Sachin Tendulkar Birthday: ಇಂದು ಭಾರತದ ಶ್ರೇಷ್ಠ ಬ್ಯಾಟ್ಸ್‌ಮನ್‌’ಗಳಲ್ಲಿ ಒಬ್ಬರಾದ ಸಚಿನ್ ತೆಂಡೂಲ್ಕರ್ ಅವರ 50ನೇ ವರ್ಷದ ಹುಟ್ಟುಹಬ್ಬ. ಸಚಿನ್ ತೆಂಡೂಲ್ಕರ್ ಅವರನ್ನು ಕ್ರಿಕೆಟ್ ದೇವರು ಎಂದು ಕರೆಯಲಾಗುತ್ತದೆ. ತಮ್ಮ ವೃತ್ತಿಜೀವನದ ಏಕದಿನ ಪಂದ್ಯಗಳಲ್ಲಿ 18,426 ರನ್ ಮತ್ತು ಟೆಸ್ಟ್‌’ನಲ್ಲಿ 15,921 ರನ್ ಗಳಿಸಿದ್ದಾರೆ. ಎಲ್ಲಾ ಮಾದರಿಗಳನ್ನು ಒಳಗೊಂಡಂತೆ, ಸಚಿನ್ ಒಟ್ಟು 100 ಅಂತಾರಾಷ್ಟ್ರೀಯ ಶತಕಗಳನ್ನು ಬಾರಿಸಿದ್ದಾರೆ. ಅಷ್ಟೇ ಅಲ್ಲದೆ ಒಟ್ಟು 201 ವಿಕೆಟ್’ಗಳನ್ನು ಸಹ ಪಡೆದಿದ್ದಾರೆ.


COMMERCIAL BREAK
SCROLL TO CONTINUE READING

ವಿಶ್ವ ಕ್ರಿಕೆಟ್‌’ನ ಅನೇಕ ಅಪಾಯಕಾರಿ ಬ್ಯಾಟ್ಸ್‌’ಮನ್‌’ಗಳನ್ನು ಕ್ರೀಸ್’ನಿಂದ ಹೊರಹಾಕಿದ ಕೀರ್ತಿ ಸಚಿನ್ ತೆಂಡೂಲ್ಕರ್’ಗೆ ಸೇರುತ್ತದೆ. ಸಚಿನ್ ಗರಿಷ್ಠ ಬಾರಿ ಔಟ್ ಮಾಡಿದ 5 ಅಪಾಯಕಾರಿ ಬ್ಯಾಟ್ಸ್‌ಮನ್‌’ಗಳ ಬಗ್ಗೆ ನೋಡೋಣ.


ಇದನ್ನೂ ಓದಿ: Photos: ಕ್ರಿಕೆಟಿಗ ರವೀಂದ್ರ ಜಡೇಜಾ ಮನೆ ನೋಡಿದ್ದೀರಾ? ದೇಶದ ಶ್ರೀಮಂತರ ಮನೆಯೂ ಇಲ್ಲ ಇಷ್ಟೊಂದು ಸುಂದರ


1. ಇಂಜಮಾಮ್-ಉಲ್-ಹಕ್


ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್ ವಿರುದ್ಧ ಅತಿ ಹೆಚ್ಚು ಬಾರಿ ಔಟಾದ ಬ್ಯಾಟ್ಸ್‌’ಮನ್ ಅಂದರೆ ಅದಯ ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್. 120 ಟೆಸ್ಟ್ ಮತ್ತು 378 ಏಕದಿನ ಪಂದ್ಯಗಳಲ್ಲಿ 20,000 ಕ್ಕೂ ಹೆಚ್ಚು ರನ್ ಮತ್ತು 35 ಶತಕಗಳನ್ನು ಗಳಿಸಿದ ಇಂಜಮಾಮ್ ಅವರನ್ನು ಸಚಿನ್ ತೆಂಡೂಲ್ಕರ್ ಅವರು ಕ್ರೀಸ್‌’ನಲ್ಲಿ ನಿಂತಾಗಲೆಲ್ಲಾ ಸುಲಭವಾಗಿ ಔಟ್ ಮಾಡುತ್ತಿದ್ದರು. ಇಂಜಮಾಮ್ ಟೆಸ್ಟ್ ಮತ್ತು ಏಕದಿನದಲ್ಲಿ ಸಚಿನ್ ಮುಂದೆ ಒಟ್ಟು 7 ಬಾರಿ ಔಟಾದಿದ್ದಾರೆ.


2. ಬ್ರಿಯಾನ್ ಲಾರಾ:


ವೆಸ್ಟ್ ಇಂಡೀಸ್‌ನ ಮಾಜಿ ಬ್ಯಾಟ್ಸ್‌ಮನ್ ಬ್ರಿಯಾನ್ ಲಾರಾ ಮತ್ತು ಸಚಿನ್ ತೆಂಡೂಲ್ಕರ್ ಇಬ್ಬರೂ ಶ್ರೇಷ್ಠ ಆಟಗಾರರೆಂದು ಪರಿಗಣಿಸಲ್ಪಟ್ಟಿದ್ದಾರೆ. ಇಬ್ಬರೂ ತಮ್ಮ ಕಾಲದ ಅತ್ಯುತ್ತಮ ಬ್ಯಾಟ್ಸ್‌ಮನ್‌’ಗಳೂ ಹೌದು. ಆದರೆ ವ್ಯತ್ಯಾಸವೆಂದರೆ ಸಚಿನ್ ಬೌಲಿಂಗ್‌’ನಲ್ಲಿ ಪರಿಣಿತರಾಗಿದ್ದರು, ಲಾರಾ ಆಗಿರಲಿಲ್ಲ. ಸಚಿನ್ ತೆಂಡೂಲ್ಕರ್ ಬೌಲಿಂಗ್ ಮುಂದೆ ಲಾರಾ ಅವರಂತಹ ದಿಗ್ಗಜ ಆಟಗಾರ ಸುಲಭವಾಗಿ ಔಟಾಗುತ್ತಿದ್ದದ್ದು ಒಂದು ಅಚ್ಚರಿಯ ಸಂಗತಿ ಎನ್ನಬಹುದು. ಅಂತರಾಷ್ಟ್ರೀಯ ಕ್ರಿಕೆಟ್‌’ನಲ್ಲಿ ಬ್ರಿಯಾನ್ ಲಾರಾ ಅವರನ್ನು 4 ಬಾರಿ ಔಟ್ ಮಾಡುವ ಮೂಲಕ ಸಚಿನ್ ತೆಂಡೂಲ್ಕರ್ ಪೆವಿಲಿಯನ್ ಹಾದಿ ತೋರಿಸಿದ್ದಾರೆ.


3. ಆಂಡಿ ಫ್ಲವರ್:


ಜಿಂಬಾಬ್ವೆಯ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಂಡಿ ಫ್ಲವರ್, ಕ್ರೀಸ್‌ನಲ್ಲಿ ಉಳಿದುಕೊಂಡರೆ ಬೌಲರ್‌ಗಳಿಗೆ ಸಮಸ್ಯೆ ಕಟ್ಟಿಟ್ಟ ಬುತ್ತಿ. ಅಂತರಾಷ್ಟ್ರೀಯ ಕ್ರಿಕೆಟ್‌’ನಲ್ಲಿ ಜಿಂಬಾಬ್ವೆಯ ಶ್ರೇಷ್ಠ ಬ್ಯಾಟ್ಸ್‌ಮನ್‌’ಗಳಲ್ಲಿ ಅವರ ಹೆಸರು ಖಂಡಿತವಾಗಿಯೂ ಬರುತ್ತದೆ. ಆದರೆ, ಈ ಎಡಗೈ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಮುಂದೆ ಯಾವಾಗಲೂ ತೊಂದರೆ ಎದುರಿಸುತ್ತಿದ್ದಾರೆ. ಸಚಿನ್ ತಮ್ಮ ವೃತ್ತಿಜೀವನದಲ್ಲಿ ಆಂಡಿಯನ್ನು 4 ಬಾರಿ ಔಟ್ ಮಾಡಿದ್ದಾರೆ.


4. ಅರ್ಜುನ ರಣತುಂಗ:


ಶ್ರೀಲಂಕಾದ ಮಾಜಿ ನಾಯಕ ಮತ್ತು ಅನುಭವಿ ಆಟಗಾರ ಅರ್ಜುನ ರಣತುಂಗಾ ಅವರನ್ನು ಸಚಿನ್ ತೆಂಡೂಲ್ಕರ್ ಒಟ್ಟು 3 ಬಾರಿ ಔಟ್ ಮಾಡಿ ಪೆವಿಲಿಯನ್‌ಗೆ ಕಳುಹಿಸಿದ್ದರು. ಶ್ರೀಲಂಕಾದ ವಿಶ್ವಕಪ್ ವಿಜೇತ ನಾಯಕ ಅರ್ಜುನ ರಣತುಂಗ ಅವರು ಅನುಭವಿ ಬೌಲರ್‌’ಗಳ ಮುಂದೆ ಸುಲಭವಾಗಿ ಆಡುತ್ತಿದ್ದರೂ ಸಹ, ಸಚಿನ್ ತೆಂಡೂಲ್ಕರ್ ಬಂದರೆ ಸಾಕು ಬ್ಯಾಟಿಂಗ್ ಮಾಡಲು ಸಾಧ್ಯವಾಗುತ್ತಿರಲಿಲ್ಲ.


ಇದನ್ನೂ ಓದಿ: Team India ನಾಯಕ ರೋಹಿತ್ ಶರ್ಮಾ ಪ್ರತೀ ಪಂದ್ಯಕ್ಕೆ ಪಡೆಯೋ ಸಂಭಾವನೆ ಎಷ್ಟು ಗೊತ್ತಾ? ತಿಳಿದರೆ ಶಾಕ್ ಆಗೋದು ಪಕ್ಕಾ


5. ಮಹೇಲಾ ಜಯವರ್ಧನೆ:


ವಿಶ್ವ ಕ್ರಿಕೆಟ್‌’ನ ಬಲಿಷ್ಠ ಬ್ಯಾಟ್ಸ್‌ಮನ್‌’ಗಳಲ್ಲಿ ಒಬ್ಬರಾಗಿದ್ದ ಶ್ರೀಲಂಕಾದ ಮಾಜಿ ನಾಯಕ ಮಹೇಲಾ ಜಯವರ್ಧನೆ ಅವರು ಸಚಿನ್ ತೆಂಡೂಲ್ಕರ್ ಅವರ ಬೌಲಿಂಗ್ ವಿರುದ್ಧ ಅನೇಕ ಬಾರಿ ಸಂಕಷ್ಟಕ್ಕೆ ಸಿಲುಕಿದ್ದರು. ಸಚಿನ್ ತೆಂಡೂಲ್ಕರ್ ತಮ್ಮ ವೃತ್ತಿಜೀವನದಲ್ಲಿ ಮಹೇಲಾ ಜಯವರ್ಧನೆ ಅವರನ್ನು 3 ಬಾರಿ ಔಟ್ ಮಾಡಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