Team India For T20 World Cup : ಟೀಂ ಇಂಡಿಯಾ ಮಾರಕ ಬೌಲರ್ ಜಸ್ಪ್ರೀತ್ ಬುಮ್ರಾ 2022 ರ ಟಿ20 ವಿಶ್ವಕಪ್‌ನಿಂದ ಬಹುತೇಕ ಹೊರಗುಳಿಯಲಿದ್ದಾರೆ. ಈ ಬಗ್ಗೆ ಮಾಜಿ ಕ್ರಿಕೆಟಿಗ ರೋಹನ್ ಗವಾಸ್ಕರ್ ಅವರು ಆಘಾತಕಾರಿ ಹೇಳಿಕೆಯೊಂದು ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಗವಾಸ್ಕರ್ ಹೇಳಿದ್ದು ಹೀಗೆ..!


ಸ್ಪೋರ್ಟ್ಸ್ 18  'ಸ್ಪೋರ್ಟ್ಸ್ ಓವರ್ ದಿ ಟಾಪ್' ಶೋನಲ್ಲಿ ಮಾತನಾಡಿದ ರೋಹನ್ ಗವಾಸ್ಕರ್, ಟಿ20 ವಿಶ್ವಕಪ್‌ನಲ್ಲಿ ಜಸ್ಪ್ರೀತ್ ಬುಮ್ರಾ ಅವರ ಅನುಪಸ್ಥಿತಿ ಟೀಂ ಇಂಡಿಯಾಗೆ ಯಾವತ್ತೂ ಕಾಡಿಲ್ಲ, ಏಕೆಂದರೆ ರೋಹಿತ್ ಶರ್ಮಾ ನೇತೃತ್ವದ ತಂಡವು ಅವರು ಇಲ್ಲದಿದ್ದಾಗ ಹಲವಾರು ಟಿ20 ಸ್ಪೆಷಲಿಸ್ಟ್ ವೇಗಿಗಳೊಂದಿಗೆ ಪಂದ್ಯಗಳನ್ನು ಗೆದ್ದು ಬಿಗಿದೆ. ಬುಮ್ರಾ ಅವರನ್ನು ಬದಲಾವಣೆಯಿಂದ ಟೀಂಗೆ ಲಾಭ ಮತ್ತು ಅವರು ತಂಡಕ್ಕಾಗಿ ಎಷ್ಟು ಆಡುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಹೇಳಿದ್ದಾರೆ.


ಇದನ್ನೂ ಓದಿ : AB de Villiers : 'ನಾನು ಮುಂದಿನ ವರ್ಷ ಚಿನ್ನಸ್ವಾಮಿ ಸ್ಟೇಡಿಯಂಗೆ ಮರಳುತ್ತೇನೆ'


'ಕಳೆದ ವರ್ಷ ಕಡಿಮೆ ಟಿ20 ಪಂದ್ಯ ಆಡಿದ್ದಾನೆ'


ಇನ್ನೂ ಮುಂದುವರೆದು ಮಾತನಾಡಿದ ಗವಾಸ್ಕರ್, 'ಟೀಂ ಇಂಡಿಯಾ ಅವರ ಮೇಲಿನ ಭರವಸೆಯನ್ನ ಕಳೆದುಕೊಂಡಿದೆ, ಆದರೆ ಇದು ನಷ್ಟವೇ? ಜಸ್ಪ್ರೀತ್ ಬುಮ್ರಾ ಕಳೆದ ವರ್ಷ ಎಷ್ಟು ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ ಎಂಬ ಕಾರಣಕ್ಕೆ ನೀವು ಇದನ್ನು ಸೋಲು ಎಂದು ಕರೆಯಬಹುದೆಂದು ನನಗೆ ಖಚಿತವಿಲ್ಲ. ಹಾಗಾಗಿ ಭಾರತ ತಂಡವು ಅವರಿಲ್ಲದೆ ಆಡುವುದನ್ನು ಅಭ್ಯಾಸ ಮಾಡಿಕೊಂಡಿದೆ ಮತ್ತು ಅವರು ಅದಕ್ಕೆ ತಕ್ಕಂತೆ ಯೋಜಿಸಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದರು.


ಬುಮ್ರಾ ಇಲ್ಲದೆ ವೆಸ್ಟ್ ಇಂಡೀಸ್ ಸರಣಿ ಗೆದ್ದ ಟೀಂ ಇಂಡಿಯಾ


ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯ ಹೊರತಾಗಿಯೂ, ಭಾರತ ತಂಡವು 4-1 ರಿಂದ ಸರಣಿಯನ್ನು ಗೆದ್ದುಕೊಂಡಿತು. ಏಕೆಂದರೆ ಅವರು ಬುಮ್ರಾ ಇಲ್ಲದೆ ಕೆರಿಬಿಯನ್‌ನಲ್ಲಿ ವಿಭಿನ್ನ ಯೋಜನೆಗಳನ್ನು ಮಾಡಿದ್ದರು. ಕಳೆದ ಕೆಲವು ಪಂದ್ಯಗಳಲ್ಲಿ ಟೀಂ ಇಂಡಿಯಾದ ಡೆತ್ ಓವರ್‌ಗಳಲ್ಲಿ ಬೌಲಿಂಗ್ ತುಂಬಾ ಕಳಪೆಯಾಗಿತ್ತು. 19ನೇ ಓವರ್ ನಲ್ಲಿ ಟೀಂ ಇಂಡಿಯಾದ ಎಲ್ಲ ಬೌಲರ್ ಗಳು ರನ್ ಕೊಳ್ಳೆ ಹೊಡೆಯುತ್ತಿದ್ದಾರೆ.


ಇದನ್ನೂ ಓದಿ : ICC Men’s T20 World Cup: ಟಿ20 ವಿಶ್ವಕಪ್‌ನಿಂದ ಜಸ್ಪ್ರೀತ್ ಬುಮ್ರಾ ಔಟ್


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.