Team India : ಆಸ್ಟ್ರೇಲಿಯಾ ವಿರುದ್ಧ ಗೆಲುವಿನ ರಹಸ್ಯ ಬಿಚ್ಚಿಟ್ಟ ಮೊಹಮ್ಮದ್ ಶಮಿ!

Team India : ಶಮಿ ಮೊದಲ ODI ನಲ್ಲಿ ಆರು ಓವರ್‌ಗಳಲ್ಲಿ ಎರಡು ಓವರ್‌ ಮೇಡನ್‌ ಮಾಡಿ, 17 ರನ್‌ಗಳಿಗೆ, ಮೂರು ವಿಕೆಟ್‌ಗಳನ್ನು ಪಡೆದರು. ಇದು ಭಾರತವು ಆಸ್ಟ್ರೇಲಿಯಾವನ್ನು 35.4 ಓವರ್‌ಗಳಲ್ಲಿ 188 ರನ್‌ಗಳಿಗೆ ಆಲೌಟ್ ಮಾಡಲು ಸಹಾಯ ಮಾಡಿತು ಮತ್ತು ನಂತರ 39.5 ಓವರ್‌ಗಳಲ್ಲಿ ಗುರಿ ಮುಟ್ಟಿತು.

Written by - Channabasava A Kashinakunti | Last Updated : Mar 18, 2023, 04:08 PM IST
  • ಮೊಹಮ್ಮದ್ ಶಮಿ ರಹಸ್ಯ ಬಹಿರಂಗ
  • ಅಭ್ಯಾಸವಿಲ್ಲದೆ ಪಂದ್ಯಗಳನ್ನು ಆಡುತ್ತಾರೆ!
  • ಮೂರು ವಿಕೆಟ್ ಪಡೆದ ಸಿರಾಜ್
Team India : ಆಸ್ಟ್ರೇಲಿಯಾ ವಿರುದ್ಧ ಗೆಲುವಿನ ರಹಸ್ಯ ಬಿಚ್ಚಿಟ್ಟ ಮೊಹಮ್ಮದ್ ಶಮಿ! title=

IND vs AUS 1st ODI Match : ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ (IND vs AUS) ನಡುವೆ ODI ಸರಣಿಯ ಮೊದಲ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ವೇಗದ ಬೌಲರ್ ಮೊಹಮ್ಮದ್ ಶಮಿ ಟೀಂ ಇಂಡಿಯಾದ ಯಶಸ್ವಿ ಬೌಲರ್ ಎನಿಸಿಕೊಂಡರು. ಈ ಪಂದ್ಯದ ನಂತರ ಮೊಹಮ್ಮದ್ ಶಮಿ ತಮ್ಮ ಆಟದ ಬಗ್ಗೆ ರಹಸ್ಯ ಬಿಚ್ಚಿಟ್ಟಿದ್ದಾರೆ. ಶಮಿ ಮೊದಲ ODI ನಲ್ಲಿ ಆರು ಓವರ್‌ಗಳಲ್ಲಿ ಎರಡು ಓವರ್‌ ಮೇಡನ್‌ ಮಾಡಿ, 17 ರನ್‌ಗಳಿಗೆ, ಮೂರು ವಿಕೆಟ್‌ಗಳನ್ನು ಪಡೆದರು. ಇದು ಭಾರತವು ಆಸ್ಟ್ರೇಲಿಯಾವನ್ನು 35.4 ಓವರ್‌ಗಳಲ್ಲಿ 188 ರನ್‌ಗಳಿಗೆ ಆಲೌಟ್ ಮಾಡಲು ಸಹಾಯ ಮಾಡಿತು ಮತ್ತು ನಂತರ 39.5 ಓವರ್‌ಗಳಲ್ಲಿ ಗುರಿ ಮುಟ್ಟಿತು.

ಮೊಹಮ್ಮದ್ ಶಮಿ ರಹಸ್ಯ ಬಹಿರಂಗ

ಆಸ್ಟ್ರೇಲಿಯಾ ವಿರುದ್ಧ ಭಾರತದ ಐದು ವಿಕೆಟ್‌ಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅಗ್ರ ವೇಗದ ಬೌಲರ್ ಮೊಹಮ್ಮದ್ ಶಮಿ, ಬೌಲಿಂಗ್ ನಂತರ ಚೇತರಿಕೆಯ ಪ್ರಕ್ರಿಯೆಯನ್ನು ಪ್ರಮುಖ ಎಂದು ಕರೆದರು. 

