Rohit Sharma News: ಟೀಂ ಇಂಡಿಯಾದ ಹಾಲಿ ನಾಯಕ 'ಹಿಟ್‌ಮ್ಯಾನ್' ರೋಹಿತ್ ಶರ್ಮಾ ಬಗ್ಗೆ ಆಘಾತಕಾರಿ ಸಂಗತಿಯೊಂದು ಹೊರಬಿದ್ದಿದೆ. ರೋಹಿತ್ ಶರ್ಮಾ ತಮ್ಮ ವೃತ್ತಿ ಜೀವನದ ಒಂದು ಹಂತದಲ್ಲಿ ಖಿನ್ನತೆಗೆ ಒಳಗಾಗಿದ್ದರು. ಅಷ್ಟೇ ಅಲ್ಲ ರೋಹಿತ್ ಶರ್ಮಾ ರೂಮಿನಲ್ಲಿ ಲಾಕ್ ಹಾಕಿಕೊಂಡು ಒಂಟಿಯಾಗಿ ಅಳುತ್ತಿದ್ದರಂತೆ. ಈ ಅವಧಿಯಲ್ಲಿ ಟೀಂ ಇಂಡಿಯಾದ ಯಾವುದೇ ಆಟಗಾರ ರೋಹಿತ್ ಶರ್ಮಾ ಅವರನ್ನು ಬೆಂಬಲಿಸಲು ಬರಲಿಲ್ಲ. ಆದರೆ ಒಬ್ಬ ಅನುಭವಿ ಮಾತ್ರ ಅವರ ಜೊತೆ ದೃಢವಾಗಿ ನಿಂತಿದ್ದರು. ಈ ಎಲ್ಲಾ ವಿಚಾರಗಳನ್ನು ಭಾರತೀಯ ಮಹಿಳಾ ಕ್ರಿಕೆಟಿಗ ಜೆಮಿಮಾ ರಾಡ್ರಿಗಸ್ ಅವರು ಬಹಿರಂಗಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: BCCIನಿಂದ ಮಹಾಪ್ರಮಾದ! WTC ಫೈನಲ್’ನಲ್ಲಿ ಈ ಫ್ಲಾಪ್ ಆಟಗಾರನಿಗೆ ಸ್ಥಾನ: ತಂಡಕ್ಕೆ ಮುಳುವಾಗುತ್ತಾ ಈತನ ಆಯ್ಕೆ?


ಭಾರತೀಯ ಮಹಿಳಾ ಕ್ರಿಕೆಟ್ ಆಟಗಾರ್ತಿ ಜೆಮಿಮಾ ರಾಡ್ರಿಗಸ್ ಅವರು ರೋಹಿತ್ ಶರ್ಮಾ ಅವರೊಂದಿಗಿನ ಸಂಭಾಷಣೆಯನ್ನು 'ಬ್ರೇಕ್‌ಫಾಸ್ಟ್ ವಿತ್ ಚಾಂಪಿಯನ್ಸ್' ಕಾರ್ಯಕ್ರಮದಲ್ಲಿ ಬಹಿರಂಗಪಡಿಸಿದ್ದಾರೆ. 2011 ರ ವಿಶ್ವಕಪ್‌ ಗೆ ಆಯ್ಕೆಯಾಗದ ಬಳಿಕ ರೋಹಿತ್ ಶರ್ಮಾ ಸಂಪೂರ್ಣವಾಗಿ ಮನನೊಂದಿದ್ದರಂತೆ. ಅಷ್ಟೇ ಅಲ್ಲ ತುಂಬಾ ಕಷ್ಟಕರ ಪರಿಸ್ಥಿತಿಯನ್ನು ಎದುರಿಸುತ್ತಿದ್ದರು ಎಂದು ಜೆಮಿಮಾ ರೋಡ್ರಿಗಸ್ ಬಹಿರಂಗಪಡಿಸಿದರು.


ಜೆಮಿಮಾ ರೋಡ್ರಿಗಸ್ ಸಂಭಾಷಣೆ ಹೀಗಿದೆ:


“2011ರಲ್ಲಿ ವಿಶ್ವಕಪ್ ತಂಡದಿಂದ ಹೊರಗುಳಿದಿದ್ದ ನೀವು ಈಗ ಟೀಮ್ ಇಂಡಿಯಾ ನಾಯಕತ್ವ ವಹಿಸುತ್ತಿದ್ದೀರಿ, ನೀವು ಎಂದಾದರೂ ಈ ಸ್ಥಾನ ತಲುಪುತ್ತೀರಾ ಎಂದು ಯೋಚಿಸಿದ್ದೀರಾ? ಎಂದು ನಾನು ರೋಹಿತ್ ಶರ್ಮಾ ಅವರನ್ನು ಕೇಳಿದೆ. ಇದಕ್ಕೆ ಉತ್ತರಿಸಿದ ರೋಹಿತ್ ಶರ್ಮಾ, ಆ ಸಮಯದಲ್ಲಿ ನಾನು ಹೇಗೆ ಕಳೆಯುತ್ತಿದೆ ಎಂಬುದು ಯಾರಿಗೂ ಗೊತ್ತಿಲ್ಲ ಎಂದು ಹೇಳಿದರು”


