ರಾಂಚಿ: ಸೆಲೆಬ್ರಿಟಿಗಳಿಗೆ ಆರೋಗ್ಯದಲ್ಲಿ ಏನಾದರೂ ಸಮಸ್ಯೆಯುಂಟಾದರೆ ದೇಶ-ವಿದೇಶದ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುವುದನ್ನು ನೀವು ಕೇಳಿರಬಹುದು. ಸಣ್ಣ ಮಟ್ಟದ ಗಾಯ, ನೋವು ಆದರೆ ಅವರು ಆಸ್ಪತ್ರೆಗೆ ಹೋಗುವುದಿಲ್ಲ, ಬದಲಿಗೆ ಚಿಕಿತ್ಸೆ ನೀಡಲು ಪ್ರಖ್ಯಾತ ವೈದ್ಯರೇ ಅವರ ಮನೆಗೆ ಬರುತ್ತಾರೆ. ದೊಡ್ಡ ದೊಡ್ಡ ವೈದ್ಯರಿಂದ ಚಿಕಿತ್ಸೆ ಪಡೆದುಕೊಳ್ಳುವ ಸೆಲೆಬ್ರಿಟಿಗಳು ಸಾಮಾನ್ಯ ವೈದ್ಯರತ್ತ ಮುಖ ಮಾಡುತ್ತಾರೆಯೇ..? ಈ ಪ್ರಶ್ನೆಗೆ ನೀವು ಇಲ್ಲ ಅನ್ನಬಹುದು.


COMMERCIAL BREAK
SCROLL TO CONTINUE READING

ಕೋಟಿಗಟ್ಟಲೇ ದುಡ್ಡು ಇರುವ ಸೆಲೆಬ್ರಿಟಿಗಳು ಸಾಮಾನ್ಯರ ವೈದ್ಯರ ಬಳಿ ಹೋಗಿ ಏಕೆ ಚಿಕಿತ್ಸೆ ಪಡೆಯುತ್ತಾರೆ..? ಲಕ್ಷಗಟ್ಟಲೇ ಖರ್ಚು ಮಾಡಿ ಚಿಕಿತ್ಸೆ ಪಡೆದುಕೊಳ್ಳಲು ಅವರು ಹೋಗುವುದು ದೊಡ್ಡ ಆಸ್ಪತ್ರೆಗೆ, ಪ್ರಖ್ಯಾತ ವೈದ್ಯರ ಬಳಿ ಅಂತಾ ಎಲ್ಲರೂ ಅಂದುಕೊಂಡಿರುತ್ತಾರೆ. ಆದರೆ ಇದನ್ನು ಕ್ಯಾಪ್ಟನ್ ಕೂಲ್ ಖ್ಯಾತಿಯ ಎಂ.ಎಸ್.ಧೋನಿ ಹುಸಿ ಮಾಡಿದ್ದಾರೆ.


ಇದನ್ನೂ ಓದಿ: India vs England: ಭಾರತ-ಇಂಗ್ಲೆಂಡ್‌ ಟೆಸ್ಟ್: ಎಷ್ಟನೇ ಸ್ಥಾನದಲ್ಲಿ ಆಡಲಿದ್ದಾರೆ ಕೊಹ್ಲಿ!


ಹೌದು, ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್.ಧೋನಿ ತಮ್ಮ ಸರಳತೆಯಿಂದ ಸುದ್ದಿಯಾಗಿದ್ದಾರೆ. ತಮ್ಮ ಮೊಣಕಾಲು ನೋವಿಗೆ ಹಳ್ಳಿಯಲ್ಲಿರುವ ಸಾಮಾನ್ಯ ಆಯುರ್ವೇದಿಕ್ ವೈದ್ಯರ ಮೊರೆ ಹೋಗಿದ್ದಾರೆ. ಕೇವಲ 40 ರೂ. ಕೊಟ್ಟು ಚಿಕಿತ್ಸೆ ಪಡೆದುಕೊಂಡಿದ್ದಾರೆ. ಗ್ರೇಟ್ ಫಿನಿಶರ್ ಖ್ಯಾತಿಯ ಧೋನಿ ಹಲವಾರು ತಿಂಗಳುಗಳಿಂದ ಮೊಣಕಾಲು ನೋವಿನಿಂದ ಬಳಲುತ್ತಿದ್ದಾರೆ. ಹಲವು ವೈದ್ಯರನ್ನು ಭೇಟಿ ಮಾಡಿದರೂ ನೋವು ಮಾತ್ರ ಕಡಿಮೆಯಾಗಿರಲಿಲ್ಲ.


