ʼಪಾನಿಪುರಿʼ ಮಾರುತ್ತಿದ್ದ ಹುಡುಗ ಈಗ ʼIPL ಸ್ಟಾರ್‌ ಪ್ಲೇಯರ್‌ʼ..! ʼಯಶಸ್ವಿʼ  ಜೈಸ್ವಾಲ್

Yashasvi Jaiswal history : ಕೆಲವೇ ಕೆಲವು ಜನರಿಗೆ ಈ ಅವಕಾಶ ಸಿಗುತ್ತದೆ. ಕೆಲವೊಮ್ಮೆ ಪ್ರತಿಭೆ ಇದ್ದು, ಅವಕಾಶ ಸಿಕ್ಕರೂ ಸಹ ಹೆಸರು ಮಾಡುವುದು ಅಸಾಧ್ಯ. ಮುಂಬೈನ ಬೀದಿಗಳಲ್ಲಿ ಪಾನಿ-ಪುರಿಗಳನ್ನು ಮಾರಾಟ ಮಾಡುತ್ತ ಬದುಕು ಸಾಗಿಸುತ್ತಿದ್ದ, ಕ್ರಿಕೆಟಿಗ ಯಶಸ್ವಿ ಜೈಸ್ವಾಲ್ ಕಷ್ಟಗಳನ್ನು ಮೆಟ್ಟಿ ಇಂದು ಇಂಡಿಯನ್ ಪ್ರೀಮಿಯರ್ ಲೀಗ್ 2023 ರಲ್ಲಿ ಯುವ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಯಶಸ್ವಿ ಜೈಸ್ವಾಲ್‌ ಯಶಸ್ಸಿನ ಕಥೆ ಇಲ್ಲಿದೆ ನೋಡಿ..

Written by - Krishna N K | Last Updated : Apr 28, 2023, 06:34 PM IST
  • ಪಾನಿ ಪುರಿ ಮಾಡುತ್ತಿದ್ದ ಯುವಕನೊಬ್ಬ ಇದೀಗ ಸ್ಟಾರ್‌ ಕ್ರಿಕೆಟ್‌ ಆಟಗಾರ.
  • ಕಷ್ಟಗಳನ್ನು ಮೆಟ್ಟಿ ನಿಂತು ಕ್ರಿಕೆಟ್‌ ಲೋಕದಲ್ಲಿ ಮಿಂಚಿದ ಕ್ರಿಕೆಟಿಗ ಯಶಸ್ವಿ ಜೈಸ್ವಾಲ್.
  • ಯಶಸ್ವಿ ಜೈಸ್ವಾಲ್‌ ಯಶಸ್ಸಿನ ಕಥೆ ಇಲ್ಲಿದೆ ನೋಡಿ..
ʼಪಾನಿಪುರಿʼ ಮಾರುತ್ತಿದ್ದ ಹುಡುಗ ಈಗ ʼIPL ಸ್ಟಾರ್‌ ಪ್ಲೇಯರ್‌ʼ..! ʼಯಶಸ್ವಿʼ  ಜೈಸ್ವಾಲ್ title=

Yashasvi Yaiswal : ʼಸಾಧನೆ ಯಾರಪ್ಪನ ಮನೆಯ ಸ್ವತ್ತಲ್ಲʼ ಎನ್ನುವ ಮಾತು ಅದೇಷ್ಟು ಸತ್ಯ ಅಲ್ಲವೆ, ಸಾಧಿಸುವ ಚಲ ಇದ್ದವನಿಗೆ ಎಂತಹ ಕಷ್ಟ ಬಂದರೂ ಸಹ ಗುರಿ ಮುಟ್ಟುವುದೊಂದೇ ಧ್ಯೇಯವಾಗಿದ್ದರೆ ಅವನನ್ನು ಯಾರೂ ತಡೆಯಲಾರರು. ಬಡತನದ ಮಧ್ಯೆಯೂ ಸಹ ಸಾಧನೆಯ ಶೀಖರ ಏರಿ ಯುವಕರಿಗೆ ಸ್ಪೂರ್ತಿಯಾದವರು ನಮ್ಮ ನಡುವೆಯೇ ಇದ್ದಾರೆ. ಇದೀಗ ಪಾನಿ ಪುರಿ ಮಾಡುತ್ತಿದ್ದ ಯುವಕನೊಬ್ಬ ಸ್ಟಾರ್‌ ಕ್ರಿಕೆಟ್‌ ಆಟಗಾರನಾದ ಸ್ಪೂರ್ತಿದಾಯಕ ಸಂಗತಿ ನಿಮ್ಮ ಮುಂದಿದೆ.. ಓದಿ

