ಡೋಪಿಂಗ್ ಟೆಸ್ಟ್’ನಿಂದ ಅಮಾನತು! “ನಾನು ತಪ್ಪು ಮಾಡಿಲ್ಲ” ಎನ್ನುತ್ತಾ ನಿವೃತ್ತಿ ಘೋಷಿಸಿದ 24ರ ಹರೆಯದ ಆಟಗಾರ

Mikael Ymer announced retirement: ಸ್ವೀಡನ್‌’ನ ಮೈಕೆಲ್ ಯೆಮರ್ ಅವರನ್ನು ವೃತ್ತಿಪರ ಟೆನಿಸ್‌’ನಿಂದ 18 ತಿಂಗಳುಗಳ ಕಾಲ ಅಮಾನತುಗೊಳಿಸಲಾಗಿತ್ತು. ಆ ಬಳಿಕ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದರು. ಆದರೆ ಅಮಾನತು ರದ್ದುಗೊಳಿಸಲು ವಿಫಲವಾದ ಬಳಿಕ ತಮ್ಮ ನಿವೃತ್ತಿಯ ನಿರ್ಧಾರವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.

Written by - Bhavishya Shetty | Last Updated : Aug 27, 2023, 09:09 AM IST
    • ಯೆಮರ್ ಅವರನ್ನು ವೃತ್ತಿಪರ ಟೆನಿಸ್‌’ನಿಂದ 18 ತಿಂಗಳುಗಳ ಕಾಲ ಅಮಾನತುಗೊಳಿಸಲಾಗಿತ್ತು
    • ಮಾನತು ರದ್ದುಗೊಳಿಸಲು ವಿಫಲವಾದ ಬಳಿಕ ನಿವೃತ್ತಿಯ ನಿರ್ಧಾರ
    • ಯೆಮರ್ ಕಳೆದ ಏಪ್ರಿಲ್‌’ನಲ್ಲಿ ತನ್ನ ವೃತ್ತಿಜೀವನದ ಉನ್ನತ ಶ್ರೇಣಿಯ 50ನೇ ಶ್ರೇಯಾಂಕ ತಲುಪಿದ್ದರು
ಡೋಪಿಂಗ್ ಟೆಸ್ಟ್’ನಿಂದ ಅಮಾನತು! “ನಾನು ತಪ್ಪು ಮಾಡಿಲ್ಲ” ಎನ್ನುತ್ತಾ ನಿವೃತ್ತಿ ಘೋಷಿಸಿದ 24ರ ಹರೆಯದ ಆಟಗಾರ title=
Mikael Ymer retirement

Mikael Ymer: ವಿಶ್ವದ ಮಾಜಿ 50ನೇ ಶ್ರೇಯಾಂಕದ ಸ್ವೀಡಿಷ್ ಟೆನಿಸ್ ಆಟಗಾರ ಮೈಕೆಲ್ ಯೆಮರ್ ತಮ್ಮ 24 ನೇ ವಯಸ್ಸಿನಲ್ಲಿ ನಿವೃತ್ತಿ ಘೋಷಿಸಿದ್ದಾರೆ. ಈ ನಿರ್ಧಾರದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ನೀಡಿದ್ದು, ಅವರ ಅಭಿಮಾನಿಗಳು ಆಶ್ಚರ್ಯಗೊಂಡಿದ್ದಾರೆ.

ಇದನ್ನೂ ಓದಿ:ಕೊಹ್ಲಿ-ಹಾರ್ದಿಕ್ ಅಲ್ಲ: ಯೋ-ಯೋ ಟೆಸ್ಟ್’ನಲ್ಲಿ ಹೆಚ್ಚು ಅಂಕ ಪಡೆದವ ಈ ದ್ವಿಶತಕ ಹೀರೋ: ವಿಶ್ವಕಪ್’ಗೆ ಸಿಗುತ್ತಾ ನೇರಪ್ರವೇಶ!

