Sania Mirza Ex husband:‌ ಮಾಜಿ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಅವರ ಮಾಜಿ ಪತಿ ಶೋಯಿಬ್ ಮಲಿಕ್ ಮತ್ತೆ ಸುದ್ದಿಯಲ್ಲಿದ್ದು.. ಸಂದರ್ಶನವೊಂದರಲ್ಲಿ ಪಾಕ್‌ ನಟಿ ನಟಿ ನವಾಲ್ ಸಯೀದ್ ಇವರ ಬಗ್ಗೆ ಶಾಕಿಂಗ್‌ ಹೇಳಿಕೆಯೊಂದನ್ನು ನೀಡಿದ್ದಾರೆ.. 


COMMERCIAL BREAK
SCROLL TO CONTINUE READING

ಮದುವೆಯಾದ ಮತ್ತು ಪ್ರೀತಿಯಲ್ಲಿರುವ ಕ್ರಿಕೆಟರ್‌ಗಳು ತಮಗೆ ಫ್ಲರ್ಟಿ ಮೇಸೆಜ್‌ ಮಾಡುತ್ತಾರೆ ಎಂದು ಹೇಳಿಕೊಂಡಿದ್ದಾರೆ.. ಈ ಹೇಳಿಕೆ ಸೋಷಿಯಲ್‌ ಮಿಡಿಯಾದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದ್ದು.. ಪರೋಕ್ಷವಾಗಿ ಇದರಲ್ಲಿ  ಶೋಯಿಬ್ ಕೂಡ ಭಾಗಿ ಆಗಿದ್ದಾರೆ ಎನ್ನುವುದನ್ನು ನಟಿ ಒಪ್ಪಿಕೊಂಡಿದ್ದಾರೆ.. 


ಇದನ್ನೂ ಓದಿ-ವಿಜಯಪುರ : ಕೊಳವೆ ಬಾವಿಗೆ ಬಿದ್ದ ಬಾಲಕ, ಚಾಲ್ತಿಯಲ್ಲಿರುವ ರಕ್ಷಣಾ ಕಾರ್ಯಾಚರಣೆ
 
ಪಾಕ್‌ ಕ್ರಿಕೆಟರ್‌ ಶೋಯಿಬ್ ಸಾನಿಯಾ ಮಿರ್ಜಾ ಅವರನ್ನು ಪ್ರೀತಿಸಿ ಮದುವೆ ಆದರು.. ಆದರೆ ಈ ವರ್ಷದಲ್ಲಿ ಆರಂಭದಲ್ಲಿ ಈ ಕ್ರಿಕೆಟಿಗ ಮೂರನೇ ಮದುವೆಯಾಗುವುದರ ಮೂಲಕ ಎಲ್ಲರಿಗೂ ಶಾಕ್‌ ನೀಡಿದ್ದರು.. ಸದ್ಯ ಅವರು ಬೇರೆ ಪಾಕ್‌ ನಟಿಯೊಂದಿಗೆ ಫ್ಲರ್ಟ್ ಮಾಡುತ್ತಿದ್ದಾರೆ ಎನ್ನುವ ಅನುಮಾನ ಅಭಿಮಾನಿಗಳ ಮನದಲ್ಲಿ ಮೂಡಿದೆ.. 


ಪಾಕಿಸ್ತಾನದ ಈ ನಟಿ ಸಂದರ್ಶನದಲ್ಲಿ ಭಾಗವಹಿಸಿ ಮಾತನಾಡಿದ್ದು.. "ನನಗೆ ಹೆಚ್ಚಾಗಿ ಮದುವೆಯಾದ ಮತ್ತು ಈಗಾಗಲೇ ಪ್ರೀತಿಯಲ್ಲಿರುವ ಕ್ರಿಕೆಟರ್‌ಗಳು ಮೇಸೆಜ್‌ ಮಾಡುತ್ತಾರೆ" ಎಂದಿದ್ದಾರೆ.. ಇದರಲ್ಲಿ ನಸೀಮ್ ಶಾ ಎಂದು ಕೇಳಿದಾಗ ನಟಿ ನಕ್ಕಿದ್ದಾರೆ.. ನಂತರ ಶೋಯಿಬ್ ಮಲ್ಲಿಕ್ ಅವರ ಹೆಸರನ್ನು ತೆಗೆದುಕೊಂಡಾಗ ಅದಕ್ಕೂ ನವಾಲ್‌ ನಕ್ಕು ಸುಮ್ಮನಾಗಿದ್ದಾರೆ.. ಸದ್ಯ ಅಭಿಮಾನಿಗಳು ಈ ನಗುವಿನ ಅರ್ಥ ಏನಿರಬಹುದು ಎಂದು ಯೋಚಿಸುತ್ತಿದ್ದಾರೆ.. 


ಇದನ್ನೂ ಓದಿ-IPL 2024 : ಅಬ್ಬರಿಸಿದ ಯಜುವೇಂದ್ರ, ಬೌಲ್ಟ್ ಬೌಲಿಂಗ್, 6 ವಿಕೆಟ್ ಗಳಿಂದ ಜಯ ಗಳಿಸಿದ ರಾಜಸ್ಥಾನ ರಾಯಲ್ಸ್


"ಇದು ಯಾರು ಮೆಚ್ಚುವ ಕೆಲಸವಲ್ಲ.. ಕ್ರಿಕೆಟರ್ಸ್‌ ಈ ರೀತಿ ಮಾಡುವುದು ಸರಿ ಅಲ್ಲ.. ಜನರು ಕಲಾವಿದರಿಗಿಂತ ಕ್ರಿಕೆಟರ್​ಗಳನ್ನು ಹೆಚ್ಚು ಗೌರವಿಸುತ್ತಾರೆ.. ರೋಲ್‌ ಮಾಡೆಲ್‌ ಆಗಿಟ್ಟುಕೊಳ್ಳುತ್ತಾರೆ.. ಅಭಿಮಾನಿಗಳು ನಿಮ್ಮನ್ನು ಅಷ್ಟು ದೊಡ್ಡ ಜಾಗದಲ್ಲಿ ಇಟ್ಟಿರುವಾಗ ಹೀಗೆ ಮಾಡಬಾರದು" ಎಂದಿದ್ದಾರೆ.. ಇದೀಗ ನಟಿಯ ಈ ಮಾತು  ಶೋಯಿಬ್ ಮಲ್ಲಿಕ್ ಮೇಲೆ ಅನುಮಾನ ವ್ಯಕ್ತವಾಗುವಂತೆ ಮಾಡಿದೆ.. 


ಇನ್ನು ನಾವಲ್ ಸಯೀದ್ ಪಾಕಿಸ್ತಾನಿ ಸಿನಿಮಾ ಜಗತ್ತಿನಲ್ಲಿ ಚಿರಪರಿಚಿತ ಹೆಸರು.. ಆಕೆಯ ನಟನೆ ಮಾತ್ರವಲ್ಲದೆ ಸೌಂದರ್ಯದ ಬಗ್ಗೆಯೂ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇವರು ನಟಿಸಿದ ಏಕ್ ಜಾನ್ ಏ ಜಹಾನ್ ಧಾರಾವಾಹಿ ಕೂಡ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ... 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.