ಭಾರತೀಯ ರೈಲ್ವೇಯಿಂದ ಹೊಸ ಪ್ಲ್ಯಾನ್: ಇನ್ಮುಂದೆ ನಿಲ್ದಾಣದಲ್ಲಿ ತಂಗಲು ಸ್ಲೀಪಿಂಗ್ ಪಾಡ್ ವ್ಯವಸ್ಥೆ

ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT) ರೈಲು ನಿಲ್ದಾಣದಲ್ಲಿ ಬೇಸತ್ತ ಪ್ರಯಾಣಿಕರಿಗಾಗಿ ಈ ಹೊಸ ಸೌಲಭ್ಯವನ್ನು ಆರಂಭಿಸಲಾಗಿದೆ.

Written by - Bhavishya Shetty | Last Updated : Aug 26, 2022, 01:22 PM IST
    • ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ರೈಲು ನಿಲ್ದಾಣದಲ್ಲಿ ಹೊಸ ಸೌಲಭ್ಯ
    • ಈ ಸೌಲಭ್ಯ ಜಾರಿಗೆ ಬಂದ ನಂತರ ನಿಲ್ದಾಣಕ್ಕೆ ಬರುವ ಪ್ರಯಾಣಿಕರು ಹೋಟೆಲ್‌ಗಾಗಿ ಹುಡುಕಾಡಬೇಕಾಗಿಲ್ಲ
    • ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರಿಗಾಗಿ ಪಾಡ್ ಹೋಟೆಲ್ ಅನ್ನು ಪ್ರಾರಂಭಿಸಲಾಯಿತು
ಭಾರತೀಯ ರೈಲ್ವೇಯಿಂದ ಹೊಸ ಪ್ಲ್ಯಾನ್: ಇನ್ಮುಂದೆ ನಿಲ್ದಾಣದಲ್ಲಿ ತಂಗಲು ಸ್ಲೀಪಿಂಗ್ ಪಾಡ್ ವ್ಯವಸ್ಥೆ title=
Indian Railways

ರೈಲ್ವೆ ಕಡೆಯಿಂದ ಪ್ರಯಾಣಿಕರ ಸೌಲಭ್ಯಗಳ ಕುರಿತು ನಿರಂತರ ಕೆಲಸ ಮಾಡಲಾಗುತ್ತಿದೆ. ದೂರದ ಪ್ರಯಾಣ ಮಾಡಿ ದಣಿದಿರುವ ಪ್ರಯಾಣಿಕರಿಗಾಗಿ ಇದೀಗ ರೈಲ್ವೆ ಹೊಸ ಸೌಲಭ್ಯವನ್ನು ಪ್ರಾರಂಭಿಸಿದೆ. ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳನ್ನು ನೋಡಿದ ನೆಟ್ಟಿಗರು ಸಂತೋಷ ವ್ಯಕ್ತಪಡಿಸಿದ್ದಾರೆ.

ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT) ರೈಲು ನಿಲ್ದಾಣದಲ್ಲಿ ಬೇಸತ್ತ ಪ್ರಯಾಣಿಕರಿಗಾಗಿ ಈ ಹೊಸ ಸೌಲಭ್ಯವನ್ನು ಆರಂಭಿಸಲಾಗಿದೆ.

ಇದನ್ನೂ ಓದಿ: ದೇಹದಲ್ಲಿನ ಕ್ಯಾಲ್ಶಿಯಂ ಕೊರತೆಯನ್ನು ನೀಗಿಸಲು ಸೂಪರ್ ಫುಡ್ ಗಳಿವು ..!

