13 ವರ್ಷ… 200 ಪಂದ್ಯ: ಮುಂಬೈ ಪರ ಇತಿಹಾಸ ಸೃಷ್ಟಿಸಿದ ರೋಹಿತ್ ಶರ್ಮಾ! ಧೋನಿ, ಕೊಹ್ಲಿ ಅವರಿದ್ದ ವಿಶೇಷ ಕ್ಲಬ್ ಸೇರ್ಪಡೆ
Rohit Sharma 200th IPL match: ಇನ್ನೊಂದೆಡೆ ಈ ಪಂದ್ಯ ಶುರುವಾಗುತ್ತಿದ್ದಂತೆ ಮುಂಬೈ ಆರಂಭಿಕ ರೋಹಿತ್ ಶರ್ಮಾ ಇತಿಹಾಸ ನಿರ್ಮಿಸಿದ್ದಾರೆ. ಐಪಿಎಲ್’ನಲ್ಲಿ ಮುಂಬೈ ಇಂಡಿಯನ್ಸ್ ಪರ 200 ಪಂದ್ಯಗಳನ್ನು ಆಡಿದ ಆಟಗಾರ ಎಂದೆನಿಕೊಂಡಿದ್ದಾರೆ
Rohit Sharma 200th IPL match: ಐಪಿಎಲ್ ಎಂಟನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿವೆ. ಹೈದರಾಬಾದ್’ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ದಾಖಲೆಗಳ ಮೇಲೆ ದಾಖಲೆಗಳು ನಿರ್ಮಾಣವಾಗುತ್ತಿದೆ.
ಇದನ್ನೂ ಓದಿ: ‘ಸನ್ ರೈಸರ್ಸ್ ಹೈದರಾಬಾದ್’ ಅಬ್ಬರಕ್ಕೆ RCB ಸಾರ್ವಕಾಲಿಕ ದಾಖಲೆ ಉಡೀಸ್!
ಇನ್ನೊಂದೆಡೆ ಈ ಪಂದ್ಯ ಶುರುವಾಗುತ್ತಿದ್ದಂತೆ ಮುಂಬೈ ಆರಂಭಿಕ ರೋಹಿತ್ ಶರ್ಮಾ ಇತಿಹಾಸ ನಿರ್ಮಿಸಿದ್ದಾರೆ. ಐಪಿಎಲ್’ನಲ್ಲಿ ಮುಂಬೈ ಇಂಡಿಯನ್ಸ್ ಪರ 200 ಪಂದ್ಯಗಳನ್ನು ಆಡಿದ ಆಟಗಾರ ಎಂದೆನಿಕೊಂಡಿದ್ದಾರೆ. ಫ್ರಾಂಚೈಸಿ ಪರ ರೋಹಿತ್ ಕಳೆದ 13 ವರ್ಷಗಳಿಂದ ಆಡುತ್ತಿದ್ದಾರೆ. ಅಂದಹಾಗೆ ರೋಹಿತ್ ಮೊದಲು ಡೆಕ್ಕನ್ ಚಾರ್ಜರ್ಸ್ ತಂಡದಲ್ಲಿದ್ದರು. ಅದಾದ ಬಳಿಕ 2011 ರಲ್ಲಿ ಮುಂಬೈ ಇಂಡಿಯನ್ಸ್’ಗೆ ಎಂಟ್ರಿ ಪಡೆದರು.
ರೋಹಿತ್ ದಾಖಲೆ:
ಐಪಿಎಲ್’ನಲ್ಲಿ ಮುಂಬೈ ಪರ 200 ಪಂದ್ಯಗಳನ್ನು ಆಡಿದ ಮೊದಲ ಆಟಗಾರ ರೋಹಿತ್. ಇನ್ನೊಂದೆಡೆ ಐಪಿಎಲ್’ನಲ್ಲಿ ಫ್ರಾಂಚೈಸಿಗಾಗಿ 200 ಅಥವಾ ಅದಕ್ಕಿಂತ ಹೆಚ್ಚು ಪಂದ್ಯಗಳನ್ನು ಆಡಿದ ಮೂರನೇ ಆಟಗಾರ ಎನಿಸಿಕೊಂಡರು. ರೋಹಿತ್ ಈಗ ಚೆನ್ನೈ ಸೂಪರ್ ಕಿಂಗ್ಸ್ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಾಜಿ ನಾಯಕ ವಿರಾಟ್ ಕೊಹ್ಲಿ ಅವರಿದ್ದ ಕ್ಲಬ್’ಗೆ ಸೇರಿಕೊಂಡಿದ್ದಾರೆ. ವಿರಾಟ್ RCB ಪರ 239 ಪಂದ್ಯಗಳನ್ನು ಆಡಿದ್ದರೆ, ಧೋನಿ CSK ಪರ 222 ಪಂದ್ಯಗಳನ್ನು ಆಡಿದ್ದಾರೆ.
ಇದನ್ನೂ ಓದಿ: ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಸೊಸೆ ಜೊತೆ ವಿರಾಟ್ ಕೊಹ್ಲಿ! ಫೋಟೋ ವೈರಲ್
ರೋಹಿತ್’ಗೆ ವಿಶೇಷ ಗೌರವ:
ಪಂದ್ಯಕ್ಕೂ ಮುನ್ನ ರೋಹಿತ್ ಶರ್ಮಾ ಅವರನ್ನು ಸನ್ಮಾನಿಸಲಾಗಿದೆ. ಇದರ ವಿಡಿಯೋವನ್ನು ಐಪಿಎಲ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಮುಂಬೈ ಇಂಡಿಯನ್ಸ್ ತಂಡದ ಎಲ್ಲಾ ಆಟಗಾರರು ರೋಹಿತ್’ಗೆ ಚಪ್ಪಾಳೆ ತಟ್ಟುತ್ತಿದ್ದರೆ, ಕ್ರಿಕೆಟ್ ಗಾಡ್ ಸಚಿನ್ ತೆಂಡೂಲ್ಕರ್ ವಿಶೇಷ ಜರ್ಸಿ ನೀಡಿದ್ದಾರೆ. ಜರ್ಸಿಯ ಹಿಂಭಾಗದಲ್ಲಿ 200 ಎಂದು ಬರೆಯಲಾಗಿದೆ. ತೆಂಡೂಲ್ಕರ್ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ಮೊದಲ ನಾಯಕರಾಗಿದ್ದು, ಇದೀಗ ತಂಡದಲ್ಲಿ ಮೆಂಟರ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