1983 world cup team india players salary: ಟೀಂ ಇಂಡಿಯಾ 1983ರಲ್ಲಿ ಗೆದ್ದಿದ್ದು ಕೇವಲ ವಿಶ್ವಕಪ್ ಅಲ್ಲ, ಈ ಟ್ರೋಫಿ ಜೊತೆಗೆ ಭಾರತಕ್ಕೆ ಗೌರವವನ್ನೇ ತಂದುಕೊಟ್ಟಿತ್ತು. ಆ ದಿನ ಕ್ರಿಕೆಟ್ ಇತಿಹಾಸದಲ್ಲೇ ಭಾರತೀಯ ತಂಡಕ್ಕೆ ಐತಿಹಾಸಿಕ ದಿನವಾಗಿತ್ತು. ಒಂದು ಕಡೆ ವಿಶ್ವಕಪ್ ಗೆದ್ದಿದ್ದರೆ, ಮತ್ತೊಂದು ಕಡೆ ಸೋಲೇ ಕಂಡಿರದ ವೆಸ್ಟ್ ಇಂಡೀಸ್ ತಂಡಕ್ಕೆ ಸೋಲಿನ ರುಚಿ ತೋರಿಸಿ ಟ್ರೋಫಿಯನ್ನು ಭಾರತ ಎತ್ತಿಹಿಡಿದಿತ್ತು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಯುಜುವೇಂದ್ರ ಚಾಹಲ್ ಟೀಂ ಇಂಡಿಯಾದಲ್ಲಿರಲು ಅರ್ಹನಲ್ಲ ಎಂದ ಈ ಪಾಕ್ ಆಟಗಾರ..!


ಕಪಿಲ್ ದೇವ್ ನಾಯಕತ್ವದಲ್ಲಿ ಟೀಂ ಇಂಡಿಯಾ ಫೈನಲ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿ ಚಾಂಪಿಯನ್ ಆಯಿತು. ಈ ಐತಿಹಾಸಿಕ ಗೆಲುವಿನ ಬಗ್ಗೆ ನಿರ್ದೇಶಕ ಕಬೀರ್ ಖಾನ್ ಸಿನಿಮಾ ಮಾಡಿದ್ದಾರೆ. ಇದರಲ್ಲಿ ರಣವೀರ್ ಸಿಂಗ್ ಮುಖ್ಯ ಭೂಮಿಕೆಯಲ್ಲಿ ಅಂದರೆ ಕಪಿಲ್ ದೇವ್ ಆಗಿ ಬಣ್ಣ ಹಚ್ಚಿದ್ದಾರೆ.


ಇನ್ನು 1983ರ ವಿಶ್ವಕಪ್ ವಿಜೇತ ತಂಡದ ಆಟಗಾರರ ಸಂಬಳ ಎಷ್ಟಿತ್ತು ಎಂಬುದು ನಿಮಗೆ ತಿಳಿದಿದೆಯೇ? ಈಗಿನ ದಿನಗೂಲಿ ಸಂಬಂಳಕ್ಕಿಂತಲೂ ಕಡಿಮೆ ಎಂದರೆ ನೀವು ನಂಬುತ್ತೀರಾ? ಆದರೆ ಇದು ಸತ್ಯ. 1983ರಲ್ಲಿ ಟೀಂ ಇಂಡಿಯಾದ ಆಟಗಾರರು ಏಕದಿನ ಪಂದ್ಯಗಳಿಗೆ ಸಂಭಾವನೆ ಪಡೆಯುತ್ತಿದ್ದು ಕೇವಲ 600 ರೂ.


