Rohit Sharma's ODI Record: ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಉತ್ತಮ ಫಾರ್ಮ್‌ ನಲ್ಲಿ ಬ್ಯಾಟ್ ಬೀಸಿದ್ದು ನಮಗೆಲ್ಲಾ ತಿಳಿದೇ ಇದೆ. ಮೊದಲ ಪಂದ್ಯದಲ್ಲಿ ಶತಕ ಬಾರಿಸಿದ್ದರು. ಇದಲ್ಲದೆ, 2 ಪಂದ್ಯಗಳ ಮೂರು ಇನ್ನಿಂಗ್ಸ್‌ಗಳಲ್ಲಿ 80 ರ ಸರಾಸರಿಯಲ್ಲಿ 240 ರನ್ ಗಳಿಸಿದರು. ಇದೀಗ ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ ದೊಡ್ಡ ದಾಖಲೆಯ ಮೇಲೆ ಕಣ್ಣಿಟ್ಟಿದ್ದಾರೆ. ಆ ದಾಖಲೆಯನ್ನು ಹಿಂದೆ ಸಚಿನ್ ತೆಂಡೂಲ್ಕರ್ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಆಘಾತಕಾರಿ ಸುದ್ದಿ ಪ್ರಕಟಿಸಿದ ರೋಹಿತ್ ಶರ್ಮಾ ! ಕ್ರಿಕೆಟ್ ಅಭಿಮಾನಿಗಳಲ್ಲಿ ನಿರಾಸೆ


ವೆಸ್ಟ್ ಇಂಡೀಸ್ ವಿರುದ್ಧದ ODI ಸರಣಿಯ ಮೂಲಕ, ರೋಹಿತ್ ಶರ್ಮಾ ತಮ್ಮ ODI ವೃತ್ತಿಜೀವನದಲ್ಲಿ 10,000 ರನ್ ಪೂರ್ಣಗೊಳಿಸುವ ಸಾಧ್ಯತೆ ಇದೆ. ಹಿಟ್‌ ಮ್ಯಾನ್ 234 ODIಗಳಲ್ಲಿ 236 ಇನ್ನಿಂಗ್ಸ್‌ ಗಳಲ್ಲಿ ಬ್ಯಾಟಿಂಗ್ ಮಾಡುವಾಗ 48.63 ಸರಾಸರಿಯಲ್ಲಿ 9825 ರನ್ ಗಳಿಸಿದ್ದಾರೆ. ಇದರಲ್ಲಿ 30 ಶತಕ ಮತ್ತು 48 ಅರ್ಧ ಶತಕಗಳು ಒಳಪಟ್ಟಿವೆ. ಮತ್ತೊಂದೆಡೆ ಇದರಲ್ಲಿ 3 ದ್ವಿಶತಕಗಳೂ ಸೇರಿವೆ. 10,000ರ ಗಡಿ ಮುಟ್ಟಲು ಅವರಿಗೆ 175 ರನ್‌ಗಳ ಅಗತ್ಯವಿದೆ. ಒಂದು ವೇಳೆ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 175 ರನ್ ಗಳಿಸಿದರೆ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಸರಿಗಟ್ಟಲಿದ್ದಾರೆ.


ರೋಹಿತ್ ಶರ್ಮಾ 22 ಏಕದಿನ ಇನ್ನಿಂಗ್ಸ್‌ ಗಳಲ್ಲಿ 175 ರನ್ ಗಳಿಸಿದರೆ, ಏಕದಿನದಲ್ಲಿ 10,000 ರನ್ ಗಳಿಸಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಪ್ರಸ್ತುತ, ಭಾರತದ ಮಾಜಿ ದಿಗ್ಗಜ ಸಚಿನ್ ತೆಂಡೂಲ್ಕರ್ ಏಕದಿನದಲ್ಲಿ ವೇಗವಾಗಿ 10,000 ರನ್ ದಾಟಿದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಹಿಟ್‌ಮ್ಯಾನ್ 22 ODI ಇನ್ನಿಂಗ್ಸ್‌ಗಳಲ್ಲಿ 175 ರನ್ ಗಳಿಸುವ ಮೂಲಕ ODI ಪಂದ್ಯಗಳಲ್ಲಿ 10,000 ರನ್‌ಗಳ ಗಡಿಯನ್ನು ಮುಟ್ಟಿದ ಎರಡನೇ ವೇಗದ ಬ್ಯಾಟ್ಸ್‌ಮನ್ ಆಗಲಿದ್ದಾರೆ.


ಇದನ್ನೂ ಓದಿ: ಏಕದಿನ ಪಂದ್ಯ ಆರಂಭಕ್ಕೂ ಮುನ್ನ ಬಿಸಿಸಿಐನಿಂದ ಶಾಕ್! Team Indiaದಿಂದ ಈ ಸ್ಟಾರ್ ಬೌಲರನ್ನು ಹೊರಗಿಟ್ಟ ಸಮಿತಿ!


ಏಕದಿನದಲ್ಲಿ ಅತಿ ವೇಗದ 10,000 ರನ್ ಗಳಿಸಿದ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ಕೊಹ್ಲಿ 205 ಏಕದಿನ ಇನ್ನಿಂಗ್ಸ್‌ಗಳಲ್ಲಿ 10,000 ರನ್‌ ಗಳ ಗಡಿಯನ್ನು ಮುಟ್ಟಿದ್ದಾರೆ. ಈ ಅಂಕಿ ಅಂಶವನ್ನು ತಲುಪಲು ಕಿಂಗ್ ಕೊಹ್ಲಿ 10 ವರ್ಷ 67 ದಿನಗಳನ್ನು ತೆಗೆದುಕೊಂಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