ನಿವೃತ್ತಿ ಪಡೆಯುತ್ತಾರಾ ಟೀಂ ಇಂಡಿಯಾ ಕ್ಯಾಪ್ಟನ್? ಕೊನೆಗೂ ಊಹಾಪೋಹಗಳಿಗೆ ತೆರೆ ಎಳೆದ ರೋಹಿತ್ ಶರ್ಮಾ ಹೇಳಿದ್ದು ಹೀಗೆ...
Rohit Sharma statement on retirement:
Rohit Sharma statement on retirement: ಆಸ್ಟ್ರೇಲಿಯಾ ವಿರುದ್ಧ ಬ್ರಿಸ್ಬೇನ್ ಟೆಸ್ಟ್ ಡ್ರಾಗೊಂಡ ನಂತರ ಭಾರತೀಯ ಕ್ರಿಕೆಟ್‌ಗೆ ಭಾವನಾತ್ಮಕ ಕ್ಷಣ ಬಂದಿದೆ. ಟೀಂ ಇಂಡಿಯಾದ ಅನುಭವಿ ಸ್ಪಿನ್ನರ್ ವಿಚಂದ್ರನ್ ಅಶ್ವಿನ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಪಂದ್ಯ ಮುಗಿದ ಬಳಿಕ ನಾಯಕ ರೋಹಿತ್ ಶರ್ಮಾ ಜತೆ ಪತ್ರಿಕಾಗೋಷ್ಠಿಗೆ ಆಗಮಿಸಿ ನಿವೃತ್ತಿ ಮಾಹಿತಿ ನೀಡಿ ನಿರ್ಗಮಿಸಿದರು. ಇದಾದ ನಂತರ ರೋಹಿತ್ ಮಾತನಾಡಿದ್ದು ಒಂದಷ್ಟು ಆಶ್ಚರ್ಯಕರ ಹೇಳಿಕೆಗಳನ್ನು ನೀಡಿದ್ದಾರೆ.
ಇದನ್ನೂ ಓದಿ: ಇದಕ್ಕಿಂತ ಹೆಚ್ಚು ಸಿಮ್ ಕಾರ್ಡ್ ನಿಮ್ಮ ಬಳಿ ಇದ್ರೆ ಭಾರೀ ದಂಡ, ಜೈಲು ಶಿಕ್ಷೆಗೂ ಗುರಿಯಾಗಬಹುದು...!
ಅಶ್ವಿನ್, ರಹಾನೆ ಮತ್ತು ಪೂಜಾರ ಅವರ ದೊಡ್ಡ ಮೂರು ಆಟಗಾರರ ಅನುಪಸ್ಥಿತಿಯ ಬಗ್ಗೆ ವರದಿಗಾರರಿಗೆ ಪ್ರತಿಕ್ರಿಯಿಸಿದ ರೋಹಿತ್, "ನಾವು ಮುಂಬೈನಲ್ಲಿ ಸಾಕಷ್ಟು ಭೇಟಿಯಾಗುತ್ತೇವೆ. ಪೂಜಾರ ರಾಜ್‌ಕೋಟ್‌ನಲ್ಲಿ ರಹಸ್ಯವಾಗಿ ವಾಸಿಸುತ್ತಿದ್ದಾರೆ. ಇನ್ನು ಅಶ್ವಿನ್ ಅವರನ್ನು ಸಹ ಮಿಸ್ ಮಾಡಿಕೊಳ್ಳುತ್ತೇವೆ. ಅವರಿಗೆ ಸಾಕಷ್ಟು ಅನುಭವವಿದೆ. ಭಾರತಕ್ಕಾಗಿಯೇ ಸಾಕಷ್ಟು ಪಂದ್ಯಗಳನ್ನು ಗೆದ್ದಿದ್ದಾರೆ" ಎಂದಿದ್ದಾರೆ,
ಇದನ್ನೂ ಓದಿ: ಜನವರಿ 1 ರಿಂದ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಮಯದಲ್ಲಿ ಬದಲಾವಣೆ ! ಗ್ರಾಹಕರಿಗೆ ಆಗುವ ಲಾಭಗಳೇನು ?
ಇನ್ನು ತಮ್ಮ ಬ್ಯಾಟಿಂಗ್ ಬಗ್ಗೆ ಮಾತನಾಡಿದ್ದು, “ನಾನು ಚೆನ್ನಾಗಿ ಬ್ಯಾಟಿಂಗ್ ಮಾಡಿಲ್ಲ ಎನ್ನುವುದನ್ನು ಒಪ್ಪಿಕೊಳ್ಳುವುದರಲ್ಲಿ ಯಾವುದೇ ಅಡ್ಡಿಯಿಲ್ಲ. ಆದ್ರೆ ನನ್ನ ಯೋಚನೆಗಳ ಬಗ್ಗೆ ನನಗೆ ಸ್ಪಷ್ಟನೆ ಇದೆ. ನಾನು ಹೇಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ ಎಂಬುದು ನನಗೆ ಗೊತ್ತಿದೆ. ಇದಕ್ಕೆ ಸ್ವಲ್ಪ ಸಮಯ ಬೇಕು. ಆಟಕ್ಕೆ ಸ್ವಲ್ಪ ಸಮಯ ಕೊಟ್ಟರೆ ಎಲ್ಲವೂ ಸರಿಹೋಗಲಿದೆ. ನನ್ನ ದೇಹ, ನನ್ನ ಮನಸು ಸರಿಯಾಗಿ ಸ್ಪಂದಿಸುವವರೆಗೂ ಆಟ ಮುಂದುವರೆಯಲಿದೆ. ಸದ್ಯ ನನ್ನ ಬಗ್ಗೆ ನನಗೆ ಖುಷಿಯಿದೆ” ಎಂದು ಹೇಳಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