ಹೌದು.. ದೇಶದಲ್ಲಿ ಲಕ್ಷಾಂತರ ಯುವ ಕ್ರಿಕೆಟಿಗರು ದೊಡ್ಡ ವೇದಿಕೆಯಲ್ಲಿ ಆಡುವ ಕನಸು ಕಾಣುತ್ತಿದ್ದಾರೆ. ಆದ್ರೆ, ಕೆಲವೇ ಕೆಲವು ಜನರಿಗೆ ಈ ಅವಕಾಶ ಸಿಗುತ್ತದೆ. ಕೆಲವೊಮ್ಮೆ ಪ್ರತಿಭೆ ಇದ್ದು, ಅವಕಾಶ ಸಿಕ್ಕರೂ ಸಹ ಹೆಸರು ಮಾಡುವುದು ಅಸಾಧ್ಯವಾಗುತ್ತದೆ. ಈ ಪೈಕಿ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಮನಸ್ಸಿನಲ್ಲಿ ಜಾಗ ಪಡೆಯುವುದು ಅಷ್ಟು ಸುಲಭದ ಮಾತಲ್ಲ. ಆದರೂ ಮುಂಬೈನ ಬೀದಿಗಳಲ್ಲಿ ಪಾನಿ-ಪುರಿಗಳನ್ನು ಮಾರಾಟ ಮಾಡುತ್ತ ಬದುಕು ಸಾಗಿಸುತ್ತಿದ್ದ, ಕ್ರಿಕೆಟಿಗ ಯಶಸ್ವಿ ಜೈಸ್ವಾಲ್ ಕಷ್ಟಗಳನ್ನು ಮೆಟ್ಟಿ ಇಂದು ಇಂಡಿಯನ್ ಪ್ರೀಮಿಯರ್ ಲೀಗ್ 2023 ರಲ್ಲಿ ಯುವ ಆಟಗಾರನಾಗಿ ಹೊರಹೊಮ್ಮಿದ್ದಾರೆ.

ಇದನ್ನೂ ಓದಿ: 3 ಸಾವಿರ ರನ್ ಪೂರೈಸಿದ ವಿಶ್ವದ ಮೊದಲ ಬ್ಯಾಟರ್ ವಿರಾಟ್‌ ಕೊಹ್ಲಿ

ಯಶಸ್ವಿ ಜೈಸ್ವಾಲ್ ಇತ್ತೀಚಿನ ವರ್ಷಗಳಲ್ಲಿ ಅದ್ಭುತ ರನ್-ಸ್ಕೋರಿಂಗ್ ಫಾರ್ಮ್‌ನಲ್ಲಿದ್ದಾರೆ. ದೇಶ ಮತ್ತು ಅಂತರಾಷ್ಟ್ರೀಯ ಸರ್ಕ್ಯೂಟ್‌ಗಳಲ್ಲಿ ಸ್ವತಃ ಹೆಸರು ಗಳಿಸಿದ್ದಾರೆ. IPL ವೃತ್ತಿಜೀವನದಲ್ಲಿ, ರಾಜಸ್ಥಾನ ರಾಯಲ್ಸ್ (RR) ಆರಂಭಿಕ ಆಟಗಾರನಾಗಿ 139 ಸ್ಟ್ರೈಕ್ ರೇಟ್ ಮತ್ತು 27.45 ರ ಸರಾಸರಿಯಲ್ಲಿ 851 ರನ್ ಗಳಿಸಿದ್ದಾರೆ. ಫ್ರ್ಯಾಂಚೈಸ್‌ನಿಂದ ಬೆಂಬಲಿತವಾದ ನಂತರ, ಸಿಕ್ಕ ಟೈಮ್‌ನಲ್ಲಿ, ತಮ್ಮ ಕೈಚಳ ತೋರಿ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.

