ನವದೆಹಲಿ: ಪಿ.ವಿ ಸಿಂಧು ಮತ್ತು ಸೈನಾ ನೆಹ್ವಾಲ್ ಏಶಿಯನ್ ಕ್ರೀಡಾಕೂಟದ ಬ್ಯಾಡ್ಮಿಂಟನ್  ಸಿಂಗಲ್ಸ್ ವಿಭಾಗದಲ್ಲಿ ಸೆಮಿಫೈನಲ್ ಗೆ ಲಗ್ಗೆ ಇಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ಭಾನುವಾರ ದಂದು ಏಷ್ಯನ್ ಗೇಮ್ಸ್ನ 18 ನೇ ಆವೃತ್ತಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಥೈಲ್ಯಾಂಡ್ನ ನಿಚ್ವಾನ್ ಜಿಂದಾಪೋಲ್ ಅವರನ್ನು ಸೋಲಿಸುವ ಮೂಲಕ ಮುನ್ನಡೆ ಸಾಧಿಸಿದ್ದಾರೆ.


21-11, 16-21, 21-14 ಅಂತರದಲ್ಲಿ ಮುನ್ನಡೆ ಪಡೆಯುವ ಮೂಲಕ ಗೆಲುವು ಸಾಧಿಸಿದ ಸಿಂಧು ಒಟ್ಟು  ಒಂದು ಗಂಟೆ ಒಂದು ನಿಮಿಷ ಕಾಲ ಹಣಾಹಣಿ ನಡೆಸಿದರು.


ಪಂದ್ಯದ ಮೊದಲಾರ್ದದಲ್ಲಿ  ಹೆಚ್ಚು ಶ್ರಮ ತೆಗೆದುಕೊಳ್ಳದೆ ಮುನ್ನಡೆ ಸಾಧಿಸಿದ ಸಿಂಧು ಎರಡನೇ ಭಾಗದಲ್ಲಿ ಭಾರಿ ಎದುರಾಳಿಯಿಂದ ಭಾರಿ ಪ್ರತಿರೋಧ ಎದುರಿಸಿದರು ಕೊನೆಗೆ  ತಮ್ಮ ಭರ್ಜರಿ ಕೌಶಲ್ಯವನ್ನು  ತೋರಿಸಿದ ಸಿಂಧು ಪಂಧ್ಯವನ್ನು ತಮ್ಮತ್ತ ತಿರುಗುವಂತೆ ಮಾಡಿದರು.


ಇನ್ನೊಂದೆಡೆಗೆ ವಿಶ್ವಶ್ರೇಯಾಂಕದ ಆಟಗಾರ್ತಿ ಸೈನಾ ನೆಹ್ವಾಲ್ ಮಹಿಳಾ ಸಿಂಗಲ್ ವಿಭಾಗದಲ್ಲಿ ಥೈಲ್ಯಾಂಡ್ನ ರಾಚ್ಸಾಕ್ ಇನಾನಾನ್ ವಿರುದ್ಧ 21-18, 21-16 ಅಂತರದಲ್ಲಿ ಗೆಲುವು ದಾಖಲಿಸುವ ಮೂಲಕ ಸೆಮಿಫೈನಲ್ ಗೆ ದಾಪುಗಾಲಿಟ್ಟಿದ್ದಾರೆ.
 
ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಭಾರತದ ಒಟ್ಟು ಪದಕವು ಏಳು ಚಿನ್ನ, ಏಳು ಬೆಳ್ಳಿ ಮತ್ತು 17 ಕಂಚಿನ ಪದಕಗಳೊಂದಿಗೆ 31 ನೇ ಸ್ಥಾನದಲ್ಲಿದೆ.