ಕಡಿಮೆ ವೆಚ್ಚದ ವಸತಿ: ಈ ಸೌಲಭ್ಯ ಜಾರಿಗೆ ಬಂದ ನಂತರ ನಿಲ್ದಾಣಕ್ಕೆ ಬರುವ ಪ್ರಯಾಣಿಕರು ಹೋಟೆಲ್‌ಗಾಗಿ ಹುಡುಕಾಡಬೇಕಾಗಿಲ್ಲ. ಅಲ್ಲದೆ, ಇಲ್ಲಿ ನೀವು ಕಡಿಮೆ ವೆಚ್ಚದಲ್ಲಿ ಉಳಿಯುವ ಸೌಲಭ್ಯವನ್ನು ಪಡೆಯುತ್ತೀರಿ. ರೈಲ್ವೆಯು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT) ನಲ್ಲಿ ಪ್ರಯಾಣಿಕರಿಗೆ ಸ್ಲೀಪಿಂಗ್ ಪಾಡ್‌ಗಳನ್ನು ಪ್ರಾರಂಭಿಸಿದೆ. ಈ ಹಿಂದೆ 2021 ರಲ್ಲಿ ಮುಂಬೈ ಸೆಂಟ್ರಲ್ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರಿಗಾಗಿ ಪಾಡ್ ಹೋಟೆಲ್ ಅನ್ನು ಪ್ರಾರಂಭಿಸಲಾಯಿತು.

ಆರಾಮದಾಯಕ ಮತ್ತು ಆರ್ಥಿಕ ವಾಸ್ತವ್ಯದ ಆಯ್ಕೆಯನ್ನು ಒದಗಿಸಲು ಭಾರತೀಯ ರೈಲ್ವೇ ಒಂದು ಉಪಕ್ರಮವನ್ನು ತೆಗೆದುಕೊಂಡಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಮಲಗಿರುವ ಪಾಡ್‌ನ ಚಿತ್ರಗಳನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸ್ಲೀಪಿಂಗ್ ಪಾಡ್‌ಗಳು ಪ್ರಯಾಣಿಕರಿಗೆ ತಂಗಲು ಚಿಕ್ಕ ಕೊಠಡಿಗಳಾಗಿವೆ. ಇವುಗಳನ್ನು ಕ್ಯಾಪ್ಸುಲ್ ಹೋಟೆಲ್ ಎಂದೂ ಕರೆಯುತ್ತಾರೆ. 

ಇದನ್ನೂ ಓದಿ: ವಾಟ್ಸಾಪ್‌ನ ಅದ್ಭುತ ಫೀಚರ್: ಈಗ ನೀವು ಅಪ್ಲಿಕೇಶನ್ ತೆರೆಯದೆಯೂ ಸಂದೇಶ ಕಳುಹಿಸಬಹುದು

ನಿಲ್ದಾಣದಲ್ಲಿ ನಿರ್ಮಿಸಲಾದ ನಿರೀಕ್ಷಣಾ ಕೊಠಡಿಗಳಿಗೆ ಹೋಲಿಸಿದರೆ, ಅವುಗಳ ಶುಲ್ಕ ಕಡಿಮೆ ಮತ್ತು ಅವುಗಳನ್ನು ವೈಯಕ್ತೀಕರಿಸಲಾಗಿದೆ. ಇಲ್ಲಿ ಪ್ರಯಾಣಿಕರ ಅಗತ್ಯಕ್ಕೆ ಅನುಗುಣವಾಗಿ ಸೌಲಭ್ಯ ದೊರೆಯುತ್ತದೆ. ಹವಾನಿಯಂತ್ರಣವನ್ನು ಹೊರತುಪಡಿಸಿ, ಮೊಬೈಲ್ ಫೋನ್ ಚಾರ್ಜಿಂಗ್, ಲಾಕರ್ ರೂಮ್, ಇಂಟರ್‌ಕಾಮ್, ಡೀಲಕ್ಸ್ ಬಾತ್ರೂಮ್ ಮತ್ತು ಶೌಚಾಲಯಗಳು ಇತ್ಯಾದಿ ಸೌಲಭ್ಯಗಳು ಕ್ಯಾಪ್ಸುಲ್ ಹೋಟೆಲ್‌ನಲ್ಲಿ ಲಭ್ಯವಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News