VIDEO: ಮೈದಾನದಲ್ಲಿ ಕುಳಿತು ಕಣ್ಣೀರಿಟ್ಟ ರೋಹಿತ್ ಶರ್ಮಾ... ಟೀಂ ಇಂಡಿಯಾ ಕ್ಯಾಪ್ಟನ್ಗೆ ಏನಾಯ್ತು? ವಿಡಿಯೋ ನೋಡಿ
Rohit Sharma: ಅಭ್ಯಾಸ ಪಂದ್ಯದಲ್ಲಿ ಭಾರತೀಯ ಇನ್ನಿಂಗ್ಸ್‌ನ 44 ನೇ ಓವರ್‌ನಲ್ಲಿ, ಕ್ರೀಸ್‌ನಲ್ಲಿದ್ದ ಸರ್ಫರಾಜ್ ಖಾನ್ ಮತ್ತು ವಾಷಿಂಗ್ಟನ್ ಸುಂದರ್‌ಗೆ ಉತ್ತಮ ಆಟ ಆಡುವಂತೆ ರೋಹಿತ್ ಶರ್ಮಾ ಸೂಚಿಸಿದರು. ಆದರೆ, ಕೇವಲ ಮೂರು ಎಸೆತಗಳಲ್ಲಿ ಸರ್ಫರಾಜ್ ವಿಕೆಟ್‌ಕೀಪರ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. ಹೊರಬರುತ್ತಿದ್ದಂತೆ ಸರ್ಫರಾಜ್ ಗೊಂದಲದಲ್ಲಿ ಕಾಣಿಸಿಕೊಂಡರು.
Rohit Sharma Reaction On Sarfaraz Khan Wicket: ಭಾರತ ತಂಡದ ನಾಯಕ ರೋಹಿತ್ ಶರ್ಮಾ ಆಸ್ಟ್ರೇಲಿಯಾ ತಲುಪಿದ್ದಾರೆ. ಅಡಿಲೇಡ್‌ನಲ್ಲಿ ನಡೆಯಲಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯ ಎರಡನೇ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾದ ಕಮಾಂಡರ್ ಆಗಿ ಕಾಣಿಸಿಕೊಳ್ಳಲಿದ್ದಾರೆ.
ಅಡಿಲೇಡ್ ಟೆಸ್ಟ್‌ಗೂ ಮುನ್ನ ಕ್ಯಾನ್‌ಬೆರಾದಲ್ಲಿ ಟೀಂ ಇಂಡಿಯಾ ಪಿಂಕ್ ಬಾಲ್‌ನೊಂದಿಗೆ ಎರಡು ದಿನಗಳ ಅಭ್ಯಾಸ ಪಂದ್ಯವನ್ನು ಆಡಿತ್ತು. ಈ ಪಂದ್ಯದ ವೇಳೆ ರೋಹಿತ್ ಶರ್ಮಾ ಅವರ ಪ್ರತಿಕ್ರಿಯೆ ವೈರಲ್ ಆಗಿದ್ದು, ಸರ್ಫರಾಜ್ ಖಾನ್ ಔಟಾದ ನಂತರ ಕಣ್ಣೀರು ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ ಇದರ ಸತ್ಯಾಸತ್ಯತೆಯನ್ನು ತಿಳಿಯೋಣ.
ಅಭ್ಯಾಸ ಪಂದ್ಯದಲ್ಲಿ ಭಾರತೀಯ ಇನ್ನಿಂಗ್ಸ್‌ನ 44 ನೇ ಓವರ್‌ನಲ್ಲಿ, ಕ್ರೀಸ್‌ನಲ್ಲಿದ್ದ ಸರ್ಫರಾಜ್ ಖಾನ್ ಮತ್ತು ವಾಷಿಂಗ್ಟನ್ ಸುಂದರ್‌ಗೆ ಉತ್ತಮ ಆಟ ಆಡುವಂತೆ ರೋಹಿತ್ ಶರ್ಮಾ ಸೂಚಿಸಿದರು. ಆದರೆ, ಕೇವಲ ಮೂರು ಎಸೆತಗಳಲ್ಲಿ ಸರ್ಫರಾಜ್ ವಿಕೆಟ್‌ಕೀಪರ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. ಹೊರಬರುತ್ತಿದ್ದಂತೆ ಸರ್ಫರಾಜ್ ಗೊಂದಲದಲ್ಲಿ ಕಾಣಿಸಿಕೊಂಡರು.
ಸರ್ಫರಾಜ್ ಔಟಾದ ತಕ್ಷಣ ಕ್ಯಾಮೆರಾ ಭಾರತದ ನಾಯಕ ರೋಹಿತ್ ಶರ್ಮಾ ಅವರ ಪ್ರತಿಕ್ರಿಯೆಗಳನ್ನು ತೋರಿಸುತ್ತಿತ್ತು ಈ ವೇಳೆ ರೋಹಿತ್ ಮುಖ ತಗ್ಗಿಸಿ ಕೈಯಿಂದ ಕಣ್ಣನ್ನು ಮುಚ್ಚಿಕೊಂಡರು. ಟೀಂ ಇಂಡಿಯಾ ನಾಯಕನ ಈ ಪ್ರತಿಕ್ರಿಯೆಯಿಂದ ವೀಕ್ಷಕ ವಿವರಣೆಗಾರರು ಕೂಡ ಅಚ್ಚರಿಗೊಂಡಿದ್ದಾರೆ. ರೋಹಿತ್‌ನ ಪ್ರತಿಕ್ರಿಯೆಯನ್ನು ನೋಡಿದ ಕಾಮೆಂಟೇಟರ್, "ಅವರು ಅಳುತ್ತಿದ್ದಾರಾ ಅಥವಾ ನಗುತ್ತಿದ್ದಾರಾ... ನನ್ನ ಪ್ರಕಾರ ನಗುತ್ತಿದ್ದಾರೆ" ಎಂದು ಹೇಳಿದ್ದಾರೆ.
ಬಿಗ್ ಬಾಸ್‌ನಿಂದ ಹೊರಬರಲು ನಿರ್ಧರಿಸಿದ ಶೋಭಾ ಶೆಟ್ಟಿ ಪಡೆದ ಒಟ್ಟು ಸಂಭಾವನೆ ಎಷ್ಟು ಗೊತ್ತೇ?
ಅಡಿಲೇಡ್‌ನಲ್ಲಿ ನಡೆಯಲಿರುವ ಪಿಂಕ್ ಬಾಲ್ ಟೆಸ್ಟ್ ಡಿಸೆಂಬರ್ 6 ರಿಂದ ಪ್ರಾರಂಭವಾಗಲಿದೆ. ಇದು ಹಗಲು-ರಾತ್ರಿ ಟೆಸ್ಟ್ ಆಗಿದ್ದು ಭಾರತೀಯ ಕಾಲಮಾನದ ಪ್ರಕಾರ ಈ ಪಂದ್ಯ ಬೆಳಗ್ಗೆ 9.30ಕ್ಕೆ ಆರಂಭವಾಗಲಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.