Team India Playing 11 : ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ODI ಸರಣಿಯ ಎರಡನೇ ಪಂದ್ಯವನ್ನು ಮಾರ್ಚ್ 19 ರಂದು ವಿಶಾಖಪಟ್ಟಣದಲ್ಲಿ ನಡೆಯಲಿದೆ. ಸದ್ಯ ಟೀಂ ಇಂಡಿಯಾ 1-0 ಮುನ್ನಡೆಯಲ್ಲಿದೆ. ಓಪನರ್ ರೋಹಿತ್ ಶರ್ಮಾ ಸರಣಿಯ ಎರಡನೇ ಏಕದಿನ ಪಂದ್ಯದಿಂದ ತಂಡಕ್ಕೆ ಮರಳಲಿದ್ದು, ನಾಯಕತ್ವ ವಹಿಸಿಕೊಳ್ಳಲಿದ್ದಾರೆ. ಏಕದಿನ ಪಂದ್ಯದಲ್ಲಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ತಂಡದ ನಾಯಕತ್ವ ವಹಿಸಿದ್ದರು. ರೋಹಿತ್ ಮರಳುವುದರೊಂದಿಗೆ ಒಬ್ಬ ಆಟಗಾರ ತಂಡದಿಂದ ಹೊರಗುಳಿಯುವುದು ಖಚಿತವಾಗಿದೆ. ಹಾಗಿದ್ರೆ ಟೀಂನಿಂದ ಔಟ್ ಆಗುವ ಆಟಗಾರ ಯಾರು? ಇಲ್ಲಿದೆ ಸಂಪೂರ್ಣ ಮಾಹಿತಿ ಇಲ್ಲಿದೆ..


COMMERCIAL BREAK
SCROLL TO CONTINUE READING

1-0 ಮುನ್ನಡೆ ಸಾಧಿಸಿದ ಟೀಂ ಇಂಡಿಯಾ


ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಆತಿಥೇಯರು ಆಸ್ಟ್ರೇಲಿಯಾವನ್ನು 5 ವಿಕೆಟ್‌ಗಳಿಂದ ಸೋಲಿಸಿದರು. ಆಸ್ಟ್ರೇಲಿಯ ತಂಡ 35.4 ಓವರ್‌ಗಳಲ್ಲಿ 188 ರನ್ ಗಳಿಸಿ ಆಲೌಟ್ ಆಯಿತು. ಇದಾದ ಬಳಿಕ ಟೀಂ ಇಂಡಿಯಾ 39.5 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಆರಂಭಿಕ ಆಟಗಾರ ಮಿಚೆಲ್ ಮಾರ್ಷ್ ಆಸ್ಟ್ರೇಲಿಯಾ ಪರ ಗರಿಷ್ಠ 81 ರನ್ ಗಳಿಸಿದರು. ಅವರು 65 ಎಸೆತಗಳ ಇನ್ನಿಂಗ್ಸ್‌ನಲ್ಲಿ 10 ಬೌಂಡರಿ ಮತ್ತು 5 ಸಿಕ್ಸರ್‌ಗಳನ್ನು ಬಾರಿಸಿದರು. ಭಾರತದ ವೇಗಿ ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ 3-3 ವಿಕೆಟ್ ಪಡೆದರು. ಕೆಎಲ್ ರಾಹುಲ್ 91 ಎಸೆತಗಳಲ್ಲಿ 7 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 75 ರನ್ ಗಳಿಸಿದರು. ಅವರು ಅಜೇಯರಾಗಿ ಮರಳಿದರು. ಆಲ್ ರೌಂಡರ್ ರವೀಂದ್ರ ಜಡೇಜಾ 2 ವಿಕೆಟ್ ಪಡೆದು ಔಟಾಗದೆ 45 ರನ್ ಗಳಿಸಿ ಪಂದ್ಯ ಶ್ರೇಷ್ಠ ಎನಿಸಿಕೊಂಡರು. ಭಾರತ 1-0 ಮುನ್ನಡೆ ಸಾಧಿಸಿದೆ.


ಇದನ್ನೂ ಓದಿ : Team India : ಆಸ್ಟ್ರೇಲಿಯಾ ವಿರುದ್ಧ ಗೆಲುವಿನ ರಹಸ್ಯ ಬಿಚ್ಚಿಟ್ಟ ಮೊಹಮ್ಮದ್ ಶಮಿ!


ಟೀಂಗೆ ಮರಳಲಿದ್ದಾರೆ ರೋಹಿತ್ 


ಎರಡನೇ ಏಕದಿನ ಪಂದ್ಯಕ್ಕೆ ಆರಂಭಿಕ ಆಟಗಾರ ರೋಹಿತ್ ಶರ್ಮಾ ತಂಡಕ್ಕೆ ಮರಳಲಿದ್ದಾರೆ. ವೈಯಕ್ತಿಕ ಕಾರಣಗಳಿಂದ ಅವರು ಮೊದಲ ODI ಯಲ್ಲಿ ಆಡಿರಲಿಲ್ಲ. ಈಗ ರೋಹಿತ್ ರಿಎಂಟ್ರಿ, ಪ್ಲೇಯಿಂಗ್-11 ನಲ್ಲಿ ಬದಲಾವಣೆಗಳು ಆಗಲಿವೆ. ನಿಸ್ಸಂಶಯವಾಗಿ ಆರಂಭಿಕ ಸ್ಲಾಟ್‌ನಲ್ಲಿ ಬದಲಾವಣೆಗಳಿರುತ್ತವೆ. ಮುಂಬೈ ಏಕದಿನ ಪಂದ್ಯದಲ್ಲಿ ಇಶಾನ್ ಕಿಶನ್ ಮತ್ತು ಶುಭಮನ್ ಗಿಲ್ ಆರಂಭಿಕ ಜವಾಬ್ದಾರಿಯನ್ನು ವಹಿಸಿಕೊಂಡರು. ಇಶಾನ್ 3 ರನ್ ಗಳಿಸಿದರೆ, ಶುಭಮನ್ 20 ರನ್ ಗಳಿಸಿದರು.


ಯಾರು ಔಟ್ ಆಗುತ್ತಾರೆ?


ರೋಹಿತ್ ಮರಳಿದ ನಂತರ, ಕನಿಷ್ಠ ಒಬ್ಬ ಆಟಗಾರನನ್ನು ಪ್ಲೇಯಿಂಗ್-11 ರಿಂದ ಕೈಬಿಡಲಾಗುತ್ತದೆ. ಶುಭಮನ್ ಗಿಲ್ ಮತ್ತು ಇಶಾನ್ ಕಿಶನ್ ಆರಂಭಿಕರಾಗಿ ತಂಡದಲ್ಲಿದ್ದಾರೆ. ಕೆಎಲ್ ರಾಹುಲ್ ವಿಕೆಟ್‌ಕೀಪರ್ ಆಗಿ ಆಡಿದರು ಮತ್ತು 5 ನೇ ಸ್ಥಾನದಲ್ಲಿ ಬ್ಯಾಟಿಂಗ್‌ಗೆ ಬಂದರು. ಹೀಗಾಗಿ, ರೋಹಿತ್ ಬಂದ ನಂತರ ಶುಭಮನ್ ಅಥವಾ ಇಶಾನ್ ಈ ಇಬ್ಬರಲ್ಲಿ ಒಬ್ಬ ಆಟಗಾರ ಔಟಾಗಲಿದ್ದಾರೆ. ಇಶಾನ್ ಔಟ್ ಆಗುವ ಎಲ್ಲ ಸಾಧ್ಯತೆಗಳಿವೆ. ರೋಹಿತ್ ಪ್ರಯೋಗವಾಗಿ ಇಶಾನ್ ಅವರನ್ನು ಓಪನರ್ ಆಗಿ ಕಣಕ್ಕಿಳಿಸಬಹುದು. ಅವರು ಆಕ್ರಮಣಕಾರಿ ರೀತಿಯಲ್ಲಿ ಆಡುತ್ತಾರೆ. ಕೆಎಲ್ ರಾಹುಲ್ ನಂಬರ್-5ರಲ್ಲಿ ಮಾತ್ರ ಇಳಿಯಬಹುದು.


ಇದನ್ನೂ ಓದಿ : IND vs AUS : ಎರಡನೇ ODIಗೂ ಮುನ್ನ ಭಾರತೀಯ ಅಭಿಮಾನಿಗಳಿಗೆ ಬಿಗ್ ಶಾಕ್..!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.