CSKಗೆ ರೋಹಿತ್ ಶರ್ಮಾ..! ಐಪಿಎಲ್ ಹರಾಜಿನ ಬೆನ್ನಲ್ಲೇ ಚೆನ್ನೈ ಫ್ರಾಂಚೈಸಿಯಿಂದ ಬಂತು ಶಾಕಿಂಗ್ ನ್ಯೂಸ್

Rohit Sharma to CSK: ಮುಂಬೈ ಇಂಡಿಯನ್ಸ್ ತಂಡವನ್ನು 5 ಬಾರಿ ಚಾಂಪಿಯನ್ ಮಾಡಿದ ಮಾಜಿ ನಾಯಕ ರೋಹಿತ್ ಶರ್ಮಾ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಮುಂಬೈ ಫ್ರಾಂಚೈಸಿ ರೋಹಿತ್ ಬದಲಿಗೆ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕರನ್ನಾಗಿ ನೇಮಿಸಿದೆ. ಹೀಗಿರುವಾಗ ವ್ಯಾಪಾರ ವಹಿವಾಟಿನ ವೇಳೆ ರೋಹಿತ್ ಮುಂಬೈ ತಂಡವನ್ನು ತೊರೆಯುತ್ತಾರಾ ಎಂಬ ಪ್ರಶ್ನೆ ಈಗ ಎದ್ದಿದೆ.

Written by - Bhavishya Shetty | Last Updated : Dec 20, 2023, 09:41 PM IST
    • ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಮಿನಿ ಹರಾಜು
    • ವಹಿವಾಟಿನ ವೇಳೆ ರೋಹಿತ್ ಮುಂಬೈ ತಂಡವನ್ನು ತೊರೆಯುತ್ತಾರಾ ಎಂಬ ಪ್ರಶ್ನೆ
    • ಮಹೇಂದ್ರ ಸಿಂಗ್ ಧೋನಿ ಚೆನ್ನೈ ತಂಡದ ನಾಯಕರಾಗಿದ್ದಾರೆ
CSKಗೆ ರೋಹಿತ್ ಶರ್ಮಾ..! ಐಪಿಎಲ್ ಹರಾಜಿನ ಬೆನ್ನಲ್ಲೇ ಚೆನ್ನೈ ಫ್ರಾಂಚೈಸಿಯಿಂದ ಬಂತು ಶಾಕಿಂಗ್ ನ್ಯೂಸ್ title=
Chennai Super Kings

Rohit Sharma to CSK: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ರ ಮಿನಿ ಹರಾಜು ಮಂಗಳವಾರ (ಡಿಸೆಂಬರ್ 19) ದುಬೈನಲ್ಲಿ ನಡೆಯಿತು. ಇದೀಗ ಟೂರ್ನಿಗೆ ಸಿದ್ಧತೆ ಆರಂಭವಾಗಿದೆ. ಐಪಿಎಲ್‌ ಮುಂದಿನ ಋತುವನ್ನು ಮಾರ್ಚ್ ಮತ್ತು ಮೇ ನಡುವೆ ಆಯೋಜನೆ ಮಾಡಲಾಗುತ್ತದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ಕಳೆದ ವರ್ಷ ಯಾರಿಗೂ ಬೇಡವಾಗಿದ್ದ ಆಟಗಾರನನ್ನು ಈ ವರ್ಷ 14 ಕೋಟಿ ನೀಡಿ ಖರೀದಿಸಿದ CSK

