿಸ್ ಗೇಲ್‌ಗೆ ಹೋಲಿಸಿದ್ದಾರೆ.  'ನಾವು ಅವರನ್ನು ರಾಂಚಿಯ ಗೇಲ್ ಎಂದು ಕರೆಯುತ್ತೇವೆ ಎಂದಿದ್ದಾರೆ ಆಸಿಫ್. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
.