India vs England: ಏಕದಿನ ಹಾಗೂ ಟಿ20 ಸರಣಿಗೆ ರೋಹಿತ್ ಶರ್ಮಾ ಸಾರಥ್ಯ

ಮರು ನಿಗದಿಪಡಿಸಲಾದ ಐದನೇ ಟೆಸ್ಟ್ ನಂತರ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಗೆ ಟೀಂ ಇಂಡಿಯಾದ ತಂಡವನ್ನು ಬಿಸಿಸಿಐ ಗುರುವಾರದಂದು ಪ್ರಕಟಿಸಿದೆ.

Written by - Zee Kannada News Desk | Last Updated : Jun 30, 2022, 11:54 PM IST
  • ಭಾರತ ಮತ್ತು ಇಂಗ್ಲೆಂಡ್ ಜುಲೈ 7 ರಿಂದ 17 ರವರೆಗೆ ಮೂರು ಟಿ20 ಪಂದ್ಯಗಳನ್ನು ಗಳನ್ನು ಆಡಲಿವೆ, ನಂತರ ಏಕದಿನ ಪಂದ್ಯಗಳನ್ನು ಆಡಲಿದೆ.
  • ಮರುನಿಗದಿಪಡಿಸಲಾದ ಐದನೇ ಟೆಸ್ಟ್‌ನಿಂದ ಹೊರಗುಳಿದ ನಂತರ, ನಾಯಕ ರೋಹಿತ್ ಶರ್ಮಾ ಅವರು ಏಕದಿನ ಹಾಗೂ ಟಿ20 ಸರಣಿಗೆ ಮರಳುತ್ತಾರೆ ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ.
India vs England: ಏಕದಿನ ಹಾಗೂ ಟಿ20 ಸರಣಿಗೆ ರೋಹಿತ್ ಶರ್ಮಾ ಸಾರಥ್ಯ title=
Photo Courtsey: bcci

ನವದೆಹಲಿ: ಮರು ನಿಗದಿಪಡಿಸಲಾದ ಐದನೇ ಟೆಸ್ಟ್ ನಂತರ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಗೆ ಟೀಂ ಇಂಡಿಯಾದ ತಂಡವನ್ನು ಬಿಸಿಸಿಐ ಗುರುವಾರದಂದು ಪ್ರಕಟಿಸಿದೆ.

ಭಾರತ ಮತ್ತು ಇಂಗ್ಲೆಂಡ್ ಜುಲೈ 7 ರಿಂದ 17 ರವರೆಗೆ ಮೂರು ಟಿ20 ಪಂದ್ಯಗಳನ್ನು ಗಳನ್ನು ಆಡಲಿವೆ, ನಂತರ ಏಕದಿನ ಪಂದ್ಯಗಳನ್ನು ಆಡಲಿದೆ. ಮರುನಿಗದಿಪಡಿಸಲಾದ ಐದನೇ ಟೆಸ್ಟ್‌ನಿಂದ ಹೊರಗುಳಿದ ನಂತರ, ನಾಯಕ ರೋಹಿತ್ ಶರ್ಮಾ ಅವರು ಏಕದಿನ ಹಾಗೂ ಟಿ20 ಸರಣಿಗೆ ಮರಳುತ್ತಾರೆ ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ.

ಲೀಸೆಸ್ಟರ್‌ಶೈರ್ ವಿರುದ್ಧದ ಭಾರತದ ಪ್ರವಾಸದ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರಿಗೆ ಕೊರೊನಾ ಇರುವುದು ಧೃಡಪಟ್ಟಿತ್ತು. ಏತನ್ಮಧ್ಯೆ, ಯುವ ವೇಗಿ ಅರ್ಷದೀಪ್ ಸಿಂಗ್ ಗೆ ಮೊದಲ ಬಾರಿಗೆ ಏಕದಿನ ಪಂದ್ಯಕ್ಕೆ ಆಯ್ಕೆಯಾಗಿದ್ದಾರೆ.ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳ T20I ಸರಣಿಗಾಗಿ ಅರ್ಶ್ದೀಪ್ ಭಾರತದ ತಂಡದ ಭಾಗವಾಗಿದ್ದರು, ಆದರೆ ಎರಡೂ ಪಂದ್ಯಗಳಲ್ಲಿ 11 ರ ಬಳಗದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದರು.

ಐದನೇ ಟೆಸ್ಟ್ ನಂತರ ಆಡಲಿರುವ ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ20 ಮತ್ತು ಏಕದಿನ ಸರಣಿಗೆ ಅಖಿಲ ಭಾರತ ಹಿರಿಯ ಆಯ್ಕೆ ಸಮಿತಿಯು ತಂಡವನ್ನು ಆಯ್ಕೆ ಮಾಡಿದೆ ಎಂದು ಬಿಸಿಸಿಐ ಗುರುವಾರ ಹೇಳಿಕೆಯಲ್ಲಿ ತಿಳಿಸಿದೆ.

1 ನೇ ಟಿ20ಐಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ರುತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ಯುಜ್ವೇಂದ್ರ ಚಾಹಲ್, ರವಿ ಬಿಷ್ಣೋ ಪಟೇಲ್ , ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅವೇಶ್ ಖಾನ್, ಅರ್ಶ್ದೀಪ್ ಸಿಂಗ್, ಉಮ್ರಾನ್ ಮಲಿಕ್

2ನೇ ಮತ್ತು 3ನೇ ಟಿ20ಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ರಿಷಬ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಯುಜ್ವೇಂದ್ರ ಚಹಲ್ ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಅವೇಶ್ ಖಾನ್, ಹರ್ಷಲ್ ಪಟೇಲ್, ಉಮ್ರಾನ್ ಮಲಿಕ್

3 ಏಕದಿನ ಪಂದ್ಯಗಳಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಪಟ್ಹಾಲ್, ಜೆ.ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಅರ್ಶ್ದೀಪ್ ಸಿಂಗ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

 

Trending News