ಆದರೆ ಈ ನಡುವೆ ಮುಂಬೈ ಇಂಡಿಯನ್ಸ್ ತಂಡವನ್ನು 5 ಬಾರಿ ಚಾಂಪಿಯನ್ ಮಾಡಿದ ಮಾಜಿ ನಾಯಕ ರೋಹಿತ್ ಶರ್ಮಾ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಮುಂಬೈ ಫ್ರಾಂಚೈಸಿ ರೋಹಿತ್ ಬದಲಿಗೆ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕರನ್ನಾಗಿ ನೇಮಿಸಿದೆ. ಹೀಗಿರುವಾಗ ವ್ಯಾಪಾರ ವಹಿವಾಟಿನ ವೇಳೆ ರೋಹಿತ್ ಮುಂಬೈ ತಂಡವನ್ನು ತೊರೆಯುತ್ತಾರಾ ಎಂಬ ಪ್ರಶ್ನೆ ಈಗ ಎದ್ದಿದೆ. ಈ ಮಧ್ಯೆ ಕೆಲವು ಅಭಿಮಾನಿಗಳು ಮತ್ತು ಮಾಧ್ಯಮ ವರದಿಗಳು ರೋಹಿತ್ ವ್ಯಾಪಾರ ವಿಂಡೋದ ಅಡಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಕ್ಕೆ ಹೋಗಬಹುದು ಎಂದು ಹೇಳುತ್ತಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ಚೆನ್ನೈ ತಂಡದ ನಾಯಕರಾಗಿದ್ದಾರೆ. ಆದರೆ ಈ ಎಲ್ಲಾ ಸುದ್ದಿಗಳ ನಡುವೆ ಚೆನ್ನೈ ಫ್ರಾಂಚೈಸಿ ಈ ಸುದ್ದಿಯನ್ನು ತಿರಸ್ಕರಿಸಿದೆ. ಫ್ರಾಂಚೈಸಿ ಸಿಇಒ ಕಾಸಿ ವಿಶ್ವನಾಥನ್ ಮಾತನಾಡಿ, ಈ ಸುದ್ದಿಗಳೆಲ್ಲ ವದಂತಿಗಳು. ಹರಾಜಿನ ಮಧ್ಯದಲ್ಲಿ ನಮ್ಮ ತಂಡವು ರೋಹಿತ್ ಅವರನ್ನು ತೆಗೆದುಕೊಳ್ಳಲು ಯಾವುದೇ ಮನಸ್ಸು ಮಾಡಲಿಲ್ಲ” ಎಂದು ಹೇಳಿದ್ದಾರೆ..

“ಮುಖ್ಯವಾಗಿ ನಾವು ಆಟಗಾರರನ್ನು ವ್ಯಾಪಾರ ಮಾಡುವುದಿಲ್ಲ. ಮುಂಬೈ ಇಂಡಿಯನ್ಸ್‌’ನೊಂದಿಗೆ ವ್ಯಾಪಾರ ಮಾಡಲು ನಮ್ಮಲ್ಲಿ ಆಟಗಾರರೂ ಇಲ್ಲ. ನಾವು ಅವರನ್ನು ಸಂಪರ್ಕಿಸಿಲ್ಲ ಮತ್ತು ನಮಗೆ ಆ ಉದ್ದೇಶವೂ ಇಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಅನ್ನ ಬೇಯುವಾಗ ಒಂದು ಚಮಚ ಈ ಎಣ್ಣೆ ಹಾಕಿ.. ಒಂದೇ ವಾರದಲ್ಲಿ ತೂಕ ಇಳಿಸಲು ಇದಕ್ಕಿಂತ ಬೆಸ್ಟ್ ಉಪಾಯ ಮತ್ತೊಂದಿಲ್ಲ!

ಇತ್ತೀಚೆಗೆ ಕ್ರಿಕ್‌ ಬಜ್ ಕೂಡ ರೋಹಿತ್ ಬಗ್ಗೆ ವರದಿಯನ್ನು ಪ್ರಕಟಿಸಿತ್ತು. ಮುಂಬೈ ಇಂಡಿಯನ್ಸ್‌ಗೆ ಸಂಬಂಧಿಸಿದ ಅಧಿಕಾರಿಯನ್ನು ಉಲ್ಲೇಖಿಸಿ, “ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಮತ್ತು ಜಸ್ಪ್ರೀತ್ ಬುಮ್ರಾ ಬಗ್ಗೆ ಮಾಧ್ಯಮಗಳಲ್ಲಿ ಅನಗತ್ಯ ವರದಿಗಳನ್ನು ಮಾಡುತ್ತಿದೆ. ಅವರು ಎಲ್ಲಿಗೂ ಹೋಗುತ್ತಿಲ್ಲ ಮತ್ತು ಮುಂಬೈ ತಂಡವು ಈ ಎಲ್ಲಾ ಆಟಗಾರರನ್ನು ತಮ್ಮೊಂದಿಗೆ ಇಟ್ಟುಕೊಳ್ಳುತ್ತದೆ. ಹಾರ್ದಿಕ್ ಪಾಂಡ್ಯ ಅವರನ್ನು ನಾಯಕನನ್ನಾಗಿ ಮಾಡಲು ನಿರ್ಧರಿಸುವ ಮೊದಲು, ಎಲ್ಲಾ ಆಟಗಾರರ ಒಪ್ಪಿಗೆಯನ್ನು ತೆಗೆದುಕೊಳ್ಳಲಾಗಿದೆ. ಇದರಲ್ಲಿ ರೋಹಿತ್ ಅವರೂ ಸೇರಿದ್ದಾರೆ” ಎಂದು ಅಧಿಕಾರಿ ಹೇಳಿದ್ದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
.

Trending News