ಬೆಂಗಳೂರು : ಕ್ರಿಕೆಟ್ ಲೆಜೆಂಡ್ ಎಬಿ ಡಿವಿಲಿಯರ್ಸ್ ಅವರು ಸೋಮವಾರ ಟ್ವಿಟರ್ ಮೂಲಕ ತಮ್ಮ ಎಲ್ಲಾ ಊಹಾಪೋಹಗಳಿಗೆ ಕೊನೆಗೂ ತೆರೆ ಎಳೆದಿದ್ದಾರೆ. ಟ್ವಿಟ್ಟರ್ನಲ್ಲಿ ತನ್ನ ಫಾಲ್ಲೋರ್ಸ್ ಜೊತೆ ಮಾತನಾಡುತ್ತಾ, ಮುಂದಿನ ವರ್ಷ ಚಿನ್ನಸ್ವಾಮಿ ಸ್ಟೇಡಿಯಂಗೆ ಮರಳುತ್ತೇನೆ. ಆದರೆ ಒಂದು ದಶಕದಿಂದ ನನಗೆ ಬೆಂಬಲ ನೀಡಿದ ಎಲ್ಲಾ ಅಭಿಮಾನಿಗಳಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.
ಮಾಜಿ ಕ್ರಿಕೆಟರ್, ಬ್ಯಾಟ್ಸಮನ್ ಎಬಿಡಿ ಐಪಿಎಲ್ 2022 ರ ಸಂದರ್ಭದಲ್ಲಿ ಅವರು ನೀಡಿದ ಹೇಳಿಕೆಯಿಂದ ಉದ್ಭವಿಸಿದ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಇದನ್ನೂ ಓದಿ : ICC Men’s T20 World Cup: ಟಿ20 ವಿಶ್ವಕಪ್ನಿಂದ ಜಸ್ಪ್ರೀತ್ ಬುಮ್ರಾ ಔಟ್
ಈ ಹಿಂದೆ ವಿಯು ಸ್ಪೋರ್ಟ್ ಜೊತೆ ಮಾತನಾಡಿದ ಎಬಿಡಿ, ಮುಂದಿನ ವರ್ಷ ಐಪಿಎಲ್ನಲ್ಲಿ ನಾನು ಖಂಡಿತವಾಗಿಯೂ ಇರುತ್ತೇನೆ. ನಾನು ನನ್ನ ಎರಡನೇ ತವರು ಮನೆಗೆ ಮರಳಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ.
AB Devilliers said "I will return to Chinnaswamy next year, not for playing but to thank all the fans for the support over a decade".
— Johns. (@CricCrazyJohns) October 3, 2022
ಇನ್ನೂ ಮುಂದುವರೆದು ಮಾತನಾಡಿದ ಎಬಿಡಿ, "ನಾನು ಮುಂದಿನ ವರ್ಷ ಆರ್ಸಿಬಿ ಜೊತೆ ಇರುತ್ತೇನೆ, ನಾನು ಅದರ ಜೊತೆಗಿನ ಸಂಬಂಧ ಮಿಸ್ ಮಾಡಿಕೊಳ್ಳುತ್ತಿದ್ದೇನೆ, ಯಾವ ಸಾಮರ್ಥ್ಯದಲ್ಲಿ ಗೊತ್ತಿಲ್ಲ ಆದರೆ ನನ್ನ ಎರಡನೇ ಮನೆಗೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಭೇಟಿ ನೀಡಲು ನಾನು ಬಯಸುತ್ತೇನೆ - ನಾನು ಅದನ್ನು ಎದುರು ನೋಡುತ್ತಿದ್ದೇನೆ" ಹೇಳಿದ್ದಾರೆ.
ಇದನ್ನೂ ಓದಿ : Women T20 World Cup: ಮಹಿಳಾ T20 ವಿಶ್ವಕಪ್ 2023ರ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ: ಫೈನಲ್ ಯಾವಾಗ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.