ಇದನ್ನೂ ಓದಿ : IND vs AUS : ಎರಡನೇ ODIಗೂ ಮುನ್ನ ಭಾರತೀಯ ಅಭಿಮಾನಿಗಳಿಗೆ ಬಿಗ್ ಶಾಕ್..!

ಬಿಸಿಸಿಐ ಟಿವಿನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಸಹ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರೊಂದಿಗಿನ ಸಂಭಾಷಣೆಯಲ್ಲಿ ಮಾತನಾಡಿಯಾ ಶಮಿ, 'ಪ್ಲಾನ್ ತುಂಬಾ ಸರಳವಾಗಿತ್ತು. ನಾವು ಉತ್ತಮವಾಗಿ ಪ್ರಾರಂಭಿಸುತ್ತೇವೆ, ಸರಿಯಾದ ಪ್ರದೇಶಗಳಲ್ಲಿ ಬೌಲ್ ಮಾಡುತ್ತೇವೆ, ನಮ್ಮ ಲೈನ್ ಮತ್ತು ಲೆಂಗ್ತ್‌ಗೆ ಅಂಟಿಕೊಳ್ಳುತ್ತೇವೆ ಎಂದು ನಾವು ತಂಡದ ಸಭೆಗಳಲ್ಲಿ ಮಾತನಾಡಿದ್ದೇವೆ. ನಮಗೆ 'ಬಿಸಿಲು ಒಂದು ಸಮಸ್ಯೆಯಾಗಿದೆ. ನಾವು ಮೊದಲ ಗ್ರೌಂಡ್ ಗೆ ಇಳಿದಾಗ ಬಿಸಿಲು ತುಂಬಾ ಇತ್ತು. ಆದರೆ ನಂತರ ಗಾಳಿ ಬೀಸಲಾರಂಭಿಸಿದಾಗ ಅದು ಸ್ವಲ್ಪ ಕಡಿಮೆಯಾಯ್ತು.

ಅಭ್ಯಾಸವಿಲ್ಲದೆ ಪಂದ್ಯಗಳನ್ನು ಆಡುತ್ತಾರೆ!

ಅಹಮದಾಬಾದ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಮತ್ತು ಅಂತಿಮ ಟೆಸ್ಟ್‌ನಲ್ಲಿ ಬೌಲಿಂಗ್ ಮಾಡಿದ ನಂತರ ಚೇತರಿಸಿಕೊಳ್ಳಲು, ಅವರು ಮೊದಲ ಏಕದಿನಕ್ಕಾಗಿ ಆಯೋಜಿಸಲಾದ ತರಬೇತಿ ಅವಧಿಯಲ್ಲೂ ಅಭ್ಯಾಸ ಮಾಡಲು ಸಾಧ್ಯವಾಗಲಿಲ್ಲ ಮತ್ತು ನೇರವಾಗಿ ಪಂದ್ಯದಲ್ಲಿ ಆಡಲು ತೆರಳಿದರು. ಈ ಕುರಿತು ಶಮಿ, 'ಅಹಮದಾಬಾದ್‌ನಲ್ಲಿ 40 ಓವರ್‌ಗಳ ನಂತರ, ಚೇತರಿಸಿಕೊಳ್ಳಲು (ಆಯಾಸದಿಂದ ಚೇತರಿಸಿಕೊಳ್ಳಲು) ನನಗೆ ಒಂದರಿಂದ ಎರಡು ದಿನಗಳು ಬೇಕಾಗಿದ್ದವು. ನಾನು ಚೇತರಿಸಿಕೊಂಡು ಪಂದ್ಯದಲ್ಲಿ ಆಡಲು ಇಳಿದೆ. ನನಗೆ ಚೇತರಿಕೆಯ ಅಗತ್ಯವಿದೆ ಎಂದು ತಂಡದ ಆಡಳಿತ ಮಂಡಳಿ ಒಪ್ಪಿಕೊಂಡಿದೆ ಎಂದು ಅವರು ಹೇಳಿದರು. ನಾವು ಸಾಕಷ್ಟು ಪಂದ್ಯಗಳನ್ನು ಆಡಿದ್ದೇವೆ ಮತ್ತು ನಮ್ಮ ಕೌಶಲ್ಯ ಮತ್ತು ಸಾಮರ್ಥ್ಯಗಳು ನಮಗೆ ತಿಳಿದಿದೆ. ಅದಕ್ಕಾಗಿಯೇ ನಾವು ಚೆನ್ನಾಗಿ ಚೇತರಿಸಿಕೊಳ್ಳುವುದು ಮತ್ತು ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುವುದು ಮುಖ್ಯವಾಗಿತ್ತು.

