IPL 2021: ರಾಜಸ್ಥಾನ ತಂಡಕ್ಕೆ ಬಿಗ್ ಶಾಕ್! ಈ ಮೂವರು ಸ್ಟಾರ್ ಆಟಗಾರರು ಪಂದ್ಯಾವಳಿಗೆ ಗೈರು

2ನೇ ಹಂತದ ಐಪಿಎಲ್ ಪಂದ್ಯಗಳು ಸೆಪ್ಟೆಂಬರ್ 19ರಿಂದ ಯುಎಇಯಲ್ಲಿ ನಡೆಯಲಿವೆ.

Written by - Puttaraj K Alur | Last Updated : Aug 22, 2021, 01:47 PM IST
  • 2ನೇ ಮಗುವಿನ ನಿರೀಕ್ಷೆಯಲ್ಲಿರುವ ಜೋಸ್ ಬಟ್ಲರ್ ಪತ್ನಿ ಜೊತೆಗಿರಲು ನಿರ್ಧರಿಸಿದ್ದಾರೆ
  • ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಇಂಗ್ಲೆಂಡ್ ವೇಗಿ ಜೊಫ್ರಾ ಆರ್ಚರ್ ಪಂದ್ಯಾವಳಿಗೆ ಅಲಭ್ಯ
  • ಇಂಗ್ಲೆಂಡ್ ಆಲ್ ರೌಂಡರ್ ಆಡುವ ಬಗ್ಗೆ ಇದುವರೆಗೂ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ
IPL 2021: ರಾಜಸ್ಥಾನ ತಂಡಕ್ಕೆ ಬಿಗ್ ಶಾಕ್! ಈ ಮೂವರು ಸ್ಟಾರ್ ಆಟಗಾರರು ಪಂದ್ಯಾವಳಿಗೆ ಗೈರು title=
ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ದೊಡ್ಡ ಆಘಾತ (Photo Courtesy: Zee News)

ನವದೆಹಲಿ: ರಾಜಸ್ಥಾನ್ ರಾಯಲ್ಸ್(Rajasthan Royals) ತಂಡಕ್ಕೆ ಆಘಾತದ ಮೇಲೆ ಆಘಾತ ಉಂಟಾಗುತ್ತಿದೆ. ತಂಡದ ಮೂವರು ಸ್ಟಾರ್ ಆಟಗಾರರು ಐಪಿಎಲ್ ಪಂದ್ಯಾವಳಿ(IPL 2021)ಯಲ್ಲಿ ಆಡುತ್ತಿಲ್ಲ. ಇದು ತಂಡದ ಮೇಲೆ ದೊಡ್ಡ ಪರಿಣಾಮ ಬೀರಲಿದೆ. ತಂಡದ ಸ್ಟಾರ್ ಬ್ಯಾಟ್ಸಮನ್ ಇಂಗ್ಲೆಂಡ್‌ನ ಜೋಸ್ ಬಟ್ಲರ್ ಉಳಿದ ಐಪಿಎಲ್ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎಂದು ಸ್ವತಃ ಫ್ರ್ಯಾಂಚೈಸ್ ಟ್ವೀಟ್ ಮಾಡಿ ಮಾಹಿತಿ ನೀಡಿದೆ.

ಜೋಸ್ ಮತ್ತು ಲೂಯಿಸ್ ಬಟ್ಲರ್ ದಂಪತಿ ಇನ್ನೊಂದು ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ಮಗುವಿಗೆ ಜನ್ಮ ನೀಡುತ್ತಿರುವ ಪತ್ನಿ ಜೊತೆಗಿರಲು ಬಯಸುತ್ತಿರುವುದಾಗಿ ಜೋಸ್ ಹೇಳಿದ್ದು, ಪಂದ್ಯಾವಳಿಗೆ ಅಲಭ್ಯರಾಗಲಿದ್ದಾರೆ. ಜೋಸ್ ಬಟ್ಲರ್(Jos Buttler) ದಂಪತಿಯ 2ನೇ ಮಗುವಿಗೆ ರಾಜಸ್ಥಾನ್ ರಾಯಲ್ಸ್ ಶುಭಾಶಯ ತಿಳಿಸಿದೆ.

ಇದನ್ನೂ ಓದಿ: Viral Vdieo: ಜೇಮ್ಸ್ ಆಂಡರ್ಸನ್ ಗೆ ವಿರಾಟ್ ಕೊಹ್ಲಿ, ಮೊಹಮ್ಮದ್ ಸಿರಾಜ್ ಏನು ಮಾಡಿದ್ದಾರೆ ನೋಡಿ..!

ಕೊರೊನಾ(CoronaVirus) ಸಾಂಕ್ರಾಮಿಕದ ಕಾರಣ 14ನೇ ಆವೃತ್ತಿಯ ಐಪಿಎಲ್ ಪಂದ್ಯಾವಳಿಯನ್ನು ಮೇ ತಿಂಗಳಿನಲ್ಲಿ ಸ್ಥಗಿತಗೊಳಿಸಲಾಗಿತ್ತು. ಇದೀಗ ಮತ್ತೆ 2ನೇ ಹಂತದ ಐಪಿಎಲ್ ಪಂದ್ಯಗಳು ಸೆಪ್ಟೆಂಬರ್ 19ರಿಂದ ಯುಎಇಯಲ್ಲಿ ನಡೆಯಲಿವೆ. ಈಗಾಗಲೇ ಎಲ್ಲಾ ತಂಡಗಳ ಆಟಗಾರರು ಯುಎಇಗೆ ತೆರಳುತ್ತಿದ್ದು, ಕೆಲವರು ಅಭ್ಯಾಸ ಪ್ರಾರಂಭಿಸಿದ್ದಾರೆ. ಮೊದಲ ಹಂತದಲ್ಲಿ ನಡೆದ 7 ಪಂದ್ಯಗಳಲ್ಲಿ ರಾಜಸ್ಥಾನ್ ತಂಡ 3 ಗೆಲುವು ದಾಖಲಿಸಿದ್ದು, 4 ಪಂದ್ಯಗಳಲ್ಲಿ ಸೋಲು ಕಂಡಿದೆ. ಪ್ರಸ್ತತ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ.

