Virat Kohli- ಈ ಇಬ್ಬರು ಕ್ರಿಕೆಟಿಗರು ವಿರಾಟ್ ಕೊಹ್ಲಿಗಿಂತ ಅಧಿಕ ವೇತನ ಪಡೆಯುತ್ತಾರೆ!
ವಿರಾಟ್ ಕೊಹ್ಲಿ ವಿಶ್ವದಲ್ಲೇ ಅತಿ ಹೆಚ್ಚು ಆದಾಯ ಗಳಿಸುವ ಕ್ರಿಕೆಟಿಗ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ವಿರಾಟ್ ಕೊಹ್ಲಿಗಿಂತ ಹೆಚ್ಚಿನ ಸಂಬಳ ಪಡೆಯುವ ಇಬ್ಬರು ಆಟಗಾರರೂ ಇದ್ದಾರೆ.
ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಪ್ರಸ್ತುತ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟಿಗರಲ್ಲಿ ಒಬ್ಬರು. ವಿರಾಟ್ ಕೊಹ್ಲಿ (Virat Kohli) ಒಂದು ವರ್ಷದಲ್ಲಿ ಎಷ್ಟು ಹಣ ಗಳಿಸುತ್ತಾರೆ ಎಂಬುದನ್ನು ಸಾಮಾನ್ಯ ಮನುಷ್ಯ ಊಹಿಸಲೂ ಸಾಧ್ಯವಿಲ್ಲ. ಬಿಸಿಸಿಐ ಕೂಡ ಪ್ರತಿವರ್ಷ ವಿರಾಟ್ ಕೊಹ್ಲಿಗೆ ಭಾರೀ ಸಂಭಾವನೆ ನೀಡುತ್ತದೆ. ಆದರೆ ವಿರಾಟ್ ಕೊಹ್ಲಿಗಿಂತ ಹೆಚ್ಚಿನ ಸಂಬಳ ಹೊಂದಿರುವ ಅನೇಕ ಆಟಗಾರರಿದ್ದಾರೆ ಎಂದು ನಿಮಗೆ ತಿಳಿದಿದೆಯೇ?
ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿರುವ ಆಟಗಾರರಿವರು:
ಬಿಸಿಸಿಐನ ಗ್ರೇಡ್-ಎ + ಒಪ್ಪಂದದಲ್ಲಿ ಕ್ಯಾಪ್ಟನ್ ವಿರಾಟ್ ಕೊಹ್ಲಿಯ (Virat Kohli) ಹೆಸರು ಸೇರಿದೆ. ಅದರ ಪ್ರಕಾರ ವಿರಾಟ್ ವಾರ್ಷಿಕವಾಗಿ 7 ಕೋಟಿ ರೂಪಾಯಿಗಳನ್ನು ಸಂಭಾವನೆಯಾಗಿ ಪಡೆಯುತ್ತಾರೆ. ವಿರಾಟ್ ಕೊಹ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಆಟಗಾರ, ಆದರೆ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಆಟಗಾರರಲ್ಲಿ ವಿರಾಟ್ ಇಂಗ್ಲೆಂಡ್ ನಾಯಕ ಜೋ ರೂಟ್ ಗಿಂತ ಹಿಂದೆ ಇದ್ದಾರೆ. ಇದಲ್ಲದೇ, ಇಂಗ್ಲೆಂಡ್ ನ ವೇಗದ ಬೌಲರ್ ಜೋಫ್ರಾ ಆರ್ಚರ್ ಕೂಡ ವಿರಾಟ್ ಅವರಿಗಿಂತ ಹೆಚ್ಚಿನ ಸಂಭಾವನೆ ಪಡೆಯುತ್ತಾರೆ.
ಇದನ್ನೂ ಓದಿ- IPL 2021: ರಾಜಸ್ಥಾನ ತಂಡಕ್ಕೆ ಬಿಗ್ ಶಾಕ್! ಈ ಮೂವರು ಸ್ಟಾರ್ ಆಟಗಾರರು ಪಂದ್ಯಾವಳಿಗೆ ಗೈರು
ರೂಟ್-ಆರ್ಚರ್ ರ ಸಂಭಾವನೆ?
ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಸಂಬಳ ಪಡೆಯುವವರಲ್ಲಿ ಟೀಂ ಇಂಡಿಯಾ (Team India) ನಾಯಕ ವಿರಾಟ್ ಕೊಹ್ಲಿ, ಇಂಗ್ಲೆಂಡ್ ನ ಟೆಸ್ಟ್ ನಾಯಕ ಜೋ ರೂಟ್ ಮತ್ತು ಜೋಫ್ರಾ ಆರ್ಚರ್ ಅವರಿಗಿಂತ ಹಿಂದಿದ್ದಾರೆ. ಇಸಿಬಿಯ 2020/21 ಟೆಸ್ಟ್ ಒಪ್ಪಂದದ ಪ್ರಕಾರ, ರೂಟ್ ಮತ್ತು ಆರ್ಚರ್ ವಿರಾಟ್ ಗಿಂತ ಹೆಚ್ಚಿನ ಸಂಬಳ ಪಡೆಯುತ್ತಾರೆ. ಕ್ರಿಕೆಟಿಗ ಡಾನ್ ಕಾಂ ಎಯು ಪ್ರಕಾರ, ಇಸಿಬಿ ಟೆಸ್ಟ್ ಒಪ್ಪಂದದ ಪ್ರಕಾರ, ಎ ಗ್ರೇಡ್ ಹೊಂದಿರುವ ಆಟಗಾರರಿಗೆ ಸುಮಾರು 7.22 ಕೋಟಿ ರೂ. ವೇತನ ನೀಡಲಾಗುವುದು. ಇಂಗ್ಲೆಂಡಿನ ಜೋಫ್ರಾ ಆರ್ಚರ್ ಮತ್ತು ನಾಯಕ ರೂಟ್ ಟೆಸ್ಟ್ ಗ್ರೇಡ್-ಎ ಒಪ್ಪಂದಗಳ ಅಡಿಯಲ್ಲಿ ಬರುತ್ತಾರೆ.
ಇದನ್ನೂ ಓದಿ- ಅಫ್ಘಾನಿಸ್ತಾನ್ ದಲ್ಲಿ ಆಸ್ಟ್ರೇಲಿಯಾದ ಕ್ರಿಕೆಟರ್ ಸ್ಟೀವ್ ಸ್ಮಿತ್...!
ರೋಹಿತ್-ಬುಮ್ರಾ ಕೂಡ ವಿರಾಟ್‌ನಷ್ಟೇ ಸಂಬಳ ಪಡೆಯುತ್ತಾರೆ:
ವಿರಾಟ್ ಹೊರತುಪಡಿಸಿ, ರೋಹಿತ್ ಶರ್ಮಾ ಮತ್ತು ಜಸ್ಪ್ರೀತ್ ಬುಮ್ರಾ ಕೂಡ ಬಿಸಿಸಿಐನ ಎ+ ಗ್ರೇಡ್ ಒಪ್ಪಂದದ ಅಡಿಯಲ್ಲಿ ಬರುತ್ತಾರೆ ಮತ್ತು ಅವರು ವಾರ್ಷಿಕವಾಗಿ 7 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಇದಲ್ಲದೇ, ಬಿಸಿಸಿಐ ಗ್ರೇಡ್-ಎ ನಲ್ಲಿ ಬರುವ ಆಟಗಾರರಿಗೆ ವಾರ್ಷಿಕವಾಗಿ 5 ಕೋಟಿ ರೂಪಾಯಿಗಳನ್ನು ನೀಡುತ್ತದೆ, ಆದರೆ ಗ್ರೇಡ್-ಬಿ ಅಡಿಯಲ್ಲಿ ಬರುವ ಆಟಗಾರರಿಗೆ 3 ಕೋಟಿ ರೂ.ಗಳ ವೇತನವನ್ನು ನಿಗದಿಪಡಿಸಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