ರೋಹಿತ್ ಶರ್ಮಾ ಅಥವಾ ವಿರಾಟ್ ಕೊಹ್ಲಿ ಯಾರು ಉತ್ತಮ ಕ್ರಿಕೆಟಿಗ ಎಂದು ಕುಡಿದ ಮತ್ತಿನಲ್ಲಿ ಜಗಳವಾಡಿದ ಇಬ್ಬರು ತಮ್ಮ ಜೀವನವನ್ನೇ ಹಾಳು ಮಾಡಿಕೊಂಡಿದ್ದಾರೆ. ಒಬ್ಬನ ಪ್ರಾಣ ಹೋಗಿದ್ದರೆ, ಮತ್ತೊಬ್ಬ ಕೊಲೆ ಆರೋಪದಲ್ಲಿ ಜೈಲು ಸೇರಿದ್ದಾನೆ. ಕ್ರಿಕೆಟ್ ವಿಚಾರದಲ್ಲಿ ಗಲಾಟೆ ಪ್ರಾರಂಭವಾಗಿದ್ದ ಕೊಹ್ಲಿ ಅಭಿಮಾನಿ, ರೋಹಿತ್ ಅಭಿಮಾನಿಯನ್ನು ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Pro Kabaddi League 2022: ಯು ಮುಂಬಾ, ಜೈಪುರಕ್ಕೆ ಒಲಿದ ವಿಜಯಲಕ್ಷ್ಮಿ: ಗುಜರಾತ್ ಗೂ ಜಯದ ಮಾಲೆ
ಮೃತರನ್ನು ಪಿ ವಿಘ್ನೇಶ್ (24) ಮತ್ತು ಆರೋಪಿ ಎಸ್ ಧರ್ಮರಾಜ್ ಎಂದು ಗುರುತಿಸಲಾಗಿದೆ. ಇಬ್ಬರೂ ಕ್ರಿಕೆಟ್ ಅಭಿಮಾನಿಗಳು. ಅರಿಯಾಲೂರು ಜಿಲ್ಲೆಯ ಪೊಯ್ಯೂರು ಗ್ರಾಮದವರಾಗಿದ್ದಾರೆ. ಐಟಿಐ ಮುಗಿಸಿದ್ದ ವಿಘ್ನೇಶ್ ಸಿಂಗಾಪುರಕ್ಕೆ ತೆರಳಲು ಉದ್ಯೋಗ ವೀಸಾಗಾಗಿ ಕಾಯುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕೀಲಪಾಲೂರು ಪೊಲೀಸರ ಪ್ರಕಾರ, ರೋಹಿತ್ ಶರ್ಮಾ ಅಭಿಮಾನಿ ವಿಘ್ನೇಶ್ ಮತ್ತು ವಿರಾಟ್ ಕೊಹ್ಲಿ ಫ್ಯಾನ್ ಧರ್ಮರಾಜ್ ಮಂಗಳವಾರ ರಾತ್ರಿ ಮಲ್ಲೂರು ಬಳಿಯ ಸಿಡ್ಕೊ ಇಂಡಸ್ಟ್ರಿಯಲ್ ಎಸ್ಟೇಟ್ ಬಳಿಯ ತೆರೆದ ಪ್ರದೇಶದಲ್ಲಿ ಕ್ರಿಕೆಟ್ ಬಗ್ಗೆ ಚರ್ಚಿಸುತ್ತಿದ್ದರು. ಇಬ್ಬರೂ ಮದ್ಯ ಸೇವಿಸಿದ್ದರು. ಆರಂಭಿಕ ತನಿಖೆಯ ಪ್ರಕಾರ, ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ವಿಘ್ನೇಶ್ ಮುಂಬೈ ಇಂಡಿಯನ್ಸ್‌ಗೆ ಬೆಂಬಲ ನೀಡುತ್ತಿದ್ದರೆ, ಧರ್ಮರಾಜ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಬೆಂಬಲಿಗರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
“ತಮ್ಮ ಚರ್ಚೆಯ ಸಂದರ್ಭದಲ್ಲಿ ವಿಘ್ನೇಶ್ RCB ಮತ್ತು ವಿರಾಟ್ ಕೊಹ್ಲಿಯನ್ನು ಅಪಹಾಸ್ಯ ಮಾಡಿದ್ದರು. ಅಷ್ಟೇ ಅಲ್ಲದೆ, ಧರ್ಮರಾಜ್ ನನ್ನು ಆಗಾಗ ವಿಘ್ನೇಶ್ ಬಾಡಿ ಶೇಮ್ ಮಾಡುತ್ತಿದ್ದ. ಅಂದು ವಿಘ್ನೇಶ್ ಆರ್‌ಸಿಬಿ ತಂಡವನ್ನು ಧರ್ಮರಾಜ್‌ನ ದೇಹಕ್ಕೆ ಹೋಲಿಸಿ ಮಾತನಾಡಿದ್ದಾನೆ. ಇದರಿಂದ ಕುಪಿತಗೊಂಡ ಧರ್ಮರಾಜ್ ವಿಘ್ನೇಶ್ ಮೇಲೆ ಬಾಟಲಿಯಿಂದ ಹಲ್ಲೆ ನಡೆಸಿ ನಂತರ ಕ್ರಿಕೆಟ್ ಬ್ಯಾಟ್ ನಿಂದ ತಲೆಗೆ ಹೊಡೆದಿದ್ದಾನೆ. ಕೂಡಲೇ ಧರ್ಮರಾಜ್ ಸ್ಥಳದಿಂದ ಪರಾರಿಯಾಗಿದ್ದಾನೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮರುದಿನ ಬೆಳಗ್ಗೆ ಸಿಡ್ಕೊ ಕಾರ್ಖಾನೆಗೆ ತೆರಳುತ್ತಿದ್ದ ಕಾರ್ಮಿಕರ ಗುಂಪೊಂದು ವಿಘ್ನೇಶ್ ಶವವನ್ನು ಕಂಡು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: 7ನೇ ಬಾರಿ ಏಷ್ಯಾಕಪ್ ಗೆದ್ದ ಭಾರತ: ಲಂಕಾ ವಿರುದ್ಧ ಟೀಂ ಇಂಡಿಯಾದ ಅಬ್ಬರ ಹೇಗಿತ್ತು ಗೊತ್ತಾ!
ಪೊಲೀಸರು ವಿಘ್ನೇಶ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಅರಿಯಲೂರಿನ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಾಗಿದೆ.
ಕನ್ನಡ ಭಾಷೆಯಲ್ಲ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.