ರಾಂಚಿಯಿಂದ ಸುಮಾರು 70 ಕಿಮೀ ದೂರದಲ್ಲಿರುವ ಲಪುಂಗ್‌ನ ದಟ್ಟ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಆಯುರ್ವೇದ ವೈದ್ಯ ವಂದನ್ ಸಿಂಗ್ ಖೇರ್ವಾರ್ ಅವರು ಧೋನಿಯ ನೋವಿಗೆ ಔಷಧ ನೀಡಿದ್ದಾರೆ. ವಂದನ್ ಸಿಂಗ್ ಅವರು ನೀಡಿದ ಚಿಕಿತ್ಸೆಗೆ ಕ್ರಿಕೆಟಿಗ ಮೊನಕಾಲು ನೋವು ಕಾಣದಂತೆ ಮಾಯವಾಗಿದೆ.


ಇದನ್ನೂ ಓದಿ: Malaysia Open 2022: ಕ್ವಾರ್ಟರ್ ಫೈನಲ್‌ನಲ್ಲಿ ಪಿ.ವಿ ಸಿಂಧುಗೆ ಸೋಲು


ಈ ಹಿಂದೆಯೂ ವಂದನ್ ಸಿಂಗ್ ಅವರ ಬಳಿ ಧೋನಿ ಪೋಷಕರು ಚಿಕಿತ್ಸೆ ಪಡೆದುಕೊಂಡಿದ್ದರು. ಅವರ ಚಿಕಿತ್ಸೆಯಲ್ಲಿ ಸಕಾರಾತ್ಮಕ ಫಲಿತಾಂಶ ನೋಡಿದ ನಂತರ ತಾವು ಸಹ ಮೊಣಕಾಲಿನ ಚಿಕಿತ್ಸೆ ಪಡೆಯಲು ನಿರ್ಧರಿಸಿದರು.  ವೈದ್ಯರ ಪ್ರಕಾರ, ಧೋನಿ ಅವರು ಕ್ಯಾಲ್ಸಿಯಂ ಕೊರತೆಯಿಂದ ಮೊಣಕಾಲು ನೋವಿನಿಂದ ಬಳಲುತ್ತಿದ್ದಾರೆ ಎಂದು ಹೇಳಿದ್ದಾರೆ.


‘ನಾನು ಧೋನಿಯವರಿಗೆ ಸಮಾಲೋಚನೆ ಶುಲ್ಕವಾಗಿ 20 ರೂ. ಮತ್ತು ಔಷಧಕ್ಕೆ  20 ರೂ. ಶುಲ್ಕ ವಿಧಿಸಿದ್ದೇನೆ’ ಎಂದು ವಂದನ್ ಸಿಂಗ್ ತಿಳಿಸಿದ್ದಾರೆ. ಪ್ರತಿ 4 ದಿನಗಳಿಗೊಮ್ಮೆ ಇಲ್ಲಿಗೆ ಬರುತ್ತಿದ್ದ ಧೋನಿಗೆ ಕಳೆದೊಂದು ತಿಂಗಳಿನಿಂದ ಚಿಕಿತ್ಸೆ ನೀಡಲಾಗುತ್ತಿದೆ. ‘ಧೋನಿಯವರು ನನ್ನನ್ನು ಕಾಣಲು ಬಂದಾಗ ಅವರನ್ನು ಗುರುತಿಸಲು ಸಾಧ್ಯವಾಗಲಿಲ್ಲ’ ಎಂದು ವಂದನ್ ಸಿಂಗ್ ಹೇಳಿದ್ದಾರೆ. ಕಳೆದ 3 ತಿಂಗಳಿಂದ ಧೋನಿ ಅವರ ಪೋಷಕರಿಗೆ ಸಹ ಚಿಕಿತ್ಸೆ ನೀಡಿದ್ದೇನೆ ಎಂದು ಅವರು ಹೇಳಿದ್ದಾರೆ. ಧೋನಿಯವರು ಚಿಕಿತ್ಸೆ ಪಡೆದುಕೊಳ್ಳಲು ಇಲ್ಲಿಗೆ ಬರುವ ಸುದ್ದಿ ಕೇಳಿ ಸ್ಥಳೀಯರು ಜಮಾಯಿಸುತ್ತಿದ್ದರು. ಹೀಗಾಗಿ ಕ್ಯಾಪ್ಟನ್ ಕೂಲ್‍ಗೆ ಹೆಚ್ಚಿನ ಭದ್ರತೆ ನೀಡಲಾಗಿತ್ತು.  


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