“ಆ ಸಮಯದಲ್ಲಿ ಯುವರಾಜ್ ಸಿಂಗ್ ಮಾತ್ರ ತಮ್ಮ ಬಳಿಗೆ ಬಂದು ಊಟಕ್ಕೆ ಕರೆದೊಯ್ದರು ಎಂದು ರೋಹಿತ್ ಶರ್ಮಾ ನನಗೆ ಹೇಳಿದರು. ಅವರಿಗೆ ಧೈರ್ಯ ತುಂಬಲು ಯುವರಾಜ್ ಸಿಂಗ್ ಬಿಟ್ಟರೆ ಯಾರೂ ಬರಲಿಲ್ಲ. ರೋಹಿತ್ ರೂಮಿನಲ್ಲಿ ಅಳುತ್ತಿದ್ದೆ ಎಂದು ಹೇಳಿದಾಗ ನನ್ನ ಕಣ್ಣಲ್ಲೂ ನೀರು ಬಂತು. ಇದಾದ ನಂತರ ಮತ್ತಷ್ಟು ಮಾತನಾಡಿದ ರೋಹಿತ್, ನಾನು ಯಾರ ಮುಂದೆಯೂ ಕಡಿಮೆ ಎಂದು ಸಾಬೀತು ಪಡಿಸಲು ಇಷ್ಟಪಡುವುದಿಲ್ಲ. ನಾನು ನನ್ನ ಆಟವನ್ನು ಇಷ್ಟಪಡುತ್ತೇನೆ ಎಂದು ಹೇಳಿದರು” ಅಂತಾ ಜೆಮಿಮಾ ರೋಡ್ರಿಗಸ್ ಹೇಳಿದರು.


ಇದನ್ನೂ ಓದಿ: WTC Final: ಕ್ರಿಕೆಟ್ ಪ್ರಿಯರಿಗೆ ಗುಡ್ ನ್ಯೂಸ್: WTC ಫೈನಲ್’ಗೆ ಮತ್ತೆ ಎಂಟ್ರಿ ಕೊಡಲಿದ್ದಾರೆ MS Dhoni!


2011ರ ವಿಶ್ವಕಪ್‌ ಗೆ ಟೀಂ ಇಂಡಿಯಾ ಆಯ್ಕೆಯಾದಾಗ ರೋಹಿತ್ ಶರ್ಮಾ ಬದಲಿಗೆ ವಿರಾಟ್ ಕೊಹ್ಲಿ ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು.. ರೋಹಿತ್ ಶರ್ಮಾಗಿಂತ ವಿರಾಟ್ ಕೊಹ್ಲಿಗೆ ಆದ್ಯತೆ ನೀಡಲಾಗಿತ್ತು. ಇದಕ್ಕೆ ಬಹುದೊಡ್ಡ ಕಾರಣವೆಂದರೆ ಜನವರಿ 23, 2011 ರ ಮೊದಲು ಆಡಿದ 12 ಏಕದಿನ ಪಂದ್ಯಗಳಲ್ಲಿ ರೋಹಿತ್ ಶರ್ಮ ಒಂದೇ ಒಂದು ಅರ್ಧಶತಕ ಗಳಿಸಲು ಸಾಧ್ಯವಾಗಿರಲಿಲ್ಲ. ಈ ಕಾರಣಕ್ಕಾಗಿ 2011ರ ವಿಶ್ವಕಪ್‌ ಗೆ ರೋಹಿತ್ ಶರ್ಮಾ ಹೆಸರನ್ನು ಪರಿಗಣಿಸಿರಲಿಲ್ಲ. ಈ ಬಗ್ಗೆ ರೋಹಿತ್ ಶರ್ಮಾ ನಿರಾಸೆ ವ್ಯಕ್ತಪಡಿಸಿದ್ದರೂ ಸಹ ಆ ಸಮಯದಲ್ಲಿ ಅವರು ತಮ್ಮ ಫಾರ್ಮ್ ಉತ್ತಮವಾಗಿಲ್ಲದ ಕಾರಣ ಆಡಲು ಸಾಧ್ಯವಾಗಲಿಲ್ಲ ಎಂದು ಒಪ್ಪಿಕೊಂಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.