ಬರೋಬ್ಬರಿ 11 ಫೋರ್, 5 ಸಿಕ್ಸರ್, 112 ರನ್! ದೇಶೀ ಟೂರ್ನಿಯಲ್ಲಿ ಸ್ಟಾರ್ ಕ್ರಿಕೆಟಿಗನ ಅಬ್ಬರ
ಇದೀಗ ದೇಶೀ ಟೂರ್ನಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ರುತುರಾಜ್ ಅಬ್ಬರಿಸಿದ್ದಾರೆ. ಕೇವಲ 59 ಎಸೆತಗಳಲ್ಲಿ ಅವರು 11 ಬೌಂಡರಿ, 5 ಸಿಕ್ಸರ್ ಬಾರಿಸುವ ಮೂಲಕ 112 ರನ್ ಗಳಿಸಿದ್ದಾರೆ. ಈ ಮೂಲಕ ಅವರ ಶತಕದ ಆಧಾರದ ಮೇಲೆ ಮಹಾರಾಷ್ಟ್ರ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 185 ರನ್ ಕಲೆ ಹಾಕಿದೆ
ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಕಳಪೆ ಪ್ರದರ್ಶನ ತೋರಿದ್ದ ರುತುರಾಜ್ ಗಾಯಕ್ವಾಡ್ ದೇಶೀ ಟೂರ್ನಿಯಲ್ಲಿ ಅಬ್ಬರಿಸಿದ್ದಾರೆ. ಐಪಿಎಲ್ ಸೇರಿ ದೇಶೀ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿರುವ ರುತುರಾಜ್, ಟೀಂ ಇಂಡಿಯಾದಲ್ಲಿ ಮಾತ್ರ ಅಬ್ಬರಿಸುತ್ತಿಲ್ಲ. ಇದಕ್ಕೆ ತಾಜಾ ಉದಾಹರಣೆ ಎಂದರೆ ಆಫ್ರಿಕಾ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ತೋರಿದ ಕಳೆಪೆ ಆಟ. ಅವರು ಕೇವಲ 42 ಎಸೆತಗಳಲ್ಲಿ ಕೇವಲ 19 ರನ್ಗಳಿಸಿದ್ದರು. ಹೀಗಾಗಿ ಮೊದಲ ಏಕದಿನ ಪಂದ್ಯದ ಬಳಿಕ ತಂಡದಿಂದ ಅವರನ್ನು ಕೈಬಿಡಲಾಗಿತ್ತು.
ಇದನ್ನೂ ಓದಿ: Virat-Rohit Fan: ರೋಹಿತ್ ಅಭಿಮಾನಿಯನ್ನು ಕೊಂದ ಕೊಹ್ಲಿ ಫ್ಯಾನ್? ಕಾರಣ ಕೇಳಿದ್ರೆ ದಂಗಾಗ್ತೀರಿ
ಇದೀಗ ದೇಶೀ ಟೂರ್ನಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ರುತುರಾಜ್ ಅಬ್ಬರಿಸಿದ್ದಾರೆ. ಕೇವಲ 59 ಎಸೆತಗಳಲ್ಲಿ ಅವರು 11 ಬೌಂಡರಿ, 5 ಸಿಕ್ಸರ್ ಬಾರಿಸುವ ಮೂಲಕ 112 ರನ್ ಗಳಿಸಿದ್ದಾರೆ. ಈ ಮೂಲಕ ಅವರ ಶತಕದ ಆಧಾರದ ಮೇಲೆ ಮಹಾರಾಷ್ಟ್ರ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 185 ರನ್ ಕಲೆ ಹಾಕಿದೆ.
ಮಹಾರಾಷ್ಟ್ರ ಪರ ಆರಂಭಿಕರಾಗಿ ಕಣಕ್ಕಿಳಿದ ರುತುರಾಜ್ ಗಾಯಕ್ವಾಡ್ ಒಟ್ಟು 65 ಎಸೆತಗಳಲ್ಲಿ 112 ರನ್ ಬಾರಿಸಿದ್ದಾರೆ. ಇನ್ನಿಂಗ್ಸ್ ನಲ್ಲಿ 172.30 ರ ಸ್ಟ್ರೈಕ್ ರೇಟ್ ಮೂಲಕ 59 ಎಸೆತಗಳಲ್ಲಿ 11 ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ ಶತಕವನ್ನು ಪೂರ್ಣಗೊಳಿಸಿದರು. ರುತುರಾಜ್ ಗಾಯಕ್ವಾಡ್ ಕೇವಲ 17 ಎಸೆತಗಳಲ್ಲಿ 78 ರನ್ ಗಳಿಸಿದ್ದರು.
ಇದನ್ನೂ ಓದಿ: Virat Kohli: ಗ್ರೇಟ್ ಕ್ರಿಕೆಟರ್ ಆಗಿದ್ದೇ ತಪ್ಪಾಯ್ತಾ? ವಿರಾಟ್ ಕೊಹ್ಲಿ ಬಂಧನಕ್ಕೆ ಭಾರೀ ಆಗ್ರಹ! ಕಾರಣವೇನು ನೋಡಿ
ರುತುರಾಜ್ ಜೊತೆ ಇನ್ನಿಂಗ್ಸ್ ಆರಂಭಿಸಿದ ಯಶ್ ನಹರ್ ಕೇವಲ 1 ರನ್ ಗಳಿಸಿದರೆ, ರಾಹುಲ್ ತ್ರಿಪಾಠಿ 19 ರನ್, ನೌಶಾದ್ ಶೇಖ್ 24 ರನ್ ಕಲೆಹಾಕಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.