ಜೊಫ್ರಾ ಆರ್ಚರ್ ಕೂಡ ಔಟ್

ಜೋಸ್ ಬಟ್ಲರ್ ಜೊತೆಗೆ ತಂಡದ ಇನ್ನೊಬ್ಬ ಸ್ಟಾರ್ ಆಟಗಾರ, ಇಂಗ್ಲೆಂಡ್ ವೇಗಿ ಜೊಫ್ರಾ ಆರ್ಚರ್(Jofra Archer) ಕೂಡ ಐಪಿಎಲ್​ನ ಉಳಿದ ಪಂದ್ಯಗಳನ್ನು ಆಡುವುದಿಲ್ಲ. ಗಾಯಗಳಿಂದ ಬಳಲುತ್ತಿರುವ ಆರ್ಚರ್ ಗೆ ವಿಶ್ರಾಂತಿಯ ಅಗತ್ಯವಿದೆ. ಹೀಗಾಗಿ ಅವರು ಐಪಿಎಲ್‌ನಲ್ಲಿ ಆಡುವುದಿಲ್ಲ ಅಂತಾ ರಾಜಸ್ಥಾನ್ ತಂಡ ತಿಳಿಸಿದೆ.  ಆರ್ಚರ್ ಪ್ರಸ್ತುತ ಭಾರತದ ವಿರುದ್ಧ ಆಡುತ್ತಿರುವ ಟೆಸ್ಟ್ ಸರಣಿಯ ಭಾಗವಾಗಿದ್ದಾರೆ. ಆರ್ಚರ್ ಗಾಯದಿಂದ ಚೇತರಿಸಿಕೊಳ್ಳಲಿ, ಅವರ ಆರೋಗ್ಯ ಚೆನ್ನಾಗಿರಲಿ ಎಂದು ಫ್ರ್ಯಾಂಚೈಸಿ ಶುಭ ಹಾರೈಸಿದೆ.

ಬೆನ್ ಸ್ಟೋಕ್ಸ್ ಬಗ್ಗೆ ಅಧಿಕೃತ ಮಾಹಿತಿ ಇಲ್ಲ

ಈ ಎಲ್ಲ ಬೆಳವಣಿಗೆಗಳ ನಡುವೆ ರಾಜಸ್ಥಾನ್ ರಾಯಲ್ಸ್ ತಂಡದ ಮತ್ತೊಬ್ಬ ಸ್ಟಾರ್ ಆಟಗಾರ, ಇಂಗ್ಲೆಂಡ್ ಆಲ್ ರೌಂಡರ್ ಬೆನ್ ಸ್ಟೋಕ್ಸ್(Ben Stokes) ಆಡುವ ಬಗ್ಗೆ ಇದುವರೆಗೂ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ. ಪ್ರಸ್ತುತ ಮಾನಸಿಕ ಯೋಗಕ್ಷೇಮದ ಮೇಲೆ ಗಮನ ಕೇಂದ್ರೀಕರಿಸಿರುವ ಬೆನ್ ಸ್ಟೋಕ್ಸ್ ಕ್ರೀಡೆಯಿಂದ ಅನಿರ್ದಿಷ್ಟ ವಿರಾಮ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ಯು.ಎಸ್.ಓಪನ್ ಟೂರ್ನಿ ತಪ್ಪಿಸಿಕೊಳ್ಳಲಿರುವ ರಾಫೆಲ್ ನಡಾಲ್

ಜೋಸ್ ಬಟ್ಲರ್ ಬದಲಿಗೆ ಗ್ಲೆನ್ ಫಿಲಿಪ್ಸ್

ರಾಜಸ್ಥಾನ ರಾಯಲ್ಸ್ ಫ್ರ್ಯಾಂಚೈಸಿಯು ಬಟ್ಲರ್ ಬದಲಿಗೆ ನ್ಯೂಜಿಲ್ಯಾಂಡ್ ನ ಗ್ಲೆನ್ ಫಿಲಿಪ್ಸ್(Glenn Phillips)ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಫಿಲಿಪ್ಸ್ ಪ್ರಸ್ತುತ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಬಾರ್ಬಡೋಸ್ ರಾಯಲ್ಸ್ ಫ್ರ್ಯಾಂಚೈಸ್‌ನ ಭಾಗವಾಗಿದ್ದಾರೆ. 2017ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿಯೊಂದಿಗೆ ಫಿಲಿಪ್ಸ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದರು. 25 ಟಿ-20 ಪಂದ್ಯ ಆಡಿರುವ ಅವರು 149.70 ಸ್ಟ್ರೈಕ್ ರೇಟ್ ನೊಂದಿಗೆ 506 ರನ್ ಗಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News