ಗುರುವಾರ, ಜೈಸ್ವಾಲ್ ಮತ್ತೊಮ್ಮೆ ತಮ್ಮ ಅಗಾಧ ಪ್ರತಿಭೆಯನ್ನು ಪ್ರದರ್ಶಿಸಿದರು, ರಾಜಸ್ಥಾನ್ ರಾಯಲ್ಸ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 32 ರನ್‌ಗಳಿಂದ ಜಯಗಳಿಸಲು ರಾಜಸ್ಥಾನ್ ರಾಯಲ್ಸ್‌ಗೆ ಸಹಾಯ ಮಾಡುವ ಮೂಲಕ ಅದ್ಭುತವಾದ ಅರ್ಧಶತಕವನ್ನು ಗಳಿಸಿದರು. ಐಪಿಎಲ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿದರು. ಜೈಸ್ವಾಲ್ 43 ಎಸೆತಗಳಲ್ಲಿ 77 ರನ್ ಗಳಿಸಿದ್ದು ಪಂದ್ಯಾವಳಿಯಲ್ಲಿ ಅವರ ಮೂರನೇ ಅರ್ಧಶತಕವಾಗಿತ್ತು.

ಇದನ್ನೂ ಓದಿ: WTC Final 2023: ಟೀಂ ಇಂಡಿಯಾ ಘೋಷಣೆಯಾದ ಕೂಡಲೇ ಈ ಭಾರತೀಯ ಅನುಭವಿ ನಿವೃತ್ತಿ?

ಜೈಸ್ವಾಲ್ 2018 ರಲ್ಲಿ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. 17ನೇ ವಯಸ್ಸಿನಲ್ಲಿ ಯುವ ಏಕದಿನ ಪಂದ್ಯಾವಳಿಯಲ್ಲಿ ದ್ವಿಶತಕವನ್ನು ಹೊಡೆದರು. ಜೈಸ್ವಾಲ್ ಸಾಧಾರಣ ಕುಟುಂಬದಿಂದ ಬಂದ ಯುವಕ. ಮುಂಬೈನ ಆಜಾದ್ ಮೈದಾನದ ಹೊರಗೆ ಪಾನಿ ಪುರಿ ಮತ್ತು ಹಣ್ಣುಗಳನ್ನು ಮಾರಾಟ ಮಾಡುತ್ತ ಜೀವನದ ಬಂಡಿ ಸಾಗಿಸುತ್ತಿದ್ದರು.  ಉತ್ತರ ಪ್ರದೇಶದ ಭದೋಹಿ ಗ್ರಾಮದಲ್ಲಿ ಜನಿಸಿದ ಜೈಸ್ವಾಲ್, ಕ್ರಿಕೆಟಿಗನಾಗುವ ಗುರಿಯನ್ನು ಸಾಧಿಸಲು 11ನೇ ವಯಸ್ಸಿನಲ್ಲಿ ಮುಂಬೈಗೆ ಪ್ರಯಾಣ ಬೆಳೆಸಿದ್ದ.

ತರಬೇತಿಯ ಸಮಯದಲ್ಲಿ ಟೆಂಟ್‌ಗಳಲ್ಲಿ ವಾಸಿಸುತ್ತಿದ್ದ ಜೈಸ್ವಾಲ್, ಅಗಾಧವಾದ ಅಡೆತಡೆಗಳನ್ನು ದಾಟಿ ಇಂದು ಉನ್ನತ ಸ್ಥಾನವನ್ನು ತಲುಪಿದ್ದಾರೆ. ಭಾರತದ ಅಂಡರ್-19 ವಿಶ್ವಕಪ್ 2020 ಸಹ ಆಟವಾಡಿದ್ದರು. ಆಜಾದ್ ಮೈದಾನದಲ್ಲಿ ಕೋಚ್ ಜ್ವಾಲಾ ಸಿಂಗ್ ಗುರುತಿಸಿದ ಪ್ರತಿಭೆ ಇದೀಗ ಸ್ಟಾರ್‌ ಆಟಗಾರ. U-19 ವಿಶ್ವಕಪ್‌ನಲ್ಲಿ ಜೈಸ್ವಾಲ್ ಒಂದು ಶತಕ ಮತ್ತು ನಾಲ್ಕು ಅರ್ಧಶತಕಗಳು ಸೇರಿದಂತೆ 400 ರನ್ ಗಳಿಸಿದರು. ಪಂದ್ಯಾವಳಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ನೀಡಿದ ಜೈಸ್ವಾಲ್ 'ಪ್ಲೇಯರ್ ಆಫ್ ದಿ ಟೂರ್ನಮೆಂಟ್' ಎಂದು ಆಗಿದ್ದರು. ರಾಜಸ್ಥಾನ್ ರಾಯಲ್ಸ್ 2.4 ಕೋಟಿಗೆ ಜೈಸ್ವಾಲ್ ಅವರನ್ನು ಖರೀದಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News