ಸ್ವೀಡನ್‌’ನ ಮೈಕೆಲ್ ಯೆಮರ್ ಅವರನ್ನು ವೃತ್ತಿಪರ ಟೆನಿಸ್‌’ನಿಂದ 18 ತಿಂಗಳುಗಳ ಕಾಲ ಅಮಾನತುಗೊಳಿಸಲಾಗಿತ್ತು. ಆ ಬಳಿಕ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದರು. ಆದರೆ ಅಮಾನತು ರದ್ದುಗೊಳಿಸಲು ವಿಫಲವಾದ ಬಳಿಕ ತಮ್ಮ ನಿವೃತ್ತಿಯ ನಿರ್ಧಾರವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.

ಯೆಮರ್ ಕಳೆದ ಏಪ್ರಿಲ್‌’ನಲ್ಲಿ ತನ್ನ ವೃತ್ತಿಜೀವನದ ಉನ್ನತ ಶ್ರೇಣಿಯ 50ನೇ ಶ್ರೇಯಾಂಕ ತಲುಪಿದ್ದರು. ಡೇವಿಸ್ ಕಪ್‌ನಲ್ಲಿ ಸ್ವೀಡನ್ ದೇಶವನ್ನು ಪ್ರತಿನಿಧಿಸಿದ್ದ ಅವರು, ಇತ್ತೀಚಿನ ಎಟಿಪಿ ಶ್ರೇಯಾಂಕದಲ್ಲಿ 80 ನೇ ಸ್ಥಾನದಲ್ಲಿದ್ದರು. ಇನ್ನೊಂದೆಡೆ ಈ ವರ್ಷದ ಆರಂಭದಲ್ಲಿ ತಮ್ಮ ವೃತ್ತಿಜೀವನದ ಮೊದಲ ಟಾಪ್-10 ಗೆಲುವನ್ನು ಪಡೆದರು. ಜುಲೈನಲ್ಲಿ, ಈ ಆಟಗಾರ ವಿಂಬಲ್ಡನ್‌ನ ಎರಡನೇ ಸುತ್ತಿನಲ್ಲಿ 9 ನೇ ಶ್ರೇಯಾಂಕದ ಟೇಲರ್ ಫ್ರಿಟ್ಜ್ ಅವರನ್ನು ಸೋಲಿಸಿದ್ದರು.

ಇದನ್ನೂ ಓದಿ: ʼಯೋ-ಯೋ ಟೆಸ್ಟ್ʼ ಎಂದರೇನು ಗೊತ್ತಾ..? ಇಲ್ಲಿ ಪಾಸ್‌ ಆದ್ರೆ ಮಾತ್ರ ವಿಶ್ವಕಪ್‌ನಲ್ಲಿ ಆಟ..!

ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ:

ಜುಲೈ ತಿಂಗಳಲ್ಲಿ ಯೆಮೆರ್ ಟ್ವೀಟ್ ಒಂದನ್ನು ಮಾಡಿದ್ದರು. ಅದರಲ್ಲಿ “ನಾನು ಯಾವುದೇ ತಪ್ಪು ಮಾಡಿಲ್ಲ ಎಂಬ ಅಂಶಕ್ಕೆ ನಾನು ದೃಢವಾಗಿ ನಿಲ್ಲುತ್ತೇನೆ. ನನ್ನ ಮೇಲೆ ಮತ್ತೆ ಕಾನೂನು ಕ್ರಮ ಜರುಗಿಸಲು ಮತ್ತು ನಂತರ ನನಗೆ ಶಿಕ್ಷೆ ವಿಧಿಸುವ ಅವರ ನಿರ್ಧಾರವನ್ನು ನಾನು ಅನ್ಯಾಯವೆಂದು ಪರಿಗಣಿಸುತ್ತೇನೆ. ಇದಲ್ಲದೆ, ಅವರು 18 ತಿಂಗಳ ಅಮಾನತು ನ್ಯಾಯಯುತ ಶಿಕ್ಷೆಯನ್ನು ಕಂಡುಕೊಂಡಿದ್ದಾರೆ ಎಂದು ಅರ್ಥಮಾಡಿಕೊಳ್ಳಲು ನನಗೆ ಕಷ್ಟವಾಗುತ್ತದೆ. ನಿಷೇಧಿತ ವಸ್ತುಗಳನ್ನು ಬಳಸಿಲ್ಲ” ಎಂದು ಹೇಳಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News