ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಏಕದಿನ ಪಂದ್ಯಗಳಲ್ಲಿ 12,000 ರನ್ ಗಳಿಸಿದ ಅತಿ ವೇಗದ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೂಲಕ 12,000 ರನ್ನುಗಳನ್ನು ದಾಖಲಿಸಿದ ವೇಗದ ಆಟಗಾರ ಎಂಬ ಸಚಿನ್ ತೆಂಡೂಲ್ಕರ್ (Sachin Tendulkar) ಅವರ 17 ವರ್ಷದ ದಾಖಲೆಯನ್ನು ಮುರಿದಿದ್ದಾರೆ.
ಕ್ಯಾನ್‌ಬೆರಾದ ಮನುಕಾ ಓವಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಮತ್ತು ಅಂತಿಮ ಪಂದ್ಯದ ವೇಳೆ ವಿರಾಟ್ ಕೊಹ್ಲಿ (Virat Kohli) ಈ ಮೈಲಿಗಲ್ಲು ತಲುಪಿದ್ದಾರೆ.
ವಿರಾಟ್ ಕೊಹ್ಲಿ ತಮ್ಮ 242ನೇ ಪಂದ್ಯದಲ್ಲಿ ಭಾರತದ ಇನ್ನಿಂಗ್ಸ್‌ನ 13ನೇ ಓವರ್‌ನಲ್ಲಿ ಸೀನ್ ಅಬಾಟ್ ಅವರ ಎಸೆತಕ್ಕೆ ಸಿಂಗಲ್ ತೆಗೆದುಕೊಂಡಾಗ ಈ ಅಂಕಿ ಅಂಶವನ್ನು ಮುಟ್ಟಿದರು. ಈ ಮೂಲಕ ವಿರಾಟ್ ಕೊಹ್ಲಿ ಸಚಿನ್ ತೆಂಡೂಲ್ಕರ್ ಅವರ ದಾಖಲೆ ಮುರಿದಿದ್ದಾರೆ. ಇನ್ನೊಂದು ವಿಶೇಷತೆ ಎಂದರೆ ಸಚಿನ್ ತೆಂಡೂಲ್ಕರ್ ಈ ದಾಖಲೆ ಮಾಡಲು 300 ಪಂದ್ಯಗಳನ್ನು ತೆಗೆದುಕೊಂಡಿದ್ದರು.
Pregnant ಪತ್ನಿ Anushka Sharmaಳಿಂದ ಶಿರ್ಷಾಸನ ಮಾಡಿಸಿದ ಪತಿ Virat Kohli, PIC ವಿಕ್ಷೀಸಿ
2008ರಲ್ಲಿ ಪದಾರ್ಪಣೆ ಮಾಡಿದ 32 ವರ್ಷದ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೋಹ್ಲಿ ತಮ್ಮ 251ನೇ ಏಕದಿನ ಪಂದ್ಯದಲ್ಲಿ ಆಡುತ್ತಿದ್ದಾರೆ. ಅವರು 60 ಸರಾಸರಿಯಲ್ಲಿ 43 ಶತಕ ಮತ್ತು 59 ಅರ್ಧಶತಕ ಸಿಡಿಸಿದ್ದಾರೆ.
ಏಕದಿನ ಪಂದ್ಯದಲ್ಲಿ ಆಸಿಸ್ ವಿರುದ್ಧ ಹೆಚ್ಚು ರನ್ ಗಳಿಸಿದ ಟಾಪ್ 3 ಭಾರತೀಯ ಆಟಗಾರರು ಯಾರು ಗೊತ್ತೇ?
1989ರಲ್ಲಿ ಏಕದಿನ ಕ್ರಿಕೇಟ್ ಗೆ ಪದಾರ್ಪಣೆ ಮಾಡಿದ್ದ ಸಚಿನ್ ನಿವೃತ್ತರಾಗುವ 2012ರವರೆಗೆ 463 ಏಕದಿನ ಪಂದ್ಯಗಳಿಂದ 44.83 ಸರಾಸರಿಯಲ್ಲಿ 49 ಶತಕ ಮತ್ತು 96 ಅರ್ಧಶತಕಗಳ ಸಹಾಯದಿಂದ 18,426 ರನ್ ಗಳಿಸಿದ್ದಾರೆ.