1983 ರಲ್ಲಿ, ಭಾರತೀಯ ಕ್ರಿಕೆಟ್ ತಂಡದ ಆಟಗಾರರ ವೇತನದ ಹಳೆಯ ಒಪ್ಪಂದದ ಪ್ರತಿಯೊಂದು ಟ್ವಿಟರ್‌’ನಲ್ಲಿ ವೈರಲ್ ಆಗಿದೆ. ಇದರಲ್ಲಿ ನಾಯಕ ಕಪಿಲ್ ದೇವ್, ಮೊಹಿಂದರ್ ಅಮರನಾಥ್, ಸುನಿಲ್ ಗವಾಸ್ಕರ್, ಸಂದೀಪ್ ಪಾಟೀಲ್, ರವಿಶಾಸ್ತ್ರಿ ಸೇರಿದಂತೆ 14 ಆಟಗಾರರು ಹಾಗೂ ಮ್ಯಾನೇಜರ್ ಬಿಷನ್ ಸಿಂಗ್ ಬೇಡಿ ಅವರ ಸಂಭಾವನೆ ಬಗ್ಗೆ ಬರೆಯಲಾಗಿದೆ.  


ಎಲ್ಲಾ ಆಟಗಾರರ ಸಂಬಳವನ್ನು 21 ಸೆಪ್ಟೆಂಬರ್ 1983 ರ ಈ ಪುಟದಲ್ಲಿ ಉಲ್ಲೇಖಿಸಲಾಗಿದೆ. ಇದರಲ್ಲಿ ಕಪಿಲ್ ದೇವ್ ಅವರಿಗೆ ಮೂರು ದಿನಗಳ ಕಾಲ 600 ರೂ. ನಿಗದಿಪಡಿಸಲಾಗಿದೆ. ಅಂದರೆ ದಿನಕ್ಕೆ 200 ರೂಪಾಯಿಗಳು ಎಂದರ್ಥ. ಪಂದ್ಯ ಶುಲ್ಕ 1500 ರೂ. ಹೀಗಾಗಿ ಒಟ್ಟು 2100 ರೂ. ಇನ್ನು ಉಪನಾಯಕ ಮೊಹಿಂದರ್ ಅಮರನಾಥ್‌, ಸುನೀಲ್ ಗವಾಸ್ಕರ್, ಕೆ. ಶ್ರೀಕಾಂತ್, ಯಶಪಾಲ್ ಶರ್ಮಾ, ಸಂದೀಪ್ ಪಾಟೀಲ್, ಕೀರ್ತಿ ಆಜಾದ್, ರೋಜರ್ ಬಿನ್ನಿ, ಮದನ್ ಲಾಲ್, ಸೈಯದ್ ಕಿರ್ಮಾನಿ, ಬಲ್ವಿಂದರ್ ಸಂಧು, ದಿಲೀಪ್ ವೆಂಗ್ಸಾಕರ್, ರವಿಶಾಸ್ತ್ರಿ ಮತ್ತು ಸುನಿಲ್ ವಾಲ್ಸನ್ ಅವರಿಗೂ ಕೂಡ ಅಷ್ಟೇ ಸಂಭಾವನೆ ಇತ್ತು.


ಇದನ್ನೂ ಓದಿ: ಡೋಪಿಂಗ್ ಟೆಸ್ಟ್’ನಿಂದ ಅಮಾನತು! “ನಾನು ತಪ್ಪು ಮಾಡಿಲ್ಲ” ಎನ್ನುತ್ತಾ ನಿವೃತ್ತಿ ಘೋಷಿಸಿದ 24ರ ಹರೆಯದ ಆಟಗಾರ


‘83’ ಚಿತ್ರದಲ್ಲಿ ಕಪಿಲ್ ದೇವ್ ಪಾತ್ರದಲ್ಲಿ ರಣವೀರ್ ಸಿಂಗ್ ನಟಿಸಿದರೆ, ರೋಮಿ ದೇವ್ ಪಾತ್ರದಲ್ಲಿ ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಬಾಲಿವುಡ್ ನ ಹಿರಿಯ ನಟರಾದ ಪಂಕಜ್ ತ್ರಿಪಾಠಿ ಕೂಡ ಕಾಣಿಸಿಕೊಂಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.