 

ಮೂರು ವಿಕೆಟ್ ಪಡೆದ ಸಿರಾಜ್ 

ಸಿರಾಜ್ ಕೂಡ 29 ರನ್ ನೀಡಿ ಮೂರು ವಿಕೆಟ್ ಪಡೆದು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಬಗ್ಗೆ ಮಾತನಾಡಿಯಾ ಅವರು, 'ನಾನು ಹೊಸ ಚೆಂಡು ಪಡೆದಾಗ, ನಾನು ಇನ್ಸ್ವಿಂಗ್ ಬೌಲಿಂಗ್ ಮಾಡಲು ಪ್ರಯತ್ನಿಸುತ್ತೇನೆ. ಎಡಗೈ ಬ್ಯಾಟ್ಸ್‌ಮನ್ ಮುಂದಿದ್ದರೆ, ನಾನು ಇನ್ಸ್ವಿಂಗ್ ಬೌಲಿಂಗ್ ಮಾಡಲು ಪ್ರಯತ್ನಿಸುತ್ತೇನೆ. ನಾನು ಪವರ್‌ಪ್ಲೇಯಲ್ಲಿ ಗರಿಷ್ಠ ವಿಕೆಟ್‌ಗಳನ್ನು ಪಡೆಯಲು ಪ್ರಯತ್ನಿಸುತ್ತೇನೆ. ನನಗೆ ಒಂದು ವಿಕೆಟ್ ಸಿಕ್ಕಿತು ಎಂದರು.

ಸಿರಾಜ್ ಮಾತನಾಡಿ, 'ನಾನು ಫೈನ್ ಲೆಗ್‌ಗೆ ಹೋದಾಗ, ನೀವು ಬೌಲಿಂಗ್ ಮಾಡುತ್ತಿದ್ದೀರಿ. ಏನಾಗುತ್ತಿದೆ ಎಂದು ನಾನು ಆಶ್ಚರ್ಯ ಪಡುತ್ತಿದ್ದೆ. ಅಂಪೈರ್ ನಿಮಗೆ ಹೊಸ ಚೆಂಡನ್ನು ಕೊಟ್ಟಿದ್ದಾರೆಯೇ ಅಥವಾ ಏನಾಯಿತು? ಎಂಬ ಪ್ರಶ್ನೆಯಲ್ಲಿದ್ದೆ. 'ನಂತರ ನಾನು ಬೌಲಿಂಗ್ ಮಾಡಲು ಬಂದಿದ್ದೇನೆ, ಚೆಂಡು ಚೆನ್ನಾಗಿ ಹಾಕ್ತೇನೆ. ಅದಕ್ಕಾಗಿಯೇ ಅದೇ ಪ್ರದೇಶದಲ್ಲಿ ನಿರಂತರವಾಗಿ ಬೌಲಿಂಗ್ ಮಾಡಲು ಪ್ರಯತ್ನಿಸಿದೆ. ನಾನು ನಿಮ್ಮಿಂದಲೂ ಸಲಹೆಗಳನ್ನು ಪಡೆದಿದ್ದೇನೆ ಮತ್ತು ನಾವು ವಾಂಖೆಡೆಯಲ್ಲಿ ಬೌಲಿಂಗ್ ಮಾಡುವುದನ್ನು ಆನಂದಿಸಿದ್ದೇವೆ.

ಇದನ್ನೂ ಓದಿ : Jadeja Stunning Catch: ರವೀಂದ್ರ ಜಡೇಜಾ ಭರ್ಜರಿ ಡೈವಿಂಗ್ ಕ್ಯಾಚ್‌, ಯುವರಾಜ್‌ ಸಿಂಗ್‌ರನ್ನು ನೆನೆದ ಕ್ರಿಕೆಟ್‌ ಫ್ಯಾನ್ಸ್‌! ವಿಡಿಯೋ ವೈರಲ್‌

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News