ಏಷ್ಯಾ ಕಪ್ ಆಡುವ ಸಲುವಾಗಿ ಭಾರತ ತಂಡ ಪ್ರಸ್ತುತ ದುಬೈಗೆ ಪ್ರವಾಸ ಕೈಗೊಂಡಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾಕಪ್ ಪಂದ್ಯ ಆಗಸ್ಟ್ 28 ರಂದು ನಡೆಯಲಿದೆ. ಇದಕ್ಕಾಗಿ ಉಭಯ ತಂಡಗಳು ಸಿದ್ಧತೆ ನಡೆಸಿವೆ. ಭಾರತ ಅತಿ ಹೆಚ್ಚು ಬಾರಿ ಏಷ್ಯಾಕಪ್ ಪ್ರಶಸ್ತಿ ಗೆದ್ದುಕೊಂಡಿದೆ. ಆದರೆ ಇದೀಗ ರೋಹಿತ್ ಶರ್ಮಾ ಅವರ ವೀಡಿಯೋ ವೈರಲ್ ಆಗುತ್ತಿದ್ದು, ಇದನ್ನು ಕಂಡ ಅಭಿಮಾನಿಗಳು ಕೋಪಗೊಂಡಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಭಾರತೀಯ ರೈಲ್ವೇಯಿಂದ ಹೊಸ ಪ್ಲ್ಯಾನ್: ಇನ್ಮುಂದೆ ನಿಲ್ದಾಣದಲ್ಲಿ ತಂಗಲು ಸ್ಲೀಪಿಂಗ್ ಪಾಡ್ ವ್ಯವಸ್ಥೆ


ಬಿಸಿಸಿಐ ತನ್ನ ಟ್ವಿಟ್ಟರ್ ಖಾತೆಯಿಂದ ರೋಹಿತ್ ಶರ್ಮಾ ಅವರ ವೀಡಿಯೊವನ್ನು ಹಂಚಿಕೊಂಡಿದೆ. ಅದರಲ್ಲಿ ಅವರು ಸ್ಕೇಟಿಂಗ್ ಸ್ಕೂಟರ್ ಸವಾರಿ ಮಾಡುತ್ತಿರುವುದನ್ನು ಕಾಣಬಹುದು. ಇದರೊಂದಿಗೆ ಬಿಸಿಸಿಐ, 'ಅಭ್ಯಾಸದ ನಂತರ ರೋಹಿತ್ ಶರ್ಮಾ ಅವರ ಶೈಲಿಯಲ್ಲಿ ಸ್ವಿಂಗ್ ಮಾಡುತ್ತಿರುವುದು ಕಂಡುಬಂದಿದೆ' ಎಂದು ಬರೆದುಕೊಂಡಿದೆ. ಕೆಲವು ಅಭಿಮಾನಿಗಳು ಈ ವಿಡಿಯೋವನ್ನು ಲೈಕ್ ಮಾಡುತ್ತಿದ್ದರೆ, ಕೆಲವರು ವಿಶೇಷ ಕಾರಣಕ್ಕಾಗಿ ಅವರನ್ನು ಟ್ರೋಲ್ ಮಾಡಲು ಪ್ರಾರಂಭಿಸಿದರು.


ಒಬ್ಬ ಹೀಗೆ ಕಾಮೆಂಟ್ ಮಾಡಿದ್ದಾನೆ “ನೀವು ವರ್ಷದಲ್ಲಿ ಒಂದು ಅಥವಾ ಎರಡು ಪಂದ್ಯಗಳನ್ನು ಮಾತ್ರ ಆಡುತ್ತೀರಿ. ಸ್ಕೇಟಿಂಗ್ ಆಡಿ ಗಾಯಗೊಳ್ಳಬೇಡಿ. ಇದೀಗ ಪಂತ್ ನಾಯಕನಾಗುವ ಸಮಯ ಬಂದಿರಬೇಕು” ಎಂದು ಹೇಳಿದ್ದಾನೆ.


ರೋಹಿತ್ ಶರ್ಮಾ ಸ್ಫೋಟಕ ಬ್ಯಾಟಿಂಗ್‌ಗೆ ಫೇಮಸ್. ಕೆಲವೇ ಎಸೆತಗಳಲ್ಲಿ ಪಂದ್ಯದ ಗತಿಯನ್ನೇ ಬದಲಿಸಬಲ್ಲ ಆ ಕಲೆ ಅವರಲ್ಲಿದೆ. ರೋಹಿತ್ ಶರ್ಮಾ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ. ಟೀಂ ಇಂಡಿಯಾಕ್ಕೆ ಬಲಿಷ್ಠ ಆರಂಭ ನೀಡುವಲ್ಲಿ ಅವರು ಸದಾ ಯಶಸ್ವಿಯಾಗಿದ್ದಾರೆ. ಅವರು ಟಿ20 ಕ್ರಿಕೆಟ್‌ನಲ್ಲಿ ನಾಲ್ಕು ಶತಕಗಳನ್ನು ಬಾರಿಸಿದ್ದಾರೆ. 


ಇದನ್ನೂ ಓದಿ: 'ಸೆ.1 ರಂದು ರಾಜ್ಯಕ್ಕೆ ಬರಲಿದೆ ದೆಹಲಿಯಿಂದ ಕಾಂಗ್ರೆಸ್ ಸ್ಪೆಷಲ್ ಟೀಂ' 


ಈ ವರ್ಷ ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಭಾಗವಹಿಸಬೇಕಿದೆ. ಇದಕ್ಕಾಗಿ ಏಷ್ಯಾಕಪ್ ನಲ್ಲಿ ಭಾರತ ತಂಡದ ಅಗ್ನಿ ಪರೀಕ್ಷೆ ನಡೆಯಲಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಏಷ್ಯಾಕಪ್ ಪ್ರಶಸ್ತಿ ಗೆಲ್ಲಲು ಪ್ರಬಲ ಪೈಪೋಟಿ ತೋರುತ್ತಿದೆ. ಭಾರತ ಅತಿ ಹೆಚ್ಚು ಬಾರಿ ಏಷ್ಯಾಕಪ್ ಪ್ರಶಸ್ತಿ ಗೆದ್ದುಕೊಂಡಿದೆ. ಇನ್ನು ಶ್ರೀಲಂಕಾ ತಂಡವು ಐದು ಬಾರಿ ಮತ್ತು ಪಾಕಿಸ್ತಾನವು ಕೇವಲ ಎರಡು ಬಾರಿ ಏಷ್ಯಾ ಕಪ್ ಅನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.