ನವದೆಹಲಿ: ಕೊರೊನಾವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಟೀಮ್ ಇಂಡಿಯಾದ ಖ್ಯಾತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಇನ್ನೊಬ್ಬ ಆಪ್ತ ಸ್ನೇಹಿತನನ್ನು ಕಳೆದುಕೊಂಡಿದ್ದಾರೆ. ಮಾಜಿ ಕ್ರಿಕೆಟಿಗ ವಿಜಯ್ ಶಿರ್ಕೆ ಮುಂಬೈನ ಥಾಣೆ ಆಸ್ಪತ್ರೆಯಲ್ಲಿ ಕರೋನವೈರಸ್ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ. ಅವರಿಗೆ 57 ವರ್ಷ ವಯಸ್ಸಾಗಿತ್ತು.


COMMERCIAL BREAK
SCROLL TO CONTINUE READING

ಈ ವರ್ಷದ ಅಕ್ಟೋಬರ್‌ನಲ್ಲಿ ಸಚಿನ್ ತೆಂಡೂಲ್ಕರ್‌ನ ಇನ್ನೊಬ್ಬ ಆಪ್ತ ಅವಿ ಕದಮ್ ಕೋವಿಡ್ -19 (Covid 19) ನಿಂದ ಸಾವನ್ನಪ್ಪಿದ್ದರು.  ಕೆಲವು ವರ್ಷಗಳ ಹಿಂದೆ ಥಾಣೆಗೆ ಸ್ಥಳಾಂತರಗೊಂಡಿದ್ದ ಅವರು ಥಾಣೆಯ ಆಸ್ಪತ್ರೆಯಲ್ಲಿ ನಿಧನರಾಗಿದ್ದರು.


ಸಚಿನ್ ತೆಂಡೂಲ್ಕರ್ ಅವರ 17 ವರ್ಷಗಳ ದಾಖಲೆ ಮುರಿದ ವಿರಾಟ್ ಕೊಹ್ಲಿ


ಇದೀಗ ಕರೋನಾ ಮಹಾಮಾರಿಯಿಂದಾಗಿ ಸಚಿನ್ ತಮ್ಮ ಇನ್ನೋರ್ವ ಆಪ್ತ ಸ್ನೇಹಿತ ವಿಜಯ್ ಶಿರ್ಕೆ ಅವರನ್ನೂ ಕಳೆದುಕೊಂಡಿದ್ದಾರೆ. ಕಲ್ಯಾಣ್‌ನಲ್ಲಿ ಹುಟ್ಟಿ ಬೆಳೆದ ಶಿರ್ಕೆ ಮುಂಬೈ ಕ್ರಿಕೆಟ್ ಅಸೋಸಿಯೇಶನ್‌ನ (ಎಂಸಿಎ) 17 ವರ್ಷದೊಳಗಿನ ಬೇಸಿಗೆ ಕ್ಯಾಮ್‌ನಲ್ಲಿ ಎರಡು ವರ್ಷಗಳ ಕಾಲ ತರಬೇತುದಾರರಾಗಿದ್ದರು.


ಸಚಿನ್ ಅವರೊಂದಿಗೆ ಕ್ರಿಕೆಟ್ ಆಡುತ್ತಿದ್ದ ವಿಜಯ್ ಶಿರ್ಕೆ:
1980 ರ ದಶಕದಲ್ಲಿ ಸನ್ ಗ್ರೇಸ್ ಮಾಫತ್ಲಾಲ್ (Sun Grace Mafatlal) ತಂಡಕ್ಕಾಗಿ ಸಚಿನ್ ತೆಂಡೂಲ್ಕರ್  (Sachin Tendulkar) ಮತ್ತು ವಿಜಯ್ ಶಿರ್ಕೆ  (Vijay Shirke) ಒಟ್ಟಿಗೆ ಕ್ರಿಕೆಟ್ ಆಡಿದ್ದರು. ವೇಗದ ಬೌಲರ್ ಆಗಿ ವಿಜಯ್ ಅವರನ್ನು ಈ ತಂಡದಲ್ಲಿ ಸೇರಿಸಲಾಯಿತು.


ಇದನ್ನೂ ಓದಿ: ಕರ್ನಾಟಕದ ಬಡ ಮಕ್ಕಳ ಚಿಕಿತ್ಸೆಗೆ ಮಿಡಿದ ಸಚಿನ್ ತೆಂಡುಲ್ಕರ್ ಹೃದಯ!


ಸಂತಾಪ ವ್ಯಕ್ತಪಡಿಸಿದ ಸಲೀಲ್ ಅಂಕೋಲಾ :
ಸಚಿನ್ ಅವರ ಮತ್ತೊಬ್ಬ ಜೊತೆಗಾರ ಸಲಿಲ್ ಅಂಕೋಲಾ ಅವರು ತಮ್ಮ ಫೇಸ್‌ಬುಕ್ ಪುಟದಲ್ಲಿ ವಿಜಯ್ ಶಿರ್ಕೆ ಅವರಿಗೆ ಶ್ರದ್ದಾಂಜಲಿ ಸಲ್ಲಿಸಿದ್ದಾರೆ. 'ನೀವು ಶೀಘ್ರದಲ್ಲೇ ವಿದಾಯ ಹೇಳಿದ್ದೀರಿ. ನನ್ನ ಸ್ನೇಹಿತ, ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ. ನಾವು ಮೈದಾನ ಮತ್ತು ಮೈದಾನದ ಹೊರಗೆ ಕಳೆದ ಸಮಯವನ್ನು ಎಂದಿಗೂ ಮರೆಯಲಾಗುವುದಿಲ್ಲ' ಎಂದು ಬರೆದಿದ್ದಾರೆ.
 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